
ಸಂಪ್ರದಾಯದ ಹಿಂದೆ ಗುಟ್ಟಾಗಿರುವ ವೈಜ್ಞಾನಿಕ ಅರಿವು : ಭುವನೇಶ್ ಪಚ್ಚಿನಡ್ಕ
ಬಂಟ್ವಾಳ : ಆಟಿ ತಿಂಗಳು ಶುದ್ಧತೆಯ, ಶಾಂತಿಯ ಹಾಗೂ ತಾಳ್ಮೆಯ ಸಮಯವಾಗಿದೆ. ಇದರ ಆಚರಣೆಗಳು ಶರೀರ ಶುದ್ಧಿಕರಣ, ಮನಸ್ಸು ಸ್ಥಿರಗೊಳಿಸುವಿಕೆ, ಹಾಗೂ ಪರಿಸರ ಸಂರಕ್ಷಣೆಯತ್ತ ಗಮನ ಸೆಳೆಯುತ್ತವೆ. ಪ್ರಾಚೀನ ಸಂಪ್ರದಾಯಗಳ ಹಿಂದೆ ಗುಟ್ಟಾಗಿರುವ ವೈಜ್ಞಾನಿಕ ಅರಿವು ಈ ಮೂಲಕ ತೋರುತ್ತದೆ ಎಂದು ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ ತಿಳಿಸಿದರು
ಯುವವಾಹಿನಿ ಬಂಟ್ವಾಳ ಘಟಕದ ವತಿಯಿಂದ ಭಾನುವಾರ ಬಿ.ಸಿ.ರೋಡಿನ ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ನಡೆದ ಆಟಿಡೊಂಜಿ ಕೂಟ ಕಾರ್ಯಕ್ರಮವನ್ನು
ನಾಗಬೆರ್ಮೆರೆನ ಪಾಡ್ದನದೊಂದಿಗೆ ಸ್ವಸ್ತಿಕವನ್ನು ಇಟ್ಟು, ದೀವಟಿಗೆ ಉರಿಸಿ ವಿಶಿಷ್ಟ ರೀತಿಯಲ್ಲಿ ಉದ್ಘಾಟಿಸಿದರು.
ಯುವವಾಹಿನಿ ಬಂಟ್ವಾಳ ಘಟಕದ ಅಧ್ಯಕ್ಷ ನಾಗೇಶ್ ಪೂಜಾರಿ ನೈಬೇಲು ಅಧ್ಯಕ್ಷತೆ ವಹಿಸಿದ್ದರು.ಕಾರ್ಯಕ್ರಮವನ್ನು ವಿಶಿಷ್ಟವಾದ ತುಳುನಾಡಿನ ಮನೆಯ ಮಾದರಿಯ ಸಭಾಮಂಟಪದಲ್ಲಿ ಆಯೋಜಿಸಲಾಗಿತ್ತು. ತುಳುನಾಡಿನ ಪಾರಂಪರಿಕ ಶೈಲಿಯಲ್ಲಿ ತಂಬಿಗೆಯಲ್ಲಿ ನೀರು, ಓಲೆಬೆಲ್ಲ, ವೀಳ್ಯೆದೆಲೆ-ಅಡಿಕೆ ನೀಡಿ ಅತಿಥಿಗಳನ್ನು ಬರಮಾಡಿಕೊಳ್ಳಲಾಯಿತು.
ಚೆನ್ನೆಮನೆ ಸ್ಪರ್ಧೆಯನ್ನು ನೆಲ್ಯಾಡಿ ಕಾಮದೇನು ಮಹಿಳಾ ಸಹಕಾರಿ ಸಂಘದ ಅಧ್ಯಕ್ಷೆ ಉಷಾ ಕಾಂಚನ್ ಉದ್ಘಾಟಿಸಿದರು. ಹಾಗೂ ನಲಿಪುಲೆಗಾ ತುಳು ಹಾಡು ನೃತ್ಯ ಸ್ಪರ್ಧೆಯನ್ನು ಉದ್ಯಮಿ ಲೋಕೇಶ್ ಪೂಜಾರಿ ಕಲ್ಲಡ್ಕ ಉದ್ಘಾಟಿಸಿದರು. ಸಾಹಿತಿ ಹಾಗೂ ಶಿಕ್ಷಕಿ ವಿಜಯಲಕ್ಷ್ಮಿ ಕಟೀಲು ಆಟಿದ ಮದಿಪು ನೀಡಿದರು.
ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಲೊಕೇಶ್ ಕೋಟ್ಯಾನ್ ಕೂಳೂರು, ಬಂಟ್ವಾಳ ಪುರಸಭೆಯ ಅಧ್ಯಕ್ಷ ವಾಸು ಪೂಜಾರಿ ಲೊರೆಟ್ಟೊ, ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಪೂಜಾರಿ ಮೆಲ್ಕಾರ್, ನಿಕಟಪೂರ್ವ ಅಧ್ಯಕ್ಷ ಸಂಜೀವ ಪೂಜಾರಿ ಗುರುಕೃಪಾ, ಜಿಲ್ಲಾ ಬಿಜೆಪಿ ಅಧ್ಯಕ್ಷ ಆರ್ ಚೆನ್ನಪ್ಪ ಕೋಟ್ಯಾನ್, ಯುವ ಜೆಡಿಎಸ್ ಜಿಲ್ಲಾಧ್ಯಕ್ಷ ಅಕ್ಷಿತ್ ಸುವರ್ಣ, ಬಂಟ್ವಾಳ ಕ್ಷೇತ್ರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುದರ್ಶನ್ ಪೂಜಾರಿ ಬಜ, ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.
ಬಂಟ್ವಾಳ ತಾಲೂಕು ಬಿಲ್ಲವ ಸಾಮಜ ಸೇವಾ ಸಂಘದ ಅಧ್ಯಕ್ಷರಾದ ಭುವನೇಶ್ ಪಚ್ಚಿನಡ್ಕ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ಪೂಜಾರಿ ಮೆಲ್ಕಾರ್, ಕಂಬಳ ಕ್ಷೇತ್ರದ ಸಾಧಕ ತ್ರಿಶಾಲ್ ಕೆ ಪೂಜಾರಿ, ದೈವಾರಾಧಕ ಸತೀಶ್ ಕಾಂಜಿರ್ ಕೋಡಿ, ನಾಟಿ ವೈದ್ಯ ಕೆ.ಈಶ್ವರ ಪೂಜಾರಿ ಇವರುಗಳಿಗೆ ಗೌರವ ಪುರಸ್ಕಾರ ಪ್ರದಾನ ಮಾಡಲಾಯಿತು.
ಶ್ರೀ ಕ್ಷೇತ್ರ ಗೆಜ್ಜೆಗಿರಿಯ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಸಂಜೀವ ಪೂಜಾರಿ ಬಿರ್ವ , ಸಜೀಪ ಮೂಡ ಈಶ್ವರ ಮಂಗಳ ಸದಾಶಿವ ದೇವಸ್ಥಾನದ ಅಧ್ಯಕ್ಷರಾದ ಗಿರೀಶ್ ಪೂಜಾರಿ ಪೆರ್ವ , ಪದವು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಅಜ್ಜಿಬೆಟ್ಟು ವಾಮದಪದವು ಇದರ ಅಧ್ಯಕ್ಷರಾದ ಕೌಡೊಡಿ ವಿವೇಕಾನಂದ ಪೂಜಾರಿ , ರಾಯಿ ಮಹಾಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷರಾದ ರಾಘವೇಂದ್ರ ರಾಯಿ ಇವರುಗಳನ್ನು ಅಭಿನಂದಿಸಲಾಯಿತು.
