ಇರುವೈಲು ಗ್ರಾಮದಲ್ಲಿ ಜುಗಾರಿ ಅಡ್ಡೆಗೆ ದಾಳಿ

0
108

ಮೂಡುಬಿದಿರೆ: ದಿನಾಂಕ 12/07/2025 ರಂದು ರಾತ್ರಿ 23.15 ಗಂಟೆಗೆ ಮೂಡಬಿದ್ರೆ ಪೊಲೀಸ್ ಠಾಣಾ ಪೊಲೀಸ್ ಇನ್ಸ್‌ಪೆಕ್ಟರ್ ಆದ ಸಂದೇಶ್ ಪಿ.ಜಿ ರವರು ರೌಂಡ್ಸ್ ಕರ್ತವ್ಯದಲ್ಲಿರುವಾಗ ಮೂಡಬಿದ್ರೆ ತಾಲೂಕು ಇರುವೈಲ್ ಗ್ರಾಮದ ಕೋರಿಬೆಟ್ಟು ಬಳಿ ಗುಡ್ಡೆಯಲ್ಲಿ ಕೆಲವು ವ್ಯಕ್ತಿಗಳು ಸೇರಿ ಹಣವನ್ನು ಪಣವಾಗಿಟ್ಟು ಇಸ್ಪೀಟ್ ಜುಗಾರಿ ನಡೆಸುತ್ತಿದ್ದಾರೆ ಎಂಬುದಾಗಿ ಬಾತ್ಮಿದಾರರಿಂದ ಖಚಿತ ಮಾಹಿತಿ ಬಂದ ಮೇರೆಗೆ ಸ್ಥಳಕ್ಕೆ ದಾಳಿ ನಡೆಸಿದ್ದಾರೆ. ಅಕ್ಟರ್, ಸಂತೋಷ್, ಪ್ರಶಾಂತ್, ಮಹಾಬಲ ಪೂಜಾರಿ, ಪ್ರಜ್ವಲ್, ಗಿರೀಶ್, ರಾಜೇಶ ಎಂಬವರುಗಳನ್ನು ವಶಕ್ಕೆ ಪಡೆದುಕೊಂಡು ಓಡಿ ತಪ್ಪಿಸಿಕೊಂಡವರ ಬಗ್ಗೆ ವಿಚಾರಿಸಲಾಗಿ ಅವರ ಹೆಸರು ,ಗಣೇಶ ಶ್ರೀನಾಥ್ , ದಿನೇಶ್ ಕೆಂಪುಗುಡ್ಡೆ, ಕೇಶವ ಯಾನೆ ಅಪ್ಪು, ಹಾಗೂ ಇನ್ನಿತರರು ಎಂಬುದಾಗಿ ತಿಳಿಸಿದ್ದು. ಆಪಾಧಿತರ ವಶದಲ್ಲಿದ್ದ ನಗದು ಹಣ 10,100/-, 52 ಇಸ್ಪೀಟ್ ಎಲೆಗಳು, 2 ಮೇಣದ ಬತ್ತಿ ಹಾಗೂ KA-09-EP-8948 ಮತ್ತು KA-19-EZ-1077 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದು ಆಪಾಧಿತರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲಾಗಿದೆ.

LEAVE A REPLY

Please enter your comment!
Please enter your name here