ಆ.23 : ಹೆಬ್ರಿ ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ಶ್ರೀವಿಷ್ಣುಯಾಗ,ಲಕ್ಷ ತುಳಸಿ ಅರ್ಚನೆ ಹಾಗೂ ಅನ್ನಸಂತರ್ಪಣೆ

0
98

ಹೆಬ್ರಿ : ಶ್ರೀ ಅನಂತಪದ್ಮನಾಭ ದೇವಸ್ಥಾನ ಹೆಬ್ರಿಯಲ್ಲಿ ದಿನಾಂಕ 23.08.2025 ರ ಶನಿವಾರ ಬೆಳಿಗ್ಗೆ 9.00 ರಿಂದ ಶ್ರೀವಿಷ್ಣುಯಾಗ,ಲಕ್ಷ ತುಳಸಿ ಅರ್ಚನೆ ಹಾಗೂ ಅನ್ನ ಸಂತರ್ಪಣೆ ಜರುಗಲಿದೆ.

ಆ ಪ್ರಯುಕ್ತ ದಿನಾಂಕ 16.08.08 ರಿಂದ 23.08.2025 ರ ವರೆಗೆ ಪ್ರೊ.ಹೆರ್ಗ ಹರಿಪ್ರಸಾದ್ ಭಟ್, ಪ್ರಾಂಶುಪಾಲರು ಮುನಿಯಾಲು ಆಯುರ್ವೇದ ಮಹಾವಿದ್ಯಾಲಯ ಮಣಿಪಾಲ ಇವರಿಂದ ಪ್ರತಿದಿನ ಸಂಜೆ 5.00 ರಿಂದ 7.00 ರವರೆಗೆ ಶ್ರೀ ಪದ್ಮಪುರಾಣ – ಕಥಾ ಪ್ರವಚನ (ಭಾಗ 2) ನಡೆಯಲಿದೆ ಹಾಗೂ 23.08.2025 ರಂದು ಮಧ್ಯಾಹ್ನ 1.00 ರಿಂದ 3.00 ರ ವರೆಗೆ ಹೆಬ್ರಿ ಅನಂತಶ್ರೀ ಮಹಿಳಾ ಯಕ್ಷಗಾನ ಮಂಡಳಿಯ ಸದಸ್ಯೆಯರಿಂದ ಯಕ್ಷಗಾನ ಕಾರ್ಯಕ್ರಮ ನಡೆಯಲಿದೆ.

LEAVE A REPLY

Please enter your comment!
Please enter your name here