ತಾಳಿ ಕಟ್ಟುವ ಶುಭ ವೇಳೆ: ಮದುವೆ ಆಗಲ್ಲ ಎಂದ ವಧು..!

0
894

ಹಾಸನ: ತಾಳಿ‌ ಕಟ್ಟುವ ಸಮಯದಲ್ಲಿ ಹಸೆಮಣೆಯಿಂದ ವಧು ಹೊರ ನಡೆದಿರುವಂತಹ ಘಟನೆ ನಗರದ ಶ್ರೀಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ನಡೆದಿದೆ. ಬೇರೆ ಹುಡುಗನನ್ನು ಪ್ರೀತಿಸುತ್ತಿದ್ದೇನೆಂದು ವಧು ಮದುವೆ ನಿರಾಕರಿಸಿದ್ದಾರೆ. ಹಾಸನ ತಾಲೂಕಿನ ಬೂವನಹಳ್ಳಿ ಗ್ರಾಮದ ಯುವತಿ ಹಾಗೂ ಆಲೂರು ತಾಲೂಕಿನ ಯುವಕನ ಜೊತೆ ಮದುವೆ ನಿಶ್ಚಯವಾಗಿತ್ತು. ಮುಹೂರ್ತದ ವೇಳೆ ಪ್ರಿಯಕರನಿಂದ ಯುವತಿಗೆ ದೂರವಾಣಿ ಕರೆ ಬಂದಿದ್ದು, ತಕ್ಷಣವೇ ಮದುವೆ ಬೇಡ ಎಂದು ಯುವತಿ ನಿರಾಕರಿಸಿದ್ದಾರೆ. ಯುವತಿ ಹಠ ಮಾಡಿದ್ದಕ್ಕೆ ವರ ಕೂಡ ನನಗೂ ಈ ಮದುವೆ ಬೇಡ ಎಂದಿದ್ದಾರೆ.

LEAVE A REPLY

Please enter your comment!
Please enter your name here