ಬೆಂಗಳೂರಿನಲ್ಲಿ ಆ‌ಟಿಎಕ್ ಕೊಲಿನ್ ಏರೋಸ್ಪೇಸ್ ಉತ್ಪಾದನ ಘಟಕ

0
40

ಬೆಂಗಳೂರು: ಆರ್‌ಟಿಎಕ್ಸ್‌ನ ಕೊಲಿನ್ಸ್ ಏರೋಸ್ಪೇಸ್ ಬೆಂಗಳೂರಿನಲ್ಲಿ ತನ್ನ ಹೊಸ ಉತ್ಪಾದನ ಘಟಕ ಆರಂಭಿಸಿದೆ. 26 ಎಕರೆ ವಿಸ್ತೀರ್ಣದ ಈ ಸೌಲಭ್ಯವು ಸುಧಾರಿತ ವೈಮಾನಿಕ ಉತ್ಪನ್ನಗಳ ಜಾಗತಿಕ ಉತ್ಪಾದಕನಾಗಿ ಅದರ ಸ್ಥಾನವನ್ನು ಸದೃಢಗೊಳಿಸಲಿದೆ. ಕೊಲಿನ್ಸ್ ಇಂಡಿಯಾ ಆಪರೇಷನ್ಸ್ ಸೆಂಟರ್ 70ಕ್ಕೂ ಹೆಚ್ಚಿ ಕೊಲಿನ್ಸ್ ಉತ್ಪಾದನಾಗಳ ಕಾರ್ಯಾಚರಣೆ, ಮತ್ತು ಉತ್ಪಾದಕತೆಯನ್ನು ಮುನ್ನಡೆಸಲಿದ್ದು, ವಿಶ್ವಾದ್ಯಂತ ಸೇವಾ ಪರಿವರ್ತನೆ ಮತ್ತು ಕಾರ್ಯಚರಣೆಯ ಶ್ರೇಷ್ಠತೆಯನ್ನು ಹೆಚ್ಚಿಸಲಿದೆ ಎಂದು ಕೊಲಿನ್ ಏರೋಸ್ಪೇಸ್ ನ ಆಪರೇಷನ್ ಹಿರಿಯ ಉಪಾಧ್ಯಕ್ಷ ರಾಯ್ ಗುಲಿಕ್ ಹೇಳಿದರು. ಕೊಲಿನ್ಸ್ ಏರೋಸ್ಪೇಸ್‌ನಲ್ಲಿ ಸುಮಾರು ಮೂರು ದಶಕಗಳಿಂದ ಹೂಡಿಕೆ ಮಾಡುತ್ತಿದ್ದು, ಈಗ ವಿಸ್ತರಿಸುತ್ತಿರುವತ್ತ ಎಂಜಿನಿಯರಿಂಗ್, ಡಿಜಿಟಲ್, ಉತ್ಪಾದನೆ ಕಾರ್ಯಾಚರಣೆಗಳು ಮತ್ತು ಪೂರೈಕೆಯಲ್ಲಿ 6,500ಕ್ಕೂ ಹೆಚ್ಚಿ ಉದ್ಯೋಗಿಗಳನ್ನು ಹೊಂದಿದಂತಾಗಿದೆ. ಈ ವರ್ಷದ ಪ್ರಾರಂಭದಲ್ಲಿ ಕೊಲಿನ್ಸ ಏರೋಸ್ಪೇಸ್ ಬೆಂಗಳೂರಿನಲಿ ಹೊಸ ಎಂಜಿನಿಯರಿಂಗ್, ಡೆವಲಪ್‌ಮೆಂಟ್ ಆ್ಯಂಡ್ ಸೆಂಟರ್‌ಗೆ ಹೂಡಿಕೆಯನ್ನು ಪ್ರಕಟಿಸಿದೆ.

LEAVE A REPLY

Please enter your comment!
Please enter your name here