ಎಸ್ಸೆಸ್ಸೆಲ್ಸಿ ಸಾಧಕರಾದ ನಿರೀಕ್ಷಾ, ತನುಶ್ರೀ, ಸಾನಿಕ ಜೆ ಪೂಜಾರಿ ಕಿಶನ್ ರಾಜ್, ಸಮೀಕ್ಷಾ, ಶ್ರೀನಿಧಿ ಹಾಗೂ ಪಿಯುಸಿ ಸಾಧಕರಾದ ಅಂಕಿತ್ ಎಚ್ ಕೋಟ್ಯಾನ್ ಇವರುಗಳಿಗೆ ಅಕ್ಷರ ಪುರಸ್ಕಾರ ಪ್ರದಾನ ಮಾಡಲಾಯಿತು.
ಬಂಟ್ವಾಳ ತಾಲೂಕು ಬಿಲ್ಲವ ಸಾಮಜ ಸೇವಾ ಸಂಘದ ಅಧ್ಯಕ್ಷರಾದ ಭುವನೇಶ್ ಪಚ್ಚಿನಡ್ಕ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ಪೂಜಾರಿ ಮೆಲ್ಕಾರ್, ಕಂಬಳ ಕ್ಷೇತ್ರದ ಸಾಧಕ ತ್ರಿಶಾಲ್ ಕೆ ಪೂಜಾರಿ, ದೈವಾರಾಧಕ ಸತೀಶ್ ಕಾಂಜಿರ್ ಕೋಡಿ, ನಾಟಿ ವೈದ್ಯ ಕೆ.ಈಶ್ವರ ಪೂಜಾರಿ ಇವರುಗಳಿಗೆ ಗೌರವ ಪುರಸ್ಕಾರ ಪ್ರದಾನ ಮಾಡಲಾಯಿತು.
ಮನಸೆಳೆದ ತುಳು ಹಾಡು ನೃತ್ಯ ಸ್ಪರ್ಧೆ : ಬಿಲ್ಲವ ತುಳುವ ಐಸಿರಿ ನೃತ್ಯ ತಂಡ ಪ್ರಥಮ
ನಲಿಪುಲೆಗಾ ತುಳು ಹಾಡು ನೃತ್ಯ ಸ್ಪರ್ಧೆಯಲ್ಲಿ ಬಿಲ್ಲವ ತುಳುವ ಐಸಿರಿ ನೃತ್ಯ ತಂಡ ಬಂಟ್ವಾಳ ಪ್ರಥಮ, ಬೈದಶ್ರೀ ಬಿಲ್ಲವಾ ಸಂಘ ಬಡೆಕೊಟ್ಟು ಮಣಿನಾಲ್ಕೂರು ದ್ವೀತಿಯ ಹಾಗೂ ಬ್ರಹ್ಮಶ್ರೀ ನಾರಾಯಣ ಗುರು ವೇದಿಕೆ ಪುದು ನಾಟ್ಯಲಹರಿ ನೃತ್ಯ ತಂಡ ತೃತೀಯ ಬಹುಮಾನ ಪಡೆದರು. ಬಿಲ್ಲವ ಸಮಾಜ ಸೇವಾ ಸಂಘ ರಿ. ರಾಯಿಕೊಯಿಲ ಅರಳ ಸ್ವಾಭಿಮಾನಿ ಬಿಲ್ಲವ ಸಂಘ ನೇರಳಕಟ್ಟೆ, ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘ (ರಿ.) ಗಾಣದಪಡ್ಫು ಬಂಟ್ವಾಳ ತಾಲೂಕು ಬಿಲ್ಲವ ಮಹಿಳಾ ಸಮಿತಿ ಗಾಣದಪಡ್ಫು ಬಿಸಿರೋಡ್ ಬಿಲ್ಲವ ತುಳುವ ಐಸಿರಿ ನೃತ್ಯ ತಂಡ ಬಂಟ್ವಾಳ ತಂಡಗಳು ಪ್ರೋತ್ಸಾಹಕ ಬಹುಮಾನ ಪಡೆದರು.
