ಕಾರ್ನಾಡು ಪೇಟೆಯ ಒಂದು ಕಿಲೋಮೀಟರ್ ರಸ್ತೆ ಡಾಮರೀಕರಣ

0
48


ವರದಿ ರಾಯಿ ರಾಜ ಕುಮಾರ
ಲೋಕೋಪಯೋಗಿ ಇಲಾಖೆಯಿಂದ ಬಿಡುಗಡೆಯಾದ ಒಂದು ಕೋಟಿ ರೂಪಾಯಿ ಅನುದಾನದಲ್ಲಿ ಕಾರ್ನಾಡು ಪೇಟೆ ಭಾಗದ ಒಂದು ಕಿಲೋಮೀಟರ್ ರಸ್ತೆಯ ಮರುಡಾಮರೀಕರಣಕ್ಕೆ ಶಿಲಾನ್ಯಾಸವನ್ನು ನೆರವೇರಿಸಲಾಯಿತು. ರಾಷ್ಟ್ರೀಯ ಹೆದ್ದಾರಿಯ ಈ ಭಾಗ ಬಹಳಷ್ಟು ದುರವಸ್ಥೆಯಲ್ಲಿರುವ ಕಾರಣದಿಂದಾಗಿ ಈ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆ ಒಪ್ಪಿಕೊಂಡಿರುತ್ತದೆ. ಶಾಸಕ ಉಮಾನಾಥ ಕೋಟ್ಯಾನ್ ಅಕ್ಟೋಬರ್ 27ರಂದು ಕಾಮಗಾರಿಯ ಶಿಲಾನ್ಯಾಸವನ್ನು ನೆರವೇರಿಸಿದರು.

LEAVE A REPLY

Please enter your comment!
Please enter your name here