ಅಲೈ. ಡಾ. ನಾಗರಾಜ ಭಾಯರಿಯವರಿಂದ ಉದ್ಘಾಟನೆ
ಉಡುಪಿ : ಅಸೋಸಿಯೇಷನ್ ಆಫ್ ಅಲಯನ್ಸ್ ಕ್ಲಬ್ ಇಂಟರ್ನ್ಯಾಷನಲ್ ಇದರ ಉಡುಪಿ ಜಿಲ್ಲೆ( 275 S) ಯ ಪ್ರಥಮ ಜಿಲ್ಲಾ ಸಮ್ಮೇಳನ “ವಿಜಯಲಕ್ಷ್ಮಿ” ಉಡುಪಿಯ ಪುರಭವನದಲ್ಲಿ ಫೆಬ್ರವರಿ 3 ರಂದು ನಡೆಯಿತು.
ಜಿಲ್ಲಾ ಗವರ್ನರ್ ಅಲೈ. ಸುನಿಲ್ ಸಾಲ್ಯಾನ್ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲೆಯ ಪ್ರಥಮ ಮಹಿಳೆ ಅಲೈ. ಡಾ. ಅನುಪಮಾ ಸುನಿಲ್ ಉಪಸ್ಥಿತರಿದ್ದರು.
ಸಂಸ್ಥೆಯ ಅಂತಾರಾಷ್ಟ್ರೀಯ ನಿರ್ದೇಶಕರಾದ ಅಲೈ. ಡಾ. ನಾಗರಾಜ ಭಾಯರಿ ಸಮ್ಮೇಳನವನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಅಂತಾರಾಷ್ಟ್ರೀಯ ಸಮಿತಿಯ ಸದಸ್ಯರಾದ ಅಲೈ. ಮುನಿಯಪ್ಪ ಮುಖ್ಯ ಅತಿಥಿಗಳಾಗಿದ್ದರು. ಸಮ್ಮೇಳನದಲ್ಲಿ ಮಾಜಿ ಜಿಲ್ಲಾ ಗವರ್ನರ್ ಮತ್ತು ಅಂತಾರಾಷ್ಟ್ರೀಯ ಸಮಿತಿಯ ಛೇರ್ಮನ್ ರಾದ ಅಲೈ. ಶ್ರೀಧರ್ ಡಿ. ಶೇಣವ ಮತ್ತು ಅಲಯನ್ಸ್ ಗೌರವ ಸಲಹೆಗಾರರಾದ ಡಾ. ತಲ್ಲೂರು ಶಿವರಾಮ ಶೆಟ್ಟಿ ಉಪಸ್ಥಿತರಿದ್ದರು.
ಅಲಯನ್ಸ್ ಕ್ಲಬ್ ಅಂಬಲಪಾಡಿ ಯವರ ಪ್ರಯೋಜಕತ್ವದಲ್ಲಿ ನಡೆದ ಈ ಸಮ್ಮೇಳನದಲ್ಲಿ ನಡೆದ ಚುನಾವಣೆಯಲ್ಲಿ 2026-27ನೇ ಸಾಲಿನ ಜಿಲ್ಲಾ ಗವರ್ನರ್ ರಾಗಿ ಅಲೈ. ಸುನಿಲ್ ಕುಮಾರ್ ಶೆಟ್ಟಿ ಯವರು ಆಯ್ಕೆಯಾದರು. ಪ್ರಥಮ ಉಪ ಜಿಲ್ಲಾ ಗವರ್ನರ್ ರಾಗಿ ಅಲೈ. ಕೆ. ಸುಧಾಕರ್ ಹೆಗ್ಡೆ ಯವರು ಆಯ್ಕೆಯಾದರು. ದ್ವಿತೀಯ ಉಪ ಜಿಲ್ಲಾ ಗವರ್ನರ್ ರಾಗಿ ಉಡುಪಿಯ ಖ್ಯಾತ ವೈದ್ಯ ಅಲೈ. ಡಾ. ಅಶೋಕ್ ಕುಮಾರ್ ವೈ. ಜಿ ಯವರು ಆಯ್ಕೆಯಾದರು.
ಸಮ್ಮೇಳನದ ಸಮಿತಿಯ ಅಧ್ಯಕ್ಷರಾದ ಅಲೈ. ಗೋಪಾಲ ಸಿ. ಬಂಗೇರ ಸ್ವಾಗತಿಸಿ, ಅಲೈ. ಕೆ. ಜಯರಾಮ ಆಚಾರ್ಯ ಸಾಲಿಗ್ರಾಮ ಹಾಗೂ ಅಲೈ. ಪ್ರತಾಪ್ ರವರು ಕಾರ್ಯಕ್ರಮ ನಿರೂಪಿಸಿದರು.

