‘ಭರೋಸೆ ಕಾ ಅಡ್ರೆಸ್’ ಯೋಜನೆ ಮೂಲಕ ವಿಮಾ ಜಾಲ ವಿಸ್ತರಣೆ
ವಿಮಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಆಕ್ಸಿಸ್ ಮ್ಯಾಕ್ಸ್ ಲೈಫ್ ಇನ್ಶೂರೆನ್ಸ್ ಲಿಮಿಟೆಡ್ (ಹಿಂದಿನ ಮ್ಯಾಕ್ಸ್ ಲೈಫ್ ಇನ್ಶೂರೆನ್ಸ್) ಸಂಸ್ಥೆಯು ದೇಶದಾದ್ಯಂತ ತನ್ನ ವಿತರಣಾ ಜಾಲವನ್ನು ಬಲಪಡಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇರಿಸಿದೆ. ‘ಭರೋಸೆ ಕಾ ಅಡ್ರೆಸ್’ (ನಂಬಿಕೆಯ ವಿಳಾಸ) ಎಂಬ ಯೋಜನೆಯಡಿಯಲ್ಲಿ ಎರಡನೇ ಹಂತದ ಮತ್ತು ಮೂರನೇ ಹಂತದ ನಗರಗಳತ್ತ ಗಮನಹರಿಸಿರುವ ಕಂಪನಿಯು ಒಟ್ಟು 50 ಹೊಸ ಏಜೆನ್ಸಿ ಕಚೇರಿಗಳನ್ನು ಶುಕ್ರವಾರ ಉದ್ಘಾಟಿಸಿದೆ.
ಪ್ರಮುಖವಾಗಿ ಕಂಪನಿಯು ಬೆಂಗಳೂರು, ನವದೆಹಲಿ ಎನ್‌ಸಿಆರ್, ಉತ್ತರ ಪ್ರದೇಶ, ಒಡಿಶಾ, ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ತನ್ನ ಉಪಸ್ಥಿತಿಯನ್ನು ಹೆಚ್ಚಿಸಿಕೊಂಡಿದೆ. ಈ ಯೋಜನೆಯು ಐ ಆರ್ ಡಿ ಎ ಐನ ‘2047ರ ವೇಳೆಗೆ ಎಲ್ಲರಿಗೂ ವಿಮೆ’ ಎಂಬ ಗುರಿಯನ್ನು ಸಾಧಿಸಲು ವೇಗವರ್ಧಕವಾಗಿ ಕಾರ್ಯನಿರ್ವಹಿಸಲಿದೆ. ಜೀವನ ವಿಮೆಯನ್ನು ಕೇವಲ ಮಾರಾಟದ ಉತ್ಪನ್ನವನ್ನಾಗಿಸದೆ, ತಳಮಟ್ಟದ ಅವಶ್ಯಕತೆಯನ್ನಾಗಿ ಪರಿವರ್ತಿಸುವುದು ಇದರ ಉದ್ದೇಶವಾಗಿದೆ. ಭಾರತದ ಬೆಳವಣಿಗೆ ಹೊಂದುತ್ತಿರುವ ಪ್ರದೇಶಗಳಲ್ಲಿ ತನ್ನ ಏಜೆನ್ಸಿ ಕಚೇರಿಗಳನ್ನು ಆರಂಭಿಸುವ ಮೂಲಕ, ಆಕ್ಸಿಸ್ ಮ್ಯಾಕ್ಸ್ ಲೈಫ್ ಗ್ರಾಹಕರಿಗೆ ಆರ್ಥಿಕ ಭದ್ರತೆ ಒದಗಿಸುವ ಮಹತ್ವದ ಕಾರ್ಯ ಮಾಡಲಿದೆ.
ಈ ಕುರಿತು ಆಕ್ಸಿಸ್ ಮ್ಯಾಕ್ಸ್ ಲೈಫ್ ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುಮಿತ್ ಮದನ್ ಮಾತನಾಡಿ, “ಭಾರತದ ಪ್ರತಿಯೊಂದು ಮೂಲೆಗೂ ಆರ್ಥಿಕ ಭದ್ರತೆ ಹೊಂದುವ ವ್ಯವಸ್ಥೆ ಒದಗುವಂತೆ ಮಾಡುವುದು ನಮ್ಮ ಉದ್ದೇಶವಾಗಿದೆ. ವಿಶೇಷವಾಗಿ ವಿಮಾ ಸೌಲಭ್ಯಗಳಿಂದ ವಂಚಿತವಾಗಿರುವ ಪ್ರದೇಶಗಳಲ್ಲಿ ನಮ್ಮ ಉಪಸ್ಥಿತಿಯನ್ನು ನಾವು ಭದ್ರಪಡಿಸುತ್ತಿದ್ದೇವೆ. ಕೇವಲ ವಿಮೆ ಮಾರಾಟ ಮಾಡುವುದಲ್ಲದೆ, ಸ್ಥಳೀಯ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ತರಬೇತಿ ನೀಡುವ ಮೂಲಕ ಆ ಸಮುದಾಯಗಳನ್ನು ಸಬಲೀಕರಣಗೊಳಿಸುತ್ತಿದ್ದೇವೆ. ಈ 50 ಹೊಸ ಕಚೇರಿಗಳು ಭಾರತದ ಆರ್ಥಿಕ ಭದ್ರತೆ ಅಗತ್ಯತೆಗಳಿಗೆ ನೇರವಾಗಿ ಸ್ಪಂದಿಸಲಿವೆ. ಸ್ಥಳೀಯ ಸಲಹೆಗಾರರ ಸಮೂಹವನ್ನು ಬೆಳೆಸುವ ಮೂಲಕ ನಾವು ‘ಭರೋಸೆ ಕಾ ಅಡ್ರೆಸ್’ (ನಂಬಿಕೆಯ ವಿಳಾಸ) ಯೋಜನೆಯಲ್ಲಿ ಸಮುದಾಯಗಳನ್ನು ಸಬಲೀಕರಣಗೊಳಿಸುವುದರ ಜೊತೆಗೆ 2047ರ ಎಲ್ಲರಿಗೂ ವಿಮೆ ಉದ್ದೇಶ ಸಾಕಾರಕ್ಕೆ ಅರ್ಥಪೂರ್ಣ ಕೊಡುಗೆ ನೀಡುತ್ತೇವೆ,” ಎಂದರು.
