ಆ. 27 – 31: ದಾವಣಗೆರೆ ಜಿ.ಎಸ್.ಬಿ. ಸಮಾಜದ ಗಣೇಶೋತ್ಸವದ ಸುವರ್ಣ ಸಂಭ್ರಮ

0
22

ದಾವಣಗೆರೆ: ದಾವಣಗೆರೆಯ ಗೌಡ ಸಾರಸ್ವತ ಸಮಾಜದ ಆಶ್ರಯದಲ್ಲಿ ೧೯೭೬ನೇ ಇಸವಿಯಲ್ಲಿ ಪ್ರಾರಂಭವಾದ ಶ್ರೀ ಗಣೇಶೋತ್ಸವ ಆಗಸ್ಟ್ 27 ರಿಂದ 31 ರವರೆಗೆ ೫ ದಿನಗಳ ಕಾಲ ವೈಭವಪೂರ್ನವಾಗಿ ವಿಜೃಂಭಣೆಯಿಂದ ನಡೆಯಲಿದೆ ಎಂದು ಸಮಾಜದ ಅಧ್ಯಕ್ಷರಾದ ಅಮಿತಾ ಡಾ. ವೇಣುಗೋಪಾಲ್ ಪೈ ತಿಳಿಸಿದ್ದಾರೆ.
ಗೌಡ ಸಾರಸ್ವತ ಸಮಾಜದ ಬಂಧು-ಬಾಂಧವರು ಸಾರಥ್ಯದಲ್ಲಿ ನಡೆಯುವ ಈ ಅಪರೂಪದ ಆಧ್ಯಾತ್ಮಿಕ ಪರಂಪರೆಯ ಸಮಾರಂಭದಲ್ಲಿ ಮಹಿಳೆಯರಿಗೆ, ಪುರುಷರಿಗೆ, ಮಕ್ಕಳಿಗೆ ಆಟೋಟ ಸ್ಪರ್ಧೆ, ಮನೋರಂಜನೆ, ಮಹಿಳಾ ಮಂಡಳಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ ಯುವಕರಿಗೆ ಕ್ರಿಕೆಟ್ ಪಂದ್ಯಾವಳಿ, ಪುರುಷರಿಗೆ, ಮಹಿಳೆಯರಿಗೆ, ಮಕ್ಕಳಿಗೆ ಛದ್ಮವೇಷ ಸ್ಪರ್ಧೆ, ನಾಡಿನ ಖ್ಯಾತ ಗಾಯಕ ಬೆಂಗಳೂರಿನ ಶಂಕರ ಶಾನಭೋಗರವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.

ಆ. 31 ರಂದು ಭಾನುವಾರ ಶ್ರೀ ಗಣಪತಿ ವಿಸರ್ಜನಾ ದಿನದಂದು ಸಾಲಿಗ್ರಾಮ ಗಣೇಶ್ ಶೆಣೈಯವರಿಂದ ಬೆಳಿಗ್ಗೆ ೧೦ ಗಂಟೆಗೆ ದಾವಣಗೆರೆ ಐತಿಹಾಸಿಕ ಪರಂಪರೆಯ, ರಾಮಾಯಣ ಮಹಾಭಾರತದ ಕುರಿತು ಉಪನ್ಯಾಸ, ರಾತ್ರಿ ವಿಸರ್ಜನಾ ಪೂಜೆಯ ನಂತರ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ನಡೆಯಲಿದೆ ಎಂದು ಸಮಾಜದ ಪ್ರಧಾನ ಕಾರ್ಯದರ್ಶಿ ಕೆ.ವೆಂಕಟರಮಣಭಟ್ ತಿಳಿಸಿದ್ದಾರೆ.
ದಾವಣಗೆರೆಯ ಎಂ.ಸಿ.ಸಿ.`ಎ’ ಬ್ಲಾಕ್‌ನಲ್ಲಿರುವ ಶ್ರೀ ಸುಕೃತೀಂದ್ರ ಕಲಾ ಮಂದಿರದಲ್ಲಿ ಈ ಧಾರ್ಮಿಕ ಸಾಂಸ್ಕೃತಿಕ ಸಮಾರಂಭ ನಡೆಯಲಿದೆ ಎಂದು ಸಮಾಜದ ಖಜಾಂಚಿ ಆರ್.ವಿ.ಶೆಣೈ ತಿಳಿಸಿದ್ದಾರೆ.
ಗೌಡ ಸಾರಸ್ವತ ಸಮಾಜದ ದಾವಣಗೆರೆ ಜಿಲ್ಲೆ, ಚಿತ್ರದುರ್ಗ ಜಿಲ್ಲೆಯ ಪ್ರತಿಭಾವಂತ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ಹಮ್ಮಿಕೊಂಡಿದ್ದು ಹೆಚ್ಚಿನ ಮಾಹಿತಿಗೆ 9980206683, 9986209983 ಈ ಸಂಪರ್ಕಿಸಬಹುದು. ಇಂತಹ ವೈಭವಪೂರ್ಣ ಶ್ರೀ ಗಣೇಶೋತ್ಸವದ ಸುವರ್ಣ ಸಂಭ್ರಮ ಯಶಸ್ವಿಗೊಳಿಸಬೇಕೆಂದು ಗೌಡ ಸಾರಸ್ವತ ಸಮಾಜದ ಸರ್ವ ಸದಸ್ಯರು ಭಾಗವಹಿಸಬೇಕಾಗಿ ಸಮಾಜದ ನಿಕಟಪೂರ್ವ ಅಧ್ಯಕ್ಷರಾದ ಸಾಲಿಗ್ರಾಮ ಗಣೇಶ್ ಶೆಣೈ ವಿನಂತಿಸಿದ್ದಾರೆ.

LEAVE A REPLY

Please enter your comment!
Please enter your name here