ಓಂ ಶ್ರೀ ಮಂಜುನಾಥಯ ನಮಃ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಕಚೇರಿ ಬಜಪೆ ವ್ಯಾಪ್ತಿಯ ನೀರುಮಾರ್ಗ ವಲಯದಲ್ಲಿ ಇಂದು ಬೋಂಡಂತಿಲಾ ಬಿ, ಮಲ್ಲೂರು , ಉಳಾಯಿಬೆಟ್ಟು ಹಾಗೂ ಯುವವಾಹಿನಿ (ರಿ) ಪೆರ್ಮಂಕಿ ಘಟಕ ಇದರ ಸಹಯೋಗದೊಂದಿಗೆ ಆಟಿಡೊಂಜಿ ದಿನ ಕಾರ್ಯಕ್ರಮ ನಡೆಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ದಿನೇಶ್ ಕುಮಾರ್ ಬಜನೊಟ್ಟು ವಹಿಸಿದ್ದರು .ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿಗಳಾದ ಶ್ರೀಯುತ ಗಿರೀಶ್ ಕುಮಾರ್ ಎಂ ರವರು ಆಟಿ ತಿಂಗಳಿನ ಮಹತ್ವತೆಯ ಬಗ್ಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಯೋಜನೆಯ ಕಾರ್ಯಕ್ರಮಗಳ ಬಗ್ಗೆ ತಿಳಿಸುತ್ತಾ ಪ್ರಾಕೃತಿಕ ವಿಕೋಪದಲ್ಲಿ ಮನೆ ಹಾನಿಯಾಗಿರುವ ಎರಡು ಕುಟುಂಬಗಳನ್ನು ಗುರುತಿಸಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಂಜೂರು ಗೊಂಡ ಎರಡು ಕುಟುಂಬಗಳಿಗೆ ಮಂಜೂರಾತಿ ಡಿ ಡಿಯನ್ನು ಎಲ್ಲಾ ಗಣ್ಯರ ಉಪಸ್ಥಿತಿಯಲ್ಲಿ ಹಸ್ತಾಂತರ ಮಾಡಲಾಯಿತು ಕಾರ್ಯಕ್ರಮದಲ್ಲಿ ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷರು ಶ್ರೀ ಲೋಕೇಶ್ ಕೋಟ್ಯಾನ್ , ಉಳಾಯಿಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷರು ಶ್ರೀ ಹರಿಕೇಶೆಟ್ಟಿ ನಡಿಗುತ್ತು ,ನೀರುಮಾರ್ಗ ಗ್ರಾಮ ಪಂಚಾಯಿತಿ ಅಧ್ಯಕ್ಷರು ಶ್ರೀಧರ್ ಪೂಜಾರಿ ಚಿಕ್ಕಬೆಟ್ಟು ,ನೀರುಮಾರ್ಗ ಒಕ್ಕೂಟಗಳ ವಲಯ್ಯಾಧ್ಯಕ್ಷರು ಭಾಸ್ಕರ್ ಸುವರ್ಣ, ಗುರುಪುರ ಒಕ್ಕೂಟಗಳ ವಲಯ ಅಧ್ಯಕ್ಷರು ರಮೇಶ್ ಆಚಾರ್ಯ ,ವಲಯ ಮೇಲ್ವಿಚಾರಕರು ಶ್ರೀಮತಿ ಸುಜಾತ ಹಾಗೂ ವಲಯದ ಸೇವಾ ಪ್ರತಿನಿಧಿಗಳು ಮತ್ತು ಒಕ್ಕೂಟ ಪದಾಧಿಕಾರಿಗಳು ಉಪಸ್ಥಿತರಿದ್ದರು ಕಾರ್ಯಕ್ರಮದಲ್ಲಿ ಉಚಿತ ಹೃದಯ ತಪಾಸಣಾ ಶಿಬಿರ , ರಕ್ತದಾನ ಶಿಬಿರ ಆಟಿದ ತಿಂಡಿ ತಿನ್ನಸುಗಳ ಪ್ರದರ್ಶನ ಮತ್ತು ಸ್ಪರ್ಧೆಗಳನ್ನು ನಡೆಸಲಾಗಿತ್ತು.