‘ಭರೋಸೆ ಕಾ ಅಡ್ರೆಸ್’ ಕಚೇರಿಗಳು ಕೇವಲ ವಿಮಾ ರಕ್ಷಣೆ ನೀಡುವುದಲ್ಲದೆ, ಸ್ಥಳೀಯ ಸಮುದಾಯಗಳಿಗೆ ಗಣನೀಯ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿವೆ. ಪ್ರತಿ ಶಾಖೆಯು ವ್ಯವಸ್ಥಿತ ನೇಮಕಾತಿ ಮತ್ತು ಸಬಲೀಕರಣ ಯೋಜನೆಗಳ ಬೆಂಬಲವನ್ನು ಹೊಂದಿರುತ್ತದೆ. ಈ ಯೋಜನೆಗಳು ಹೊಸ ಸಲಹೆಗಾರರಿಗೆ ಡಿಜಿಟಲ್ ಪರಿಕರಗಳು ಮತ್ತು ಅಗತ್ಯ ತರಬೇತಿಯನ್ನು ನೀಡುವ ಮೂಲಕ ಸೂಕ್ತ ಹಣಕಾಸು ಸಲಹೆ ನೀಡಲು ಸಜ್ಜುಗೊಳಿಸುತ್ತದೆ. ಈ ಸ್ಥಳೀಯವಾಗಿ ಗಮನ ಹರಿಸುವ ವಿಧಾನವು ಹಣಕಾಸಿನ ಸಲಹೆಗಳು ಜನರಿಗೆ ಹೆಚ್ಚು ಹತ್ತಿರವಾಗುವಂತೆ ಮತ್ತು ಪ್ರತಿಯೊಂದು ಕುಟುಂಬದ ವಿಶಿಷ್ಟ ಹಣಕಾಸು ವಿಚಾರದಲ್ಲಿ ಸುಲಭವಾಗಿ ಹೊಂದಾಣಿಕೆ ಆಗುವಂತೆ ನೋಡಿಕೊಳ್ಳುತ್ತದೆ.
ಈ ವಿಸ್ತರಣಾ ಕ್ರಮವು 2026ರ ಹಣಕಾಸು ವರ್ಷದ ಪ್ರಮುಖ ಮೈಲಿಗಲ್ಲಾಗಿದ್ದರೂ, ‘ಭರೋಸೆ ಕಾ ಅಡ್ರೆಸ್’ ಎಂಬುದು ಭಾರತದ ಆರ್ಥಿಕ ಭದ್ರತಾ ವ್ಯವಸ್ಥೆಗೆ ಕಂಪನಿಯು ನೀಡುತ್ತಿರುವ ಮಹತ್ವದ ಕೊಡುಗೆಯಾಗಿದೆ. ಈ ಮೂಲಸೌಕರ್ಯ ವ್ಯವಸ್ಥೆಯು ಭವಿಷ್ಯದ ಸವಾಲುಗಳನ್ನು ಎದುರಿಸಬಲ್ಲ ಮತ್ತು ಉತ್ತಮ ಗುಣಮಟ್ಟದ ಆರ್ಥಿಕ ಭದ್ರತಾ ಉತ್ಪನ್ನಗಳನ್ನು ನೀಡಬಲ್ಲ ಬಲಿಷ್ಠ ಏಜೆನ್ಸಿ ಜಾಲಕ್ಕೆ ಅಡಿಪಾಯವಾಗಲಿದೆ.
ಆಕ್ಸಿಸ್ ಮ್ಯಾಕ್ಸ್ ಲೈಫ್ ಇನ್ಶೂರೆನ್ಸ್ ಲಿಮಿಟೆಡ್ ಕುರಿತು ಹೆಚ್ಚಿನ ಮಾಹಿತಿಗೆ ವೀಕ್ಷಿಸಬಹುದು- https://www.axismaxlife.com
