ಪುಣೆ: ತುಳುಕೂಟ (ರಿ.) ಪುಣೆ ಇದರ 26ನೇ ವಾರ್ಷಿಕೋತ್ಸವ ಸಮಾರಂಭವು ಆ. 15ರಂದು ಮಧ್ಯಾಹ್ನ 2-00 ಗಂಟೆಯಿಂದ ಪುಣೆಯ ಬಾಣೇರ್ ಓಣಿಮಜಲು ಜಗನ್ನಾಥ ಶೆಟ್ಟಿ ಸಾಂಸ್ಕೃತಿಕ ಬಂಟರ ಭವನ ಇಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುಣೆ ತುಳುಕೂಟದ ಅಧ್ಯಕ್ಷರಾಗಿರುವ ದಿನೇಶ್ ಶೆಟ್ಟಿ ಕಳತ್ತೂರು ಅಶ್ವಥಗುತ್ತು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಂಗಳೂರು ಅಖಿಲ ಭಾರತ ತುಳುಕೂಟದ ಮಾಜಿ ಅಧ್ಯಕ್ಷ ಧರ್ಮಪಾಲ ದೇವಾಡಿಗ ಅವರು ಭಾಗವಹಿಸಲಿದ್ದಾರೆ. ಗೌರವ ಅತಿಥಿಗಳಾಗಿ ಪುಣೆ ಬಂಟರ ಸಂಘದ ಅಧ್ಯಕ್ಷರಾದ ಅಜಿತ್ ಹೆಗ್ಡೆ ಕೆಂಜಾರುಗುತ್ತು, ಭದ್ರಾವತಿ ಬಂಟ್ಸ್ ಸಂಘದ ಅಧ್ಯಕ್ಷರಾದ ಲ. ಬಿ. ದಿವಾಕರ ಶೆಟ್ಟಿ , ಸಾಹಿತಿ ಹಾಗೂ ಸಂಶೋಧಕರಾಗಿರುವ ಮುದ್ದು ಮೂಡುಬೆಳ್ಳೆ ಭಾಗವಹಿಸಲಿದ್ದಾರೆ.
ಬಿರುದು ಪ್ರದಾನ -ಸನ್ಮಾನ
ಶಬರಿ ಇಂಡಸ್ಟ್ರಿಯಲ್ ಹಾಸ್ಪಿಟಿಲಿಟಿ ಸರ್ವಿಸಸ್ ಪ್ರೈ.ಲಿ.ನ ಸಿಎಂಡಿ, ಆರ್ಯಭಟ ಪ್ರಶಸ್ತಿ ಪುರಸ್ಕೃತ ಕೆ.ಕೆ. ಶೆಟ್ಟಿ ಅವರಿಗೆ ಬಿರುದು ಪ್ರದಾನ ನಡೆಯಲಿದೆ. ಸದಾನಂದ ಗ್ರೂಪ್ ಆಫ್ ಹೊಟೇಲ್ಸ್ ಪುಣೆ-ಮುಂಬಯಿ ಇದರ ಸಿಎಂಡಿ ಸದಾನಂದ ಕೆ. ಶೆಟ್ಟಿ ಅವರಿಗೆ ಗೌರವ ಸನ್ಮಾನ ನಡೆಯಲಿದ್ದು, ಆಪತ್‌ಬಾಂಧವ ಮಂಗಳೂರಿನ ಗಣೇಶ್ ಕುಲಾಲ್ ಅವರಿಗೆ ವಿಶೇಷ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು ಆಯೋಜಕರ ಪ್ರಕಟಣೆ ತಿಳಿಸಿದೆ.