ಮೂಲ್ಕಿ : ಕಿನ್ನಿಗೋಳಿಯ ಯುಗಪುರುಷದ ನೇತೃತ್ವದಲ್ಲಿ ಕಿನ್ನಿಗೋಳಿಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಭ್ರಾಮರೀ ಮಹಿಳಾ ಸಮಾಜ ಮೆನ್ನಬೆಟ್ಟು, ಲಯನ್ಸ್ ಕ್ಲಬ್, ರೋಟರಿ ಕ್ಲಬ್, ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘ, ಯಕ್ಷಲಹರಿ, ವಿಜಯಾ ಕಲಾವಿದರು, ಕರ್ನಾಟಕ ಸ್ಟೇಟ್ ಟೈಲರ್‍ಸ್ ಅಸೋಸಿಯೇಶನ್ ಕಿನ್ನಿಗೋಳಿ ವಲಯ, ಸ್ವಾಮಿ ವಿವೇಕಾನಂದ ಸೇವಾ ಟ್ರಸ್ಟ್, ಸೌತ್ ಕೆನರಾ ಫೋಟೋಗ್ರಾಫರ್‍ಸ್ ಅಸೋಸಿಯೇಶನ್ ಮೂಲ್ಕಿ ವಲಯ ಹಾಗೂ ಲಯನ್ಸ್ ಕ್ಲಬ್ ಬಪ್ಪನಾಡು ಇನ್‌ಸ್ಪಾಯರ್ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಯುಗಪುರುಷ ಸಭಾಂಗಣದಲ್ಲಿ ದೀಪಾವಳಿ ಪ್ರಯುಕ್ತ ನಡೆದ ಗೂಡುದೀಪ ಸ್ಪರ್ಧೆಯಲ್ಲಿ ಕರಾವಳಿ ಜಿಲ್ಲೆಯ ವಿವಿಧ ಮೂಲೆಗಳಿಂದ ವಿಶೇಷವಾಗಿ ಗೂಡುದೀಪಗಳು ಆಗಮಿಸಿ ಸ್ಪರ್ಧೆಯ ಶೋಭೆಯನ್ನು ಬೆಳಗಿಸಿತ್ತು. ನೂರಕ್ಕೂ ಹೆಚ್ಚು ಸ್ಪರ್ಧಾಳುಗಳು ಭಾಗವಹಿಸಿ ತಮ್ಮ ಕೌಶಲ್ಯದ ಗೂಡುದೀಪವನ್ನು ಪ್ರದರ್ಶಿಸಿದರು.
ಸಾಂಪ್ರದಾಯಿಕ ಹಾಗೂ ಆಧುನಿಕ ವಿಭಾಗದಲ್ಲಿ ಸ್ಪರ್ಧೆ ನಡೆಯಿತು. ಸ್ಪರ್ಧಾ ವಿಜೇತರಿಗೆ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ಹಾಗೂ ಭಾಗವಹಿಸುವವರಿಗೆ ನಗದು ಹಾಗೂ ಪ್ರಮಾಣ ಪತ್ರ ವಿತರಿಸಲಾಯಿತು.
ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು, ಸಂಯೋಜಕ ಕಿನ್ನಿಗೋಳಿ ಯುಗಪುರುಷದ ಕೆ.ಭುವನಾಭಿರಾಮ ಉಡುಪ, ಕಿನ್ನಿಗೋಳಿ ರೋಟರಿ ಕ್ಲಬ್ ಅಧ್ಯಕ್ಷ ಸಾಯಿನಾಥ ಶೆಟ್ಟಿ ಶುಭ ಹಾರೈಸಿದರು.
ಫೋಟೋಗ್ರಾಫರ್ಸ್ ಅಸೋಸಿಯೇಶನ್ ಅಧ್ಯಕ್ಷ ಶ್ರೀನಿವಾಸ್ ಬಪ್ಪನಾಡು, ಬಪ್ಪನಾಡು ಇನ್ಸ್ ಪೈಯರ್ ಲಯನ್ಸ್ ಕ್ಲಬ್ ನ ಸ್ಥಾಪಕಾಧ್ಯಕ್ಷ ವೆಂಕಟೇಶ್ ಹೆಬ್ಬಾರ್, ಪ್ರತಿಭಾ ಹೆಬ್ಬಾರ್, ಪರಮೇಶ್ವರ ಶೆಟ್ಟಿಗಾರ್, ಸಾಧು ಅಂಚನ್ ಮಟ್ಟು, ಪ್ರಕಾಶ್ ಆಚಾರ್ಯ, ದೇವಿಪ್ರಸಾದ್ ಶೆಟ್ಟಿ, ಮೋಹನ್, ಕೆ.ಬಿ.ಸುರೇಶ್, ಮೀರಾ ಮೆನ್ನಬೆಟ್ಟು, ಜಗದೀಶ್ ಆಚಾರ್ಯ, ಶಂಕರ ಕೋಟ್ಯಾನ್,
ತೀರ್ಪುಗಾರರಾದ ಪದ್ಮನಾಭ ಸುರತ್ಕಲ್, ಪ್ರಕಾಶ್ ಸುವರ್ಣ ಮೂಲ್ಕಿ, ರಾಜೇಂದ್ರಕುಮಾರ್ ಮೂಲ್ಕಿ ಮತ್ತಿತರರು ಉಪಸ್ಥಿತರಿದ್ದರು.
ಶರತ್ ಶೆಟ್ಟಿ, ಸುಮಿತ್ ಕುಮಾರ್, ಅನುಷಾ ಕೊಡೆತ್ತೂರು ಸಹಕರಿಸಿದರು.
ಫಲಿತಾಂಶ : ಸಾಂಪ್ರದಾಯಿಕ ವಿಭಾಗ : ಲತಾ ಗುತ್ತಕಾಡು (ಪ್ರ), ದಿವಾಕರ ನಿಡ್ಡೋಡಿ (ದ್ವಿ), ಕಾಂತೇರಿ ಧೂಮಾವತಿ ದೈವಸ್ಥಾನ ಸುರತ್ಕಲ್ (ತೃ).
ಆಧುನಿಕ ವಿಭಾಗ : ದಯಾನಂದ ರಾಕೇಶ್ ಅಂಡ್ ಟೀಮ್ ಬಂಟ್ವಾಳ(ಪ್ರ), ಕಾಂತೇರಿ ಧೂಮಾವತಿ ದೈವಸ್ಥಾನ ಸುರತ್ಕಲ್(ದ್ವಿ), ಅಮಿತ್ ಕುಮಾರ್ ಸುರತ್ಕಲ್ (ತೃ), ಜನಾರ್ಧನ ನಿಡೋಡಿ (ಸಮಾಧಾನಕರ).