ಕಾರ್ಕಳ, ಅತ್ತೂರು 36ನೇ ವರ್ಷದ ಶ್ರೀ ಶಾರದೋತ್ಸವ ಅಕ್ಟೋಬರ್ 01-02, ರಂದು ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ದೊಂದಿಗೆ ಅತೀ ವಿಜೃಂಭಣೆಯಿಂದ ನಡೆಯಿತು. ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ನಿರಂತರ 25 ವರ್ಷಗಳಿಂದ ಅನ್ನ ಸಂತರ್ಪಣೆ ಯ ಸೇವೆಯನ್ನು ನಡೆಸಿಕೊಂಡು ಬಂದಿರುವ ಶ್ರೀಮತಿ ಹರಿಣಾ ಕೆ.ಕೋಟ್ಯಾನ್ ಮತ್ತು ಶ್ರೀಮತಿ ಮತ್ತು ಶ್ರೀ ಚೇತನ್ ಕೆ.ಕೋಟ್ಯಾನ್ ರವರನ್ನು ಸನ್ಮಾನಿಸಲಾಯಿತು. ಧಾರ್ಮಿಕ ಸಭೆಯ ಉಪನ್ಯಾಸಕರು ಶ್ರೀ ಎನ್.ಆರ್. ದಾಮೋದರ ಶರ್ಮ,ಅಧ್ಯಕ್ಷತೆ ಬೋಳಾ ಶ್ರೀನಿವಾಸ್ ಕಾಮತ್, ಧಾರ್ಮಿಕ ಸಭೆಯ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕಾರ್ಕಳ ಜನಪ್ರಿಯ ಶಾಸಕರು ಮಾಜಿ ಸಚಿವರು ವಿ.ಸುನಿಲ್ ಕುಮಾರ್ , ನೆಕ್ಲಾಜೆ ದೇವಸ್ಥಾನದ ಮೊಕ್ತೇಸರ ಶಿಲ್ಪಿ ರಾಮಚಂದ್ರ ಆಚಾರ್ಯ, ಶಾರದೊತ್ಸವ ಸಮಿತಿಯ ಅಧ್ಯಕ್ಷರು ಸತೀಶ್ ಆಚಾರ್ಯ ಅತ್ತೂರು, ಮಹಿಳಾ ಉಪಾಧ್ಯಕ್ಷರು ಜಯಂತಿ ಪೂಜಾರಿ, ಕೆ ನವೀನ್ ನಾಯಕ್ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರಾಸ್ತಾವಿಕ ಭಾಷಣ ಬಾಲಕೃಷ್ಣ ಹೆಗ್ಡೆ ಅತ್ತೂರು ಕಿಲ್ಲಬೆಟ್ಟು ಇವರು ಮಾತನಾಡಿದರು. ಸಮಿತಿಯ ಅಧ್ಯಕ್ಷರು,ಮತ್ತು ಸದಸ್ಯರು ಯುವಕ ಮಂಡಲ ಮತ್ತು ಯುವತಿ ಮಂಡಲ (ರಿ) ಅತ್ತೂರು.
ವರದಿ : ಅರುಣ್ ಕುಮಾರ್ ಭಟ್ ಕಾರ್ಕಳ