ಮೂಡುಬಿದಿರೆ: ಯವವಾಹಿನಿ ಮೂಡುಬಿದಿರೆ ಘಟಕದ ವತಿಯಿಂದ ಜು. 27ರಂದು ಇಲ್ಲಿನ ಬ್ರಹ್ಮಶ್ರೀ ಗುರುನಾರಾಯಣಸ್ವಾಮಿ ಸೇವಾ ಸಂಘದ ಅಮೃತ ಸಭಾಭವನದಲ್ಲಿ ಶ್ರೀ ನಾರಾಯಣ ಗುರುಗಳ ಜೀವನ ಸಂದೇಶ ಗೋಷ್ಠಿ, ವಿದ್ಯಾರ್ಥಿ ವೇತನ ವಿತರಣೆ, ಸನ್ಮಾನ. ಯುವಸಿರಿ ಪುರಸ್ಕಾರವನ್ನು ಒಳಗೊಂಡ ಆರಿವು 2025 ಕಾರ್ಯಕ್ರಮವು ಜರಗಿತು. ಘಟಕದ ಅಧ್ಯಕ್ಷ ಮುರಳೀಧರ ಕೋಟ್ಯಾನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಶ್ರೀಮತಿ ಭಾನುಮತಿ ಶೀನಪ್ಪ ಅವರು ಉದ್ಘಾಟಿಸಿ ಶುಭ ಹಾರೈಸಿದರು. ಆಳ್ವಾಸ್ ಪುನರ್ಜನ್ಯ ಚಿಕಿತ್ಸಾ ಕೇಂದ್ರದ ಆಪ್ತ ಸಮಾಲೋಚಕ ಲೋಹಿತ್ ಕೆ. ಬಂಟ್ವಾಳ ಗುರು ಸಂದೇಶ ನೀಡಿದರು. ಶಾಸಕ ಉಮಾನಾಥ ಎ. ಕೋಟ್ಯಾನ್, ಯುವವಾಹಿನಿ (ರಿ.) ಕೇಂದ್ರ ಸಮಿತಿ ಅಧ್ಯಕ್ಷ ಲೋಕೇಶ್ ಕೋಟ್ಯಾನ್, ಖ್ಯಾತ ಮಕ್ಕಳ ತಜ್ಞ ಡಾ. ಮುರಳಿಕೃಷ್ಣ ಆರ್. ವಿ., ಬ್ರಹ್ಮಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ, ನ್ಯಾಯವಾದಿ ಸುರೇಶ್ ಕೆ. ಪೂಜಾರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಯುವವಾಹಿನಿ ಯುವಸ್ಪಂದನ ಸೇವಾ ಯೋಜನೆಯ ಅಧ್ಯಕ್ಷ ನವಾನಂದ ಯುವವಾಹಿನಿಯ ಶ್ರೀ ನಾರಾಯಣ ಗುರು ತತ್ವ ಪ್ರಚಾರ ನಿರ್ದೇಶಕ ಉಮೇಶ್ ಕೋಟ್ಯಾನ್ ಉಪಸ್ಥಿತರಿದ್ದರು. ಪಿಯುಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆದ ನಾಲ್ವರು ಹಾಗೂ ಎಸ್ಸೆಸ್ಸೆಲ್ಸಿಯಲ್ಲಿ ಅತ್ಯಧಿಕ ಅಂಕ ಪಡೆದ ಇಬ್ಬರು ವಿದ್ಯಾರ್ಥಿಗಳನ್ನು ಗೌರವಧನ ಸಹಿತ ಸನ್ಮಾನಿಸಲಾಯಿತು. ಎಸ್ಸೆಸ್ಸೆಲ್ಸಿಯಲ್ಲಿ ಶೇ. 90ಕ್ಕಿಂತ ಹೆಚ್ಚು ಅಂಕಪಡೆದ 47 ವಿದ್ಯಾರ್ಥಿಗಳಿಗೆ ಗೌರವಧನ ಸಹಿತ ಯುವಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. 33 ಅರ್ಹ ವಿದ್ಯಾರ್ಥಿಗಳಿಗೆ ಒಟ್ಟು ರೂ. 1.50 ಲಕ್ಷ ಗೌರವಧನ ವಿತರಿಸಲಾಯಿತು. ಸಭಾ ಕಾರ್ಯಕ್ರಮದ ಕೊನೆಗೆ ಆಟಿ ತಿಂಗಳ ವಿವಿಧ ಬಗೆಯ ಸವಿಭೋಜನ ನಡೆಯಿತು. ನವಾನಂದ ಸ್ವಾಗತಿಸಿದರು.
ಶಿವಾನಿ ಪ್ರಾರ್ಥನೆಗೈದರು. ದಯಾನಂದ ಮತ್ತು ಶಿವಾನಿ ನಿರೂಪಿಸಿದ ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ವಿನೀತ್ ಸುವರ್ಣ ವಂದಿಸಿದರು. ಕೋಶಾಧಿಕಾರಿ ಕು. ಅಕ್ಷತಾ ಮಾರೂರು ಹಾಗೂ ಇತರ ಪದಾಧಿಕಾರಿಗಳು ಸಹಕರಿಸಿದರು.