ಮೂಡುಬಿದಿರೆ: ಕಾಲಕ್ಕೆ ಅನುಗುಣವಾಗಿ ನೈಸರ್ಗಿಕವಾಗಿ ಆಹಾರ ಕ್ರಮಗಳನ್ನು ಅನುಸರಿಸಬೇಕೆನ್ನುವುದು ಜ್ಞಾನ ನಮ್ಮ ಹಿರಿಯರಿಗೆ ರಕ್ತಗತವಾಗಿ ಗೊತ್ತಿದೆ. ಹಿಂದೆ ನಮ್ಮ ಹಿರಿಯರು ಎಷ್ಟೇ ಕಷ್ಟ ಇದ್ದರೂ ಆರೋಗ್ಯಪೂರ್ಣ, ಗೌರವಯುತ ಬದುಕನ್ನು ಕಟ್ಟಿದ್ದರು. ಹಿರಿಯ ಹಾಕಿಕೊಟ್ಟ ಪರಂಪರೆಯ ನೆರಳಿನಲ್ಲಿ ನಾವಿಂದು ಬದುಕುತ್ತಿದ್ದೇವೆ ಎಂದು ಕೆಎಂಎಫ್ ನಿರ್ದೇಶಕ ಕೆ.ಪಿ ಸುಚರಿತ ಶೆಟ್ಟಿ ಹೇಳಿದರು.
ಕಡಂದಲೆ-ಪಾಲಡ್ಕ ಬಂಟರ ಸಂಘದ ವತಿಯಿಂದ ಕಡಂದಲೆ ಪಲ್ಕೆ ಶ್ರೀಗಣೇಶ ಸಭಾಭವನದಲ್ಲಿ ಭಾನುವಾರ ನಡೆದ ಆಟಿಡೊಂಜಿ ದಿನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಸಂಘದ ಅಧ್ಯಕ್ಷ ಸುದರ್ಶನ್ ಶೆಟ್ಟಿ ಕಡಂದಲೆಗುತ್ತು ಅಧ್ಯಕ್ಷತೆವಹಿಸಿದರು. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ರೂ.1 ಲಕ್ಷ ವಿದ್ಯಾರ್ಥಿ ವೇತನ ವಿತರಿಸಲಾಯಿತು.

ಸಂಘದ ಉಪಾಧ್ಯಕ್ಷ ವಿಶ್ವನಾಥ ಶೆಟ್ಟಿ, ಕೋಶಾಧಿಕಾರಿ ವಿವೇಕ್ ಶೆಟ್ಟಿ, ಕಾರ್ಯದರ್ಶಿ ಶಿವ ಪ್ರಸಾದ್, ಮಹಿಳಾ ಘಟಕದ ಅಧ್ಯಕ್ಷೆ ನಯನಾ ಸತೀಶ್ ಶೆಟ್ಟಿ ಉಪಸ್ಥಿತರಿದ್ದರು.
ಶರತ್ ಶೆಟ್ಟಿ ಹಾಗೂ ಸದಾಶಿವ ರೈ ನಿರೂಪಿಸಿದರು. ಜಯಶ್ರೀ ಶೆಟ್ಟಿ ವಿದ್ಯಾರ್ಥಿಗಳ ವಿವರ ವಾಚಿಸಿದರು.