ವೇಣೂರು: ಕರಿಮಣೇಲು ಗ್ರಾಮದ ಶ್ರೀ ಕ್ಷೇತ್ರ ದೇಲಂಪುರಿ ಶ್ರೀ ಮಹಾದೇವ ಮಹಾಗಣಪತಿ ದೇವಸ್ಥಾನದಲ್ಲಿ ಆ. 27ರಿಂದ 29ರವರೆಗೆ ಸಾರ್ವಜನಿಕ ಶ್ರೀ ಗಣೇಶೋತ್ಸವವು ವೈಭವದಿಂದ ಜರಗಲಿದೆ.
ಕ್ಷೇತ್ರದ ಪ್ರಧಾನ ಅರ್ಚಕರಾದ ಚಂದ್ರಶೇಖರ ಅಸ್ರಣ್ಣರ ಪೌರೋಹಿತ್ಯದಲ್ಲಿ ಬೆಳಿಗ್ಗೆ ಗಣಹೋಮ, ರುದ್ರಾಭಿಷೇಕ, 10 ಗಂಟೆಗೆ ವಿಗ್ರಹ ಪ್ರತಿಷ್ಠೆ ಜರಗಲಿದೆ. ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ ಪಿ. ದೇಜಪ್ಪ ಶೆಟ್ಟಿ ಹಾಗೂ ಕಾರ್ಯದರ್ಶಿಯಾಗಿ ಸತೀಶ್ ಚಿಗುರು ಆಯ್ಕೆಗೊಂಡಿದ್ದು, ಕಾರ್ಯಕ್ರಮದ ಪೂರ್ವಸಿದ್ದತೆ ನಡೆಯುತ್ತಿದೆ. ಗೌರವ ಸಲಹೆಗಾರರಾಗಿ ಕೃಷ್ಣ ಕೆ. ಹಾಗೂ ವಿವಿಧ ಸಮಿತಿ ಪದಾಧಿಕಾರಿಗಳು ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸುತ್ತಿದ್ದು, ಭಕ್ತರನ್ನು ಆಮಂತ್ರಿಸಿದ್ದಾರೆ.


ವೇಣೂರು ಗಣೇಶ ಚತುರ್ಥಿ ಆಚರಣೆ ಸಂಭ್ರಮ ಶುಭಾಶಯಗಳು 🪔🪔🌸🌼🥀💮🌹🏵️🌻🕉️ ವಿನಾಯಕಾಯ ನಮಃ.