ಮಂಗಳೂರು : ಬಜಪೆ ಪೊರ್ಕೋಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕಾವೂರು ನಗರದ ವತಿಯಿಂದ ಆಟಿಡೊಂಜಿ ದಿನ ಕಾರ್ಯಕ್ರಮ ಭಾನುವಾರ ನಡೆಯಿತು.
ಫೊರ್ಕೋಡಿ ಶ್ರೀ ಸೋಮನೋಥೇಶ್ವರ ದೇವಸ್ಥಾನದ ಅರ್ಚಕ ವೆಂಕಟ್ರಮಣ ಭಟ್ ಕಾರ್ಯಕ್ರಮ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.ಸುಷ್ಮಾ ನಿತಿನ್ ಶೆಟ್ಟಿ ಪೊರ್ಕೋಡಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಮಹಿಳಾ ಸದಸ್ಯರು ಉಪಸ್ಥಿತರಿದ್ದರು.
ನಗರ ಸಹ ಸಂಘಟನಾ ಪ್ರಮುಖ್ ಮಲ್ಲಿಕಾ ಆಟಿ ತಿಂಗೊಳ್ದ ಮಹತ್ವ ತಿಳಿಸಿದರು. ಕಾವೂರು ನಗರದ ಸುಮಾರು 300 ಯೋಗ ಬಂಧುಗಳು, ಯೋಗೇತರ ಬಂಧುಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು ಬೆಳಗ್ಗೆ 9:00 ರಿಂದ ಭಜನೆ ಯೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು ಗ್ರಾಮೀಣ ಆಟಗಳನ್ನು ಮನೋಹರ,ಜಿವನ್, ನಿತೇಶ್, ಮುರಳಿ,ಗಂಗಾಧರ, ಸಂಜನಾ, ಭವ್ಯ ನಡೆಸಿಕೊಟ್ಟರು.ಸಂಸ್ಕಾರ ಭಾರತಿಯನ್ನು ದೀಪಾಲಿ ನಡೆಸಿಕೊಟ್ಟರು.ನೇತ್ರಾವತಿ ವಲಯ ಸಂಚಾಲಕ್ ಅಶೋಕ್,ಜಿಲ್ಲಾ ಸಂಚಾಲಕ್ ನಾರಾಯಣ, ಜಿಲ್ಲಾ ಸಂಯೋಜಕರು ಕನಕ ಅಮಿನ್ , ಜಿಲ್ಲಾ ಸಹ
ಸಂಚಾಲಕರು ಗಣೇಶ್,ಸುಬ್ರಹ್ಮಣ್ಯ, ಶ್ರೀಕಲಾ, ನಗರ ಸಂಚಾಲಕರು ಶ್ರೀನಿವಾಸ ಜೋಶಿ, ನಗರ ಸಹಸಂಚಾಲಕರು ಶ್ರೀನಿವಾಸ ಆನಂದ, ಜೀವನ್ ಪ್ರಸಾದ್ ಜಯರಾಮ್, ಹರ್ಷ ಉಮೇಶ್ ಮಾಧವ ಕೆ, ನಾಗೇಶ್, ವಿಕಾಸ್,ವರಪ್ರಸಾದ್,ಜನಾರ್ಧನ ಉಪಸ್ಥಿತರಿದ್ದರು. ಶುಭ ಕಾರ್ಯಕ್ರಮ ನಿರೂಪಿಸಿದರು.ಕಾರ್ಯಕ್ರಮ ಸಂಚಾಲಕ ಪದ್ಮನಾಭ ವಂದಿಸಿದರು.