ಬೆಳುವಾಯಿ ಮೈನ್ ಶಾಲೆಯಲ್ಲಿ : ಪರಿಸರ ಪ್ಲಾಸ್ಟಿಕ್ ಮತ್ತು ನಾವು ಕಾರ್ಯಗಾರ

0
34

ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಬೆಳುವಾಯಿ ಮೈನ್. ಇಲ್ಲಿ ಇಕೋ ಕ್ಲಬ್ ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ ಪರಿಸರ ಪ್ಲಾಸ್ಟಿಕ್ ಮತ್ತು ನಾವು ಎಂಬ ವಿಷಯದ ಬಗ್ಗೆ ಕಾರ್ಯಗಾರ ನಡೆಯಿತು.

ಜಾಗತಿಕ ತಾಪಮಾನ , ಕಸ ವಿಂಗಡನೆ, ಪ್ಲಾಸ್ಟಿಕ್ ನಿಷೇಧ ,ತ್ಯಾಜ್ಯ ಕಮ್ಮಿ ಮಾಡುವ 3R ಸೂತ್ರದ ಬಗ್ಗೆ ಸಂಪನ್ಮೂಲ ವ್ಯಕ್ತಿ ತ್ಯಾಜ್ಯ ನಿರ್ವಹಣಾ ತಜ್ಞರಾದ ಪ್ರಜ್ವಲ್ ಪಿ ಶೆಣೈ ಮಾಹಿತಿ ನೀಡಿದರು.

ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಏಕೋ ಕ್ಲಬ್ ನ ವತಿಯಿಂದ ನಡೆದ ಸ್ಪರ್ಧೆಗಳ ಬಹುಮಾನಗಳನ್ನು ವಿತರಿಸಲಾಯಿತು. ಶಾಲಾ ಮುಖ್ಯ ಶಿಕ್ಷಕಿ ರಾಜಶ್ರೀ ನಾಯಕ್ ಇಕೋ ಕ್ಲಬ್ ಸಂಯೋಜಕಿ ಸೀಮಾ ನಾಯಕ್ ಮತ್ತಿತರ ಶಿಕ್ಷಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here