ಸತತ ಹಲವು ವರ್ಷಗಳಿಂದ ಪರಿಸರ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿರುವ ಸಂಸ್ಥೆ ಕಸ್ವಿ ಹಸಿರು ದಿಬ್ಬಣ ನಿರ್ಮಾಣದ ಹಾಗು ಡ್ರೀಮ್ ಪಿಕ್ಚರ್ಸ್ ಅರ್ಪಿಸುವ ಪ್ರಶಸ್ತಿ ವಿಜೇತ ಕಿರುಚಿತ್ರ ಹರಿದ್ವರ್ಣಕ್ಕೆ 25ನೇ ಪ್ರದರ್ಶನದ ಸಂಭ್ರಮ.

ಕುತೂಹಲಕಾರಿ ಅಂಶಗಳನ್ನು ಒಳಗೊಂಡ ಕಥೆಯಾಧಾರಿತ ಹಾಗೂ ಎಳೆಯ ಮನಸ್ಸುಗಳಿಗೆ ಪಾಠಗಳ ಮೂಲಕ ಪರಿಸರದ ಕಾಳಜಿಯ ಪಾಠ ಬಿತ್ತಿದರೆ ಮುಂದೆ ಪರಿಸರದ
ಉಳಿವಿಕೆಗಾಗಿ ನಾಂದಿ ಹಾಡುತ್ತದೆ ಅಲ್ಲದೆ ಎಲ್ಲಾ ಮನಸ್ಸುಗಳಿಗೆ ಪರಿಸರದ ಬಗ್ಗೆ ಚಿಂತನೆ ಮೂಡುವ ಕಥಾಹಂದರವುಳ್ಳ ಮತ್ತು ಸಾಮಾಜಿಕ ಸಂದೇಶವುಳ್ಳ ಕಿರುಚಿತ್ರ ಹರಿದ್ವರ್ಣ ಮಂಗಳೂರು ಮತ್ತು ಪುತ್ತೂರಿನ ಭಾರತ್ ಸಿನೆಮಾದಲ್ಲಿ ಮೂರು ಹೌಸ್ ಫುಲ್ ಪ್ರದರ್ಶನಗೊಂಡು ಜನಮೆಚ್ಚುಗೆ ಪಡೆದ ನಂತರ ಇದೀಗ ಶಾಲೆ ಮತ್ತು ಸಂಘ ಸಂಸ್ಥೆಯಲ್ಲಿ ಪ್ರದರ್ಶನ ಕಾಣುತ್ತಿದೆ. ಇದೀಗ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ 25 ಪ್ರದರ್ಶನ ಕಾಣಲಿದೆ.ಅದರಜೊತೆ SHREEVARA YOUTUBE STUDIO ಚಾನೆಲ್ ನಲ್ಲಿ ಬಿಡುಗಡೆಗೊಂಡು ಅತಿ ಹೆಚ್ಚು ವೀಕ್ಷಣೆ ಪಡೆದುಕೊಂಡು ಮೆಚ್ಚುಗೆ ವ್ಯಕ್ತವಾಗಿದೆ.
ಈ ಕಿರುಚಿತ್ರಕ್ಕೆ ಶ್ರೀಮತಿ ಶ್ರದ್ಧಾಕೇಶವ ರಾಮಕುಂಜ ಇವರು
ಬಂಡವಾಳ ಹೂಡಿದ್ದು , ಕಥೆ ಚಿತ್ರಕಥೆ ಸಂಭಾಷಣೆ ನಿರ್ದೇಶನ ಚೇತನ್ ಕೆ ವಿಟ್ಲ ನಿರ್ವಹಿಸಿದ್ದಾರೆ , ಉಳಿದಂತೆ ಅಚಲ್ ವಿಟ್ಲ ಇವರ ಸಹ ನಿರ್ದೇಶನವಿದ್ದು , ಸುರೇಶ್ ರಾಮಕುಂಜ ಹಾಗೂ ಮನ್ವಿತ್ ಕುಂಡಡ್ಕ ಇವರ ಛಾಯಾಗ್ರಹಣವಿದೆ . ಪ್ರಚಾರ ಕಲೆ ಚೇತನ್ ಆಚಾರ್ಯ
ಪೆರಿಂಜೆ ಇವರದ್ದಾಗಿದೆ, ಸಂಕಲನದ ಜವಾಬ್ದಾರಿಯನ್ನು ಬಾತುಕುಲಾಲ್ ನಿರ್ವಹಿಸಿದ್ದಾರೆ. ಸಹಬರವಣಿಗೆಯನ್ನು ಶ್ರೀಮತಿ ರಮ್ಯಚೇತನ್ ಹಾಗೂ ಶ್ರೀ ಕೃಷ್ಣ ಭಟ್ ಭ್ರಮರಾಂಬ ಸಾಹಿತ್ಯ ನೀಡಿದ್ದಾರೆ.
ಕಿರು ಚಿತ್ರದ ತಾರಾಂಗಣದಲ್ಲಿ
ಸೃಜನ್, ಪ್ರಜ್ವಲ್ ,ಪ್ರೀತಿ ,ಪಾವನಿ ಮನೋಜ್ ಸುವರ್ಣ , ರಾಜೇಶ್ ನರಿಕೊಂಬು, ಮನ್ವಿತಾ , ಶಶಿಕುಮಾರ್ , ಆಕಾಶ್ ವಿಟ್ಲ, ಅಚಲ್ ವಿಟ್ಲ ,ಶಶಾಂಕ್ ವಿಟ್ಲ, ಸುನಿಲ್ ಪೆರ್ನೆ , ನಂದನ್ ಕುಮಾರ್ , ಶ್ಯಾಮ್ ಕುಮಾರ್ , ತೃಷಾ ಯಾದವ್. ಹಾಗೆಯೇ ಹಿನ್ನೆಲೆ ಧ್ವನಿ ಖ್ಯಾತ ರೇಡಿಯೋ ನಿರೂಪಕರಾದ
RJ ಎರಾಲ್ ಧ್ವನಿ ನೀಡಿದ್ದಾರೆ. ಈ ಕಿರುಚಿತ್ರ SHREEVARA YOUTUBE STUDIO ಚಾನೆಲ್ ನಲ್ಲಿ ವೀಕ್ಷಿಸಬಹುದಾಗಿದೆ. ಎಲ್ಲರೂ ನೋಡಿ ಪ್ರೋತ್ಸಾಹಿಸಿ ಎಂದು ಚಿತ್ರತಂಡ ವಿನಂತಿಸಿಕೊಂಡಿದೆ.

