ಕಾಸರಗೋಡು :ಕನ್ನಡ ಭವನದ ಡಾ. ವಾಮನ್ ರಾವ್ ಬೇಕಲ್ ಪ್ರಯೋಜಕತ್ವದ “ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವ 2025ಪ್ರಯುಕ್ತ ನಡೆದ ಕಾಸರಗೋಡು ದಸರಾ ಕವಿಗೋಷ್ಠಿ ಯಲ್ಲಿ ತೀರ್ಥಹಳ್ಳಿಯ ಕವಿ ಶ್ರೇಷ್ಠ ಕೆ. ಎಸ್. ಮಂಜುನಾಥ್ ಇವರೀಗೆ ಕಾಸರಗೋಡು ದಸರಾ ಕವಿ ಸಾಧಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ದಸರಾ ಕವಿಗೋಷ್ಠಿ ಸಂಚಾಲಕರಾದ ಡಾ. ವಾಮನ್ ರಾವ್ ಬೇಕಲ್ -ಸಂದ್ಯಾ ರಾಣಿ ಟೀಚರ್ ಪ್ರಶಸ್ತಿ ನೀಡಿದರು. ವಿಶ್ವ ರಾಮಕ್ಷತ್ರಿಯ ಮಹಾಸಂಘ ಪದಾಧಿಕಾರಿ ರೇಖಾ ಸುದೇಶ್ ರಾವ್ ಮುಖ್ಯ ಅತಿಥಿಯಾಗಿದ್ದರು. ಪ್ರಸಿದ್ಧ ಕವಿ ಡಾ. ಸುರೇಶ್ ನೆಗಳಗುಳಿ ಅದ್ಯಕ್ಷತೆಯಲ್ಲಿ, ಪಾಂಗೋಡು ದುರ್ಗಾಪರಮೇಶ್ವರಿ ದೇವಸ್ಥಾನ ವೇದಿಕೆಯಲ್ಲಿ ಕಾರ್ಯಕ್ರಮ ನಡೆದಿತ್ತು