ಆಯೆ ಮನಿಪುಜೆ ತುಳು ನಾಟಕದ ಶೀರ್ಷಿಕೆ ಬಿಡುಗಡೆ 

0
45

ಕಾರ್ಕಳ : ನಾಟಕಗಳು ಬರೀ ಮನೋರಂಜನೆಯನ್ನು ಮಾತ್ರ ನೀಡದೆ ತುಳು ಭಾಷೆ ದೊಡ್ಡ ಕೊಡುಗೆ ಹಾಗೂ ಸಮಾಜಕ್ಕೊಂದು ಉತ್ತಮ ಸಂದೇಶವನ್ನು ನೀಡುವ ಕೆಲಸ ಮಾಡುತ್ತಿದೆ. ಕಲಾವಿದರ ಶ್ರಮದಿಂದ ಇಂದು ಕಲೆಗಳ ಆರಾಧನೆಯಾಗುತ್ತಿದೆ. ಕಲೆ ಹಾಗೂ ಕಲಾವಿದರನ್ನು ಗುರುತಿಸುವ ಕೆಲಸ ಕಾರ್ಯಕಾರ್ಯಗಳು ನಿತ್ಯ ನಿರಂತರವಾಗಿ ನಡೆಯಬೇಕಾಗಿದೆ ಎಂದು ನಂದಳಿಕೆ ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದ ಪ್ರಧಾನ ಅರ್ಚಕ ಮಧುಸೂದನ್ ಭಟ್ ಹೇಳಿದರು.

ನಂದಳಿಕೆ ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದಲ್ಲಿ ಭಾನುವಾರ ನಡೆದ ತುಳುವ ಸಿರಿ ಕಲಾವಿದೆರ್ ನಂದಳಿಕೆ ನಾಟಕ ತಂಡದ ಈ ವರ್ಷದ ನೂತನ ಆಯೆ ಮನಿಪುಜೆ ತುಳು ನಾಟಕದ ಶೀರ್ಷಿಕೆ ಬಿಡುಗಡೆ  ಕಾರ್ಯಕ್ರಮದಲ್ಲಿ ಆಶಿರ್ವಚನ ನೀಡಿದರು.

ದೇವಸ್ಥಾನದ ಆಡಳಿತ ಮೊಕ್ತೇಸರ ಯನ್.ತುಕಾರಾಮ್ ಶೆಟ್ಟಿ  ನಾಟಕದ ಶೀರ್ಷಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿ, ಗ್ರಾಮೀಣ ಭಾಗದ ಪ್ರತಿಭೆಗಳನ್ನು ಜೊತೆಗೂಡಿ ಒಂದು ಸುಂದರ ತಂಡವನ್ನು ಕಟ್ಟಿಕೊಂಡು ತುಳುರಂಗಭೂಮಿಯಲ್ಲಿ ಸೇವೆಯನ್ನು ನೀಡುತ್ತಿರುವ ತುಳುವ ಸಿರಿ ಕಲಾವಿದರ ಶ್ರಮ ಶ್ಲಾಘನೀಯ.  ನಾಟಕದ ಮೂಲಕ ತುಳು ಭಾಷೆ, ಸಂಸ್ಕೃತಿಯನ್ನು ಬೆಳೆಸುವ ಕಾರ್ಯವಾಗುತ್ತಿದೆ. ನಂದಳಿಕೆಯಲ್ಲಿ ಹುಟ್ಟು ಪಡೆದ ತಂಡದ ಕೀರ್ತಿ ಪತಾಕೆ ಎಲ್ಲೆಡೆ ಹಬ್ಬಲಿ. ಆಯೆ ಮನಿಪುಜೆ ನಾಟಕ ಇಡೀ ತುಳುನಾಡಿನ ಜನತೆಯ ಮನ ಗೆಲ್ಲಲ್ಲಿ ಎಂದರು.

ಕಾರ್ಯಕ್ರಮದಲ್ಲಿ ಹಿರಿಯ ಮಾರ್ಗದರ್ಶಕರು ಹಾಗೂ ನಿವೃತ್ತ ಪ್ರಾಂಶುಪಾಲ ಜಯಂತ್ ರಾವ್.ಪಿಲಾರ್, ನಂದಳಿಕೆ ಶ್ರೀ ಗುರುದುರ್ಗಾ ಮಿತ್ರ ಮಹಿಳಾ ಮಂಡಳಿ ಅಧ್ಯಕ್ಷೆ ಸುನಿತಾ ನೊರೊನ್ಹಾ, ನಿವೃತ್ತ ಶಿಕ್ಷಕಿ ಸರೋಜಿನಿ ಟಿ.ಶೆಟ್ಟಿ, ತುಳುವ ಸಿರಿ ನಾಟಕ ತಂಡದ ಸಾರಥಿ ಹರಿಪ್ರಸಾದ್ ನಂದಳಿಕೆ, ಕಲಾವಿದರಾದ ಪ್ರತೀಕ್ ಸಾಲ್ಯಾನ್, ಅಶೋಕ್ ಪಳ್ಳಿ, ದೀಕ್ಷಿತ್ ದೇವಾಡಿಗ, ಯತೀಶ್ ಪಾಲಡ್ಕ, ರಕ್ಷಿತ್ ಬೇಲಾಡಿ, ಸೂರಾಜ್ ಸಾಲ್ಯಾನ್ ಮುಲ್ಲಡ್ಕ, ಸಂದೀಪ್ ಸಂಕಲಕರಿಯ, ಶ್ರೀನಿವಾಸ್ ಇನ್ನಾ, ಮೋನಿಕಾ ಅಂದ್ರಾದೆ, ಚೈತ್ರಾ ಚೇತನಹಳ್ಳಿ, ಸಂಗೀತಗಾರ ಪವನ್ ಕಡಂದಲೆ ಮತ್ತಿತರರು ಉಪಸ್ಥಿತರಿದ್ದರು. ವೀಣೇಶ್ ಅಮಿನಿ ಸಾಂತೂರು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here