ಮಂಗಳೂರು : ಕಂಬಳ ಕೋಣಗಳ ಯಜಮಾನ ಹಾಗೂ ದೈವಾರಾಧಕ ಕಡಂದಲೆ ಕಾಳು ಪಾಣಾರ ಅವರಿಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಚಾವಡಿ ತಮ್ಮನದ ಗೌರವ ಸಮರ್ಪಣೆಯ ಕಾರ್ಯಕ್ರಮ ಆಗಸ್ಟ್ 23ರಂದು ಸಂಜೆ 4.30 ಗಂಟೆಗೆ ಕಾರ್ಕಳ ತಾಲೂಕಿನ ಸಚ್ಚರಿಪೇಟೆಯ ಲಯನ್ಸ್ ಶಾಲೆಯಲ್ಲಿ ನಡೆಯಲಿದೆ.
ಮಣಿಪಾಲದ ಮಾಹೆ ಶಿಕ್ಷಣ ಸಂಸ್ಥೆಯ ಸಿಐಎಸ್‌ಡಿ ಮತ್ತು ಸಿ .ಕೆ .ಆರ್ .ಎಲ್ ಘಟಕ ಹಾಗೂ ಲಯನ್ಸ್ ಕ್ಲಬ್ ಮುಂಡ್ಕೂರು ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಚಾವಡಿ ತಮ್ಮನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತುಳು ಅಕಾಡೆಮಿಯ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ವಹಿಸುವರು. ದ.ಕ.ಜಿಲ್ಲಾ ಪಂಚಾಯತ್ ಹಾಗೂ ಕೆಎಂಎಫ್ ನ ಮಾಜಿ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ, ಮುಂಡ್ಕೂರ್ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಶ್ರೀಧರ ಸನಿಲ್, ಮುಂಡ್ಕೂರ್ ಲಯನ್ಸ್ ಕ್ಲಬ್ ಅಧ್ಯಕ್ಷ ಯಶವಂತ ಆಚಾರ್ಯ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಕಾರ್ಯಕ್ರಮದಲ್ಲಿ ತುಳುನಾಡ ಕಂಬಳದ ವಿದ್ವಾಂಸರು ಹಾಗೂ ಜಿಲ್ಲಾ ಕಂಬಳ ಸಮಿತಿಯ ಕಾರ್ಯಾಧ್ಯಕ್ಷ ಗುಣಪಾಲ ಕಡಂಬ, ಉಪಾಧ್ಯಕ್ಷ ಶ್ರೀಕಾಂತ ಭಟ್ ನಂದಳಿಕೆ, ಜಿಲ್ಲಾ ಕಂಬಳದ ಶಿಸ್ತು ಸಮಿತಿಯ ಅಧ್ಯಕ್ಷ ಭಾಸ್ಕರ ಎಸ್. ಕೋಟ್ಯಾನ್ ಉಪಸ್ಥಿತರಿರುವರು ಎಂದು ತುಳು ಅಕಾಡೆಮಿಯ ಪ್ರಕಟಣೆ ತಿಳಿಸಿದೆ.

