ಮೈಸೂರಲ್ಲಿ ರಂಗೇರಿದ ಆಟಿಡೊಂಜಿ ದಿನ! ಸಾಂಸ್ಕೃತಿಕ ನಗರಿಯಲ್ಲಿ ತುಳುನಾಡ ತಿಂಡಿಗಳ ಘಮ ಘಮ..!

0
13

 ಮೈಸೂರು ಬಂಟ್ ಲೇಡೀಸ್ ವಿಂಗ್ ವತಿಯಿಂದ ನಡೆದ ಆಷಾಢ ಹಬ್ಬ

ಮೈಸೂರು: ತುಳುನಾಡಿನ ಜನರು ಎಲ್ಲೆಲ್ಲಾ ಇದ್ದಾರೋ ಅಲ್ಲೆಲ್ಲಾ ತಮ್ಮ ಆಚಾರ ವಿಚಾರಗಳನ್ನು ಪಾಲಿಸಿಕೊಂಡೇ ಬಂದಿದ್ದಾರೆ. ಈಗ ಸ್ವಲ್ಪದಿನದ ಹಿಂದಷ್ಟೇ ತುಳುನಾಡಿನಲ್ಲಿ ಆಟಿಯ ಸಂಭ್ರಮ ಮನೆಮಾಡಿತ್ತು. ಅದೇ ಸಂಭ್ರಮವನ್ನು ತಮ್ಮೂರಿಂದ ದೂರ ಇರುವ ತುಳುವರು ಈಗ ತಾವಿರುವ ಊರಲ್ಲಿ ಆಚರಿಸುತ್ತಿದ್ದಾರೆ. ಹೌದು ಮೈಸೂರು  ನಗರದಲ್ಲಿ ಮೈಸೂರು ಬಂಟ್ ಲೇಡೀಸ್ ವಿಂಗ್ ವತಿಯಿಂದ ನಡೆದ ಆಷಾಢ ಹಬ್ಬವನ್ನು ವಿಜೃಂಭಣೆಯಿಂದ  ಆಚರಣೆಯನ್ನು ಮಾಡಿದ್ದಾರೆ.

ಮಳೆಯ ಬಿಡುವಿಗೆ ಜೊತೆಯಾಗುತ್ತವೆ ಆಟೋಟಗಳು

ದಕ್ಷಿಣ ಕನ್ನಡದಲ್ಲಿ  ಆಷಾಢ ಮಾಸದಲ್ಲಿ ಬಿರುಸಿನ ಮಳೆ ಪ್ರಾರಂಭವಾಗುವ ಹಿನ್ನೆಲೆಯಲ್ಲಿ ಆ ಬಿಡುವಿನ ವೇಳೆಗೆ  ರೈತ ಪ್ರಧಾನ ಕುಟುಂಬಗಳು  ವಿಶ್ರಾಂತಿಯನ್ನು ಪಡೆಯುವ  ಹಬ್ಬವೇ  ಆಷಾಢದ ಹಬ್ಬವಾಗಿದೆ. ಈ ಹಬ್ಬದ ದಿನಗಳಲ್ಲಿ ಧಾನ್ಯಗಳು ಖಾಲಿಯಾಗಿರುತ್ತದೆ. ಅಂತಹ ಸಮಯದಲ್ಲಿ ಪ್ರಕೃತಿ ದೇವತೆ  ಮೊರೆ ಹೋಗುತ್ತಾರೆ. ಆಗ ಪ್ರಕೃತಿದತ್ತವಾಗಿ ಸಿಗುವ  ಸೊಪ್ಪುಗಳು, ಹಣ್ಣುಗಳು,  ತರಕಾರಿಗಳನ್ನು  ಬಳಸಿಕೊಂಡು  ವಿವಿಧ ರೀತಿಯ ಖಾದ್ಯಗಳನ್ನು ತಯಾರಿಸಿ  ಈ ಹಬ್ಬವನ್ನು  ಆಚರಣೆ ಮಾಡಿಕೊಂಡು ಬರುತ್ತಾರೆ.

ಆಟಿಯ ಸ್ಪೆಷಲ್‌ ತಿನಿಸುಗಳಿವು

ಹಬ್ಬದ ದಿನದ ಖಾದ್ಯಗಳಾದ ಮೂಡೆ, ಊರ್ಪೆಲ್ ಅರಿತ ನುಪ್ಪು, ಕುಡುತ್ ಸಾರ್, ಅರೆಪುದಡ್ಯ, ಪೇಲಕ್ಕಾಯಿದ ಗಟ್ಟಿ, ಬರೆದ ಇರೆ, ಉಪ್ಪಡ್ ಪಚ್ಚಿರ್ ಕಜಿವು, ಮಂಜೋಲ್ಡ್ ಇರೆಟ್ಟ ಗಟ್ಟಿ, ಪತ್ರೊಡೆ, ಪೇಲಕಾಯಿದ ಮುಲ್ಕ, ಮೆಂಟ ಪಾಯಸ, ಬೆಂಜನ್, ಉಪ್ಪಿಟ್ಟು, ಅಡ್ಯಕುಡ್ನೆ, ಪೆಲಕಾಯಿದ ಚಟ್ನಿ, ನುರ್ಗೆ ಸೊಪ್ಪುದ ಕಜಿಪು, ಕೆಂಡದಡ್ಯ, ನುರ್ಗೆ ಸೊಪ್ಪುದ ವಡೆ, ಕಣಿಲೆ ಪದಂಗಿ ಸೌತೆ ಗಸಿ, ತಿಮಿರೆದ ಚಟ್ನಿ ತಯಾರಿ ಮಾಡಿ ಸ್ಥಳದಲ್ಲೇ ತಯಾರಿಸಿ ಸಂಭ್ರಮಿಸಲಾಯಿತು.

ಮೈಸೂರಲ್ಲಿ ತುಳು ಭಾಷೆಯ ನಾಟಕ ಪ್ರದರ್ಶನ

ಆಟಿದೊಂಜಿದಿನ ನಾಟಕವನ್ನು ತುಳು ಭಾಷೆಯಲ್ಲಿ ಮಹಿಳೆಯರು ಪ್ರದರ್ಶನವನ್ನು ಮಾಡಿದರು. ಈ ನಾಟಕದಲ್ಲಿ ಹಬ್ಬದ ಆಚರಣೆಯನ್ನು ಮಾಡಲು ಕಾರಣವನ್ನು ಸಹ ತಿಳಿಸಿದರು, ಅದರ ಜೊತೆಗೆ ವಿವಿಧ ಆಟಗಳು ಕೂಡ ನಡೆದವು. ಹಾಗೂ ಭಕ್ತಿಗೀತೆ, ಭಾವಗೀತೆ, ಚಿತ್ರಗೀತೆಗಳನ್ನು ಸಹ ಮಹಿಳೆಯರು ಹಾಡಿದರು. ನೃತ್ಯಗಳನ್ನು ಸಹ ಪ್ರದರ್ಶನಗೊಳಿಸಿದರು. ಕೊನೆಯಲ್ಲಿ  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೈತರು ಬಳಸುವ  ಗುದ್ದಲಿ, ಹಾರೆ, ಕಲಕೊಟ್ಟು, ಹುಲ್ಲು ಇವುಗಳನ್ನು ಬಳಸಿಕೊಂಡು ಫ್ಯಾಶನ್ ಶೋ ಕೂಡ ಮಾಡಿದರು.

LEAVE A REPLY

Please enter your comment!
Please enter your name here