ಡಿ. 28ರಂದು ಪುತ್ತೂರಿನಲ್ಲಿಲೇಖಕಿ ಸುಲೋಚನಾ ಪಿ.ಕೆ. ಇವರ “ಮೂಗಿಯ ಮನದೊಳು ” ಕನ್ನಡ ಕಾದಂಬರಿ ಲೋಕಾರ್ಪಣೆ

0
97

ವರದಿ÷ ಮಂದಾರ ರಾಜೇಶ್ ಭಟ್ ತುಳುನಾಡು ವಾರ್ತೆ

ತುಳುನಾಡು÷ ಎನ್. ಸುಕುಮಾರ ಗೌಡ ಶಿಕ್ಷಣ ಸಿದ್ದಾಂತಿವರ ಆಶೀರ್ವಾದದೊಂದಿಗೆ ಲೋಚನಾ ಪಿ. ಕೆ. ಇವರ ಮನನ ಶೋಧನೆಯಲ್ಲಿ ” ಮೂಗಿಯ ಮನದೊಳು “ಕನ್ನಡ ಕಾದಂಬರಿ ಲೋಕಾರ್ಪಣಾ ಸಮಾರಂಭ ಕಾರ್ಯಕ್ರಮ ದಿನಾಂಕ 28 ಡಿಸೆಂಬರ್ 2025 ಭಾನುವಾರ ಬೆಳಿಗ್ಗೆ 10:30 ಕ್ಕೆ ಮಕ್ಕಳ ಮಂಟಪ ದರ್ಬೆ ಪುತ್ತೂರು ಇಲ್ಲಿ ನೆರವೇರಿದೆ ಎಂದು ಲೇಖಕಿ ಸುಲೋಚನಾ ಪತ್ರಿಕೆಯೊಂದಿಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕ, ಸಹಕಾರ ನೀಡಲಿದ್ದು ಕಾರ್ಯಕ್ರಮದ ಅಧ್ಯಕ್ಷತೆ ಮತ್ತು ಲೋಕಾರ್ಪಣೆಯನ್ನು
ಡಾ. ತಾಳ್ತಜೆ ವಸಂತಕುಮಾರ ವಿಶ್ರಾಂತ ಮುಖ್ಯಸ್ಥರು, ಕನ್ನಡ ವಿಭಾಗ, ಮುಂಬಯಿ ವಿಶ್ವವಿದ್ಯಾಲಯ ಮಾಡಲಿದ್ದಾರೆ.

ವಿಶೇಷ ಅತಿಥಿಗಳಾಗಿ ಡಾ. ಜಿ. ಸಂತೋಷ ಕುಮಾರ್ ಕೆ.ಎ.ಎಸ್. ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ಧಿ ಕೋಶ ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ಎಸ್. ಬಿ. ಕೂಡಲಗಿ ಕೆ.ಎ.ಎಸ್.
ತಹಶೀಲ್ದಾರ್, ಪುತ್ತೂರು ಇರಲಿದ್ದು.

ಗೌರವ ಉಪಸ್ಥಿತಿಯಲ್ಲಿ ಉಮೇಶ್ ನಾಯಕ್ ಅಧ್ಯಕ್ಷರು, ಪುತ್ತೂರು ಕನ್ನಡ ಸಾಹಿತ್ಯ ಪರಿಷತ್ ರವೀಂದ್ರನಾಥ ಸಿರಿವರ ಸದಸ್ಯರು, ಕರ್ನಾಟಕ ನಾಟಕ ಅಕಾಡೆಮಿ ಹಾಗೂ ಚಲನಚಿತ್ರ ನಿರ್ದೇಶಕರು ಇರಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಅರವಿಂದ ಚೊಕ್ಕಾಡಿ ಸಾಹಿತಿಗಳು, ವಿಮರ್ಶಕರು, ಗೋಪಡ್ಕರ್ ಶಿಕ್ಷಣ ಚಿಂತಕರು, ಸ್ವರೂಪ ಅಧ್ಯಯನ ಕೇಂದ್ರ ಪಾರ್ವತಿಶ ಬಿಳಿದಾಳೆ, ಪತ್ರಕರ್ತರು, ಬೆಂಗಳೂರು ಆಗಮಿಸಲಿದ್ದಾರೆ.

ಕಾರ್ಯಕ್ರಮ ಸರಿಯಾದ ಸಮಯಕ್ಕೆ ಆರಂಭವಾಗಲಿದ್ದು ಸಾಹಿತ್ಯ ಆಸಕ್ತರು, ಕಾರ್ಯಕ್ರಮದ ಆಮಂತ್ರಿತರು, ಬಂಧು-ಬಳಗ, ಸಾರ್ವಜನಿಕರನ್ನು ಲೇಖಕಿ ಸುಲೋಚನಾ ಪಿ.ಕೆ. ಪ್ರೀತಿಪೂರ್ವಕವಾಗಿ ಆಮಂತ್ರಿಸಿದ್ದಾರೆ.

LEAVE A REPLY

Please enter your comment!
Please enter your name here