ನಿಟಿಲಾಕ್ಷ ಸದಾಶಿವ ದೇವರ ಅಮ್ಟೂರಿನ ನೂತನ ಕಟ್ಟೆಯಲ್ಲಿ, ಅಶ್ವಥ ಉದ್ಯಾಪನೆ -ಕಟ್ಟೆಪೂಜೆ ಹಾಗೂ ಭಜನಾ ಸಂಕೀರ್ತನೆ

0
80

ಕಲ್ಲಡ್ಕ: ಶ್ರೀ ನಿಟಿಲಾಕ್ಷ ಲಕ್ಷದೀಪೋತ್ಸವ ಸಮಿತಿ ಹಾಗೂ ಹರೇಕೃಷ್ಣ ಭಕ್ತವೃಂದ ಅಮ್ಟೂರು ಇವರ ಸಾರಥ್ಯದಲ್ಲಿ ನವೀಕರಣಗೊಂಡ ನಿಟಿಲಾಕ್ಷ ಸದಾಶಿವ ದೇವರ ಅಮ್ಟೂರಿನ ನೂತನ ಕಟ್ಟೆಯಲ್ಲಿ ಅಶ್ವಥ ಉದ್ಯಾಪನೆ -ಕಟ್ಟೆಪೂಜೆ, ಹಾಗೂ ಭಜನಾ ಸಂಕೀರ್ತನೆ ನವೆಂಬರ್ 1 ರಂದು ಶನಿವಾರ ವಿಜೃಂಭಣೆಯಿಂದ ನೆರವೇರಿತು.

ಮದ್ಯಾಹ್ನ ಅಶ್ವತ ಕಟ್ಟೆ ಉದ್ಯಾಪನೆಗೊಂಡು ಮಹಾಪೂಜೆ ಆಗಿ ರಾತ್ರಿ ಶ್ರೀ ನಿಟಿಲಾಕ್ಷ ಸದಾಶಿವ ದೇವರ ಕಟ್ಟೆ ಪೂಜೆ ನೆರವೇರಿತು.
ಈ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಸೂರ್ಯೋದಯ ದಿಂದ ರಾತ್ರಿ 10:30 ರ ತನಕ ಭಜನಾ ಸಂಕೀರ್ತನ ಸೇವೆ ಜರುಗಿತು. ಸುಮಾರು 20 ಕ್ಕೂ ಅಧಿಕ ಭಜನಾ ತಂಡಗಳು ಭಾಗವಹಿಸಿ, ವಸುಧೈವ ಭಜನಾ ಕುಟುಂಬ ಅಖಂಡ ಭಾರತದ ಸರ್ವ ಭಜಕರೆಲ್ಲ ಸೇರಿ ಮಂಗಳೋತ್ಸವ ನೆರವೇರಿಸಿದರು.

ಹಲವು ಗಣ್ಯರು, ವಿಶೇಷ ಅತಿಥಿಗಳು,ಸಂಗೀತ ಕಲಾವಿದರು, ಭಜಕರೆಲ್ಲರೂ ಆಗಮಿಸಿ ಪ್ರಸಾದ ಸ್ವೀಕರಿಸಿ,
ಸುಮಾರು 1700 ಕ್ಕೂ ಮಿಕ್ಕಿ ಭಕ್ತರೆಲ್ಲರು ಅನ್ನ ಪ್ರಸಾದ ಸ್ವೀಕರಿಸಿದರು.
ಊರ – ಪರವೂರ ಮಹನೀಯರ, ದಾನಿಗಳ ನೆರವಿನಿಂದ ಕಾರ್ಯಕ್ರಮವು ಯಶಸ್ವಿಯಾಗಿ ಸಂಪನ್ನಗೊಂಡಿತು. ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದ ಪ್ರತಿಯೊಬ್ಬರಿಗೂ ಶ್ರೀ ನಿಟಿಲಾಕ್ಷ ಲಕ್ಷದೀಪೋತ್ಸವ ಸಮಿತಿ ಹಾಗೂ ಹರೇಕೃಷ್ಣ ಭಕ್ತವೃಂದ ಅಮ್ಟೂರು ಕೃತಜ್ಞತೆ ಸಲ್ಲಿಸಿದರು.

LEAVE A REPLY

Please enter your comment!
Please enter your name here