ಶ್ರೀ ವ್ಯಾಘ್ರ ಚಾಮುಂಡಿ ದೈವಸ್ಥಾನ ಮಾರಿಪರಪು ಪಾದೆ ಅತ್ತೂರು ತಾ.22 ಆದಿತ್ಯವಾರ ವಾರ್ಷಿಕ ನೇಮೋತ್ಸವ ಹಾಗೂ ಅನ್ನ ಸಂತರ್ಪಣೆ , ಹಾಗೂ ವ್ಯಾಘ್ರ ಚಾಮುಂಡಿ ದೈವದ ನೇಮೋತ್ಸವ ವಿಜೃಂಭಣೆಯಿಂದ ನಡೆಯಿತು. ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಭೇಟಿ ನೀಡಿ ಗಂಧ ಪ್ರಸಾದ ಸ್ವೀಕರಿಸಿದರು.

ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ್ ಕುಮಾರ್ ಶೆಟ್ಟಿ ವ್ಯಾಘ್ರ ಚಾಮುಂಡಿ ದೈವದ ಸಿರಿ ಸಿಂಗಾರದ ನೇಮೋತ್ಸವ ದಲ್ಲಿ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು. ವ್ಯವಸ್ಥಾಪಕರು ರಾಜೇಂದ್ರ ಕಡoಬ , ರಮೇಶ್ ಎಸ್ ಬೇರಜಲ ಗುತ್ತು ಬರ್ಕೆ ಮತ್ತು ಹತ್ತು ಸಮಸ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

