ಮಾಸ್ತಿಕಟ್ಟೆ ಶಾಲೆಯಲ್ಲಿ ಪರಿಸರ ಸಂರಕ್ಷಣೆಯ ಬಗ್ಗೆ ಅರಿವು, ವಿವಿಧ ಸಂಘಟನೆಗಳಿಂದ ಬಟ್ಟಲು, ಲೋಟ, ಟ್ರ್ಯಾಕ್ ಸೂಟ್ ವಿತರಣೆ

0
38

ಮೂಡುಬಿದಿರೆ : ಹಿರಿಯ ಪ್ರಾಥಮಿಕ ಶಾಲೆ ಮಾಸ್ತಿಕಟ್ಟೆ ಶಾಲೆಯಲ್ಲಿ ವನಮಹೋತ್ಸವ, ಪರಿಸರ ಸಂರಕ್ಷಣೆಯ ಬಗ್ಗೆ ಅರಿವು, ಮಕ್ಕಳ ಸುರಕ್ಷತೆಯ ಹಾಗೂ ಮೊಬೈಲ್ ಬಳಕೆಯ ದುಷ್ಮರಿಣಾಮಗಳ ಬಗ್ಗೆ ಅರಿವು ಕಾಯ೯ಕ್ರಮ ನಡೆಯಿತು.

ನೇತಾಜಿ ಬ್ರಿಗೇಡ್ ವತಿಯಿಂದ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಟ್ಟಲು ವಿತರಣೆ, ಪ್ರಸ್ತುತ ಸಾಲಿನಲ್ಲಿ ದಾಖಲಾದ ವಿದ್ಯಾರ್ಥಿಗಳಿಗೆ ಸರ್ವೋದಯ ಫ್ರೆಂಡ್ಸ್ ಕ್ಲಬ್ ವತಿಯಿಂದ ಉಚಿತ ಟ್ರ್ಯಾಕ್ ಸೂಟ್, ಶಾಲಾ ಎಸ್. ಡಿ. ಎಂ. ಸಿ ಸದಸ್ಯರಾದ ಸುಚಿತ್ರ ಹಾಗೂ ಸುಷ್ಮಾ ಹಾಗೂ ಹಳೆವಿದ್ಯಾರ್ಥಿಗಳೂ, ಪೋಷಕರುಗಳಾದ ಅಕ್ಷತಾ, ಇಂದಿರಾ, ಜಯಮಾಲಾ ಇವರಿಂದ ಉಚಿತ ಲೋಟ ವಿತರಣಾ ಕಾರ್ಯಕ್ರಮ ನಡೆಯಿತು.
ವೇದಿಕೆಯಲ್ಲಿ ಎಸ್. ಡಿ. ಎಂ.ಸಿ. ಅಧ್ಯಕ್ಷ ಅಶೋಕ್ ಆಚಾರ್ಯ, ಉಪಾಧ್ಯಕ್ಷೆ ಸುಚಿತ್ರ, ವಾರ್ಡ್ ಸದಸ್ಯ ಪ್ರಸಾದ್ ಕುಮಾರ್, ನೇತಾಜಿ ಬ್ರಿಗೇಡ್ ನ ಅಧ್ಯಕ್ಷ ದಿನೇಶ್ ಶೆಟ್ಟಿ, ಸಂಚಾಲಕ ರಾಹುಲ್, ಸಹ ಸಂಚಾಲಕ ಸೆಲ್ವ ಕುಮಾರ್ ಮಾಸ್ತಿಕಟ್ಟೆ, ಸಂಧ್ಯಾ ಭಟ್, ಯಶವಂತ್ (ಪಕ್ಕು ) ಮಾಸ್ತಿಕಟ್ಟೆ, ಶರತ್ ಕುಂದರ್, ಅಭಿಷೇಕ್ ಸಾಲ್ಯಾನ್, ಸರ್ವೋದಯ ಫ್ರೆಂಡ್ಸ್ ಕ್ಲಬ್ ಮೂಡುಬಿದಿರೆ ಇದರ ಅಧ್ಯಕ್ಷ ಗುರುಪ್ರಸಾದ್, ಸದಸ್ಯರಾದ ಸುಚಿತ್ರಾ, ಕೌಶಿಕ್, ದಿವ್ಯವರ್ಮ, ಪ್ರಕಾಶ್ ಕುಂದರ್, ಲಿಖಿತ್, ಮೂಡುಬಿದಿರೆ ಪೊಲೀಸ್ ಠಾಣೆಯ ಎಸ್ ಐ ಕೃಷ್ಣಪ್ಪ, ಉಪ ವಲಯಾರಣ್ಯಾಧಿಕಾರಿ ಗುರುಮೂರ್ತಿ, ಬೀಟ್ ಫಾರೆಸ್ಟರ್ ಶಂಕರ್, ಶಾಲಾ ಮುಖ್ಯ ಶಿಕ್ಷಕಿ ಸೇಸಮ್ಮ ಇವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here