ಚೆನ್ನೆಮನೆ ಸ್ಪರ್ಧೆಯಲ್ಲಿ ಯುವಜನತೆಯ ಸ್ಪೂರ್ತಿ ಒಟ್ಟು 52 ಸ್ಪರ್ಧಿಗಳು ಭಾಗವಹಿಸಿದ್ದ ಚೆನ್ನೆಮನೆ ಸ್ಪರ್ಧೆ ಆಕರ್ಷಕವಾಗಿ ನಡೆಯಿತು. ಪ್ರವೀಣ್ ಬೆಳ್ತಂಗಡಿ ಪ್ರಥಮ, ಅದ್ವೈತ್ ಜೆ ಪೂಜಾರಿ ದ್ವೀತಿಯ ಹಾಗೂ
ರತ್ನ ದರ್ಬೆ ತೃತೀಯ ಬಹುಮಾನ ಪಡೆದರು.
ಕ್ರೀಡಾ ನಿರ್ದೇಶಕ ಧನುಷ್ ಮದ್ವ ಚೆನ್ನೆಮನೆ ಸ್ಪರ್ಧೆಯನ್ನು ನಿರ್ವಹಿಸಿದರು, ಸಾಂಸ್ಕೃತಿಕ ನಿರ್ದೇಶಕ ಶೈಲೇಶ್ ಪೂಜಾರಿ ಕುಚ್ಚಿಗುಡ್ಡೆ ತುಳು ಹಾಡು ನೃತ್ಯ ಸ್ಪರ್ಧೆ ನಿರ್ವಹಿಸಿದರು, ಕಲೆ ಮತ್ತು ಸಾಹಿತ್ಯ ನಿರ್ದೇಶಕಿ ಮಲ್ಲಿಕಾ ಪಚ್ಚಿನಡ್ಕ ಆಟಿದ ಮದಿಪು ಕಾರ್ಯಕ್ರಮ ನಿರ್ವಹಿಸಿದರು, ವಿದ್ಯಾರ್ಥಿ ಸಂಘಟನಾ ನಿರ್ದೇಶಕಿ ಕುಶಿ ಎ ಪೂಜಾರಿ ಅಕ್ಷರ ಪುರಸ್ಕಾರ ನಿರ್ವಹಿಸಿದರು
ಮಾಜಿ ಅಧ್ಯಕ್ಷ ಹರೀಶ್ ಕೋಟ್ಯಾನ್ ಕುದನೆ ಪ್ರಸ್ತಾವನೆ ಮಾಡಿದರು, ಕಾರ್ಯಕ್ರಮದ ಸಂಚಾಲಕಿ ಶೈಲಜಾ ಹರೀಶ್ ಸ್ವಾಗತಿಸಿದರು, ಕಾರ್ಯದರ್ಶಿ ಮಧುಸೂದನ್ ಮದ್ವ ಹಾಗೂ ಜತೆ ಕಾರ್ಯದರ್ಶಿ ಲೋಹಿತ್ ಕನಪಾದೆ ಧನ್ಯವಾದ ನೀಡಿದರು. ಸಂಚಾಲಕರಾದ ನವೀನ್ ಕಾರಾಜೆ, ವಿಕ್ರಮ್ ಶಾಂತಿ, ಉಪಾಧ್ಯಕ್ಷ ಕಿರಣ್‌ರಾಜ್ ಪೂಂಜರೆಕೋಡಿ, ನಿಕೇಶ್ ಕೋಟ್ಯಾನ್, ಕೋಶಾಧಿಕಾರಿ ನವೀನ್ ಪೂಜಾರಿ, ವಿದ್ಯಾನಿಧಿ ನಿರ್ದೇಶಕ ಮಹೇಶ್ ಬೊಳ್ಳಾಯಿ ವೇದಿಕೆಯಲ್ಲಿ ಉಪಸ್ಥಿತರಿದ್ದರು, ಪ್ರಜ್ಞಾ ಓಡಿಲ್ನಾಳ ಕಾರ್ಯಕ್ರಮ ನಿರೂಪಿಸಿದರು