ಆಯುರ್ವೇದ ಔಷಧಿ ಪ್ರದರ್ಶನ ಶಿಬಿರ; ಆರೋಗ್ಯಯುತ ಜೀವನ ವಿಧಾನ ತಿಳಿದ ಸರಕಾರಿ ಶಾಲೆಯ ವಿದ್ಯಾರ್ಥಿಗಳು

0
59

ಸಂಜೀವಿನಿ ಆಯುರ್ವೇದಿಕ್ ಆಸ್ಪತ್ರೆ ವೈದ್ಯರಿಂದ ಶಿಕ್ಷಕ ಸುಭಾಷ್ ರವರಿಗೆ ಸತ್ಕಾರ ಹುಬ್ಬಳ್ಳಿ ಶಹರದ ಗೋಕುಲ ರಸ್ತೆಯ ಬಸವೇಶ್ವರ ನಗರದ ವಿಶ್ವಶ್ರಮಚೇತನ ಆವರಣದಲ್ಲಿರುವ ಸಂಜೀವಿನಿ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯಲ್ಲಿ 10 ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆಯ ಅಂಗವಾಗಿ ೨೦೨೫ರ ಸಪ್ಟೆಂಬರ್ ಮಾಸದಲ್ಲಿ ಸ್ವಾಭಾವಿಕ ಆರೋಗ್ಯ ವೃದ್ಧಿ ಬೃಹತ್ ಎಗ್ಸಿಬಿಷನ್ ಕಮ್ ಎಕ್ಸಪೊ ಶಿಬಿರವನ್ನು ಆಯೋಜಿಸಲಾಗಿತ್ತು. ಆಯ್ದ ಶಾಲೆಗಳನ್ನು ಸದರಿ ಕಾರ್ಯಕ್ರಮದ ಪ್ರಯೋಜನಕ್ಕಾಗಿ ಆವ್ಹಾನಿಸಲಾಗಿತ್ತು. ಮಂಜುನಾಥ ನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರು ಹೆಚ್. ಬಿ. ಕೊರವರವರ ನಿರ್ದೇಶನದ ಮೇರೆಗೆ 6 ಮತ್ತು 7 ತರಗತಿಯ ವಿದ್ಯಾರ್ಥಿ ಸಮೂಹವನ್ನು ಸಹ ಶಿಕ್ಷಕರಾದ ಸುಭಾಷ್ ಚವ್ಹಾಣ ವ ಪ್ರಕಾಶರವರು ಕರೆದುಕೊಂಡು ಹೋಗಿ ಮಕ್ಕಳಲ್ಲಿ ಸಹಜ ಆರೋಗ್ಯಯುತ ಜೀವನದ ಬಗ್ಗೆ ಪ್ರಾತ್ಯಕ್ಷಿಕೆ, ತಿಳುವಳಿಕೆ ಮೂಡಿಸಿದರು. ನಾಡಿ ಪರೀಕ್ಷೆ, ತೂಕ, ಎತ್ತರ ಹಾಗೂ ಬಿಪಿ ತಪಾಸಣೆ ಮಾಡಿದರು.
ಆಯುರ್ವೇದ ಪಿತಾಮಹ ಚರಕ, ಧನ್ವಂತರಿ ಚಿಕಿತ್ಸಕ ಪದ್ದತಿ, ಶುಶೃತ ಶಲ್ಯ (ಸರ್ಜರಿ) ಕುರಿತ ವಿಸ್ತೃತ ಪೋಸ್ಟರಗಳನ್ನು ಅಳವಡಿಸಲಾಗಿತ್ತು. ದೃಶ್ಯ ಮಾಧ್ಯಮದಲ್ಲಿ ಸಹಜ ಆರೋಗ್ಯಯುತ ಜೀವನ ಶೈಲಿಯ ವಿಧಿ ವಿಧಾನಗಳನ್ನು ಬಿತ್ತರಿಸಲಾಗಿತ್ತು. ಆಯುರ್ವೇದಿಕ್ ಅನಾಟೊಮಿ, ಪಿಜಿಯಾಲಜಿ ಮಾದರಿಗಳು, ಪ್ರಕೃತಿ ಮತ್ತು ನಾಡಿ ಪರೀಕ್ಷೆ, ಔಷಧೀಯ ಸಸ್ಯಗಳ ಪ್ರದರ್ಶನ ಮಾಡಲಾಗಿತ್ತು. ವೈದ್ಯ ವಿದ್ಯಾರ್ಥಿಗಳು ಆಹಾರ, ವಿಹಾರ, ಆಚಾರ, ವಿಚಾರ, ಔಷಧ ಸೇವನೆ ಮುಂತಾದ ಸಂಗತಿಗಳನ್ನು ಮಕ್ಕಳಿಗೆ ತಿಳಿ ಹೇಳಿದರು. ಉಚಿತವಾಗಿ ವಾತ, ಕಪ, ಪಿತ್ತ ಆಧಾರಿತ ಕಂಪ್ಯೂಟರಿಕೃತ ತಪಾಸಣೆಯ ಮೂಲಕ ಆರೋಗ್ಯ ವಿಶ್ಲೇಷಣೆ ಮಾಡಿ ಸೇವಿಸಬೇಕಾದ ಆಹಾರ, ಸೇವಿಸಬಾರದ ಆಹಾರ, ಮಾಡಬೇಕಾದ ಯೋಗಾಸನಗಳು, ವ್ಯಾಯಮಗಳ ಬಗ್ಗೆ ಸವಿಸ್ತಾರವಾಗಿ ಪ್ರಚುರಪಡಿಸಿದರು.
ರೋಗ ಬರದಂತೆ ತಡೆಯುವುದು ಹಾಗೂ ಬಂದ ರೋಗವನ್ನು ಗುಣಪಡಿಸುವುದು ಆಯುರ್ವೇದದ ಮೂಲ ಉದ್ದೇಶವಾಗಿದೆ ಎಂದು ವಿಭಾಗ ಮುಖ್ಯಸ್ಥರು ವ ಪ್ರಾಧ್ಯಾಪಕರಾದ ಡಾ. ಬಿ. ಎಲ್. ಪಾಟೀಲ ರವರು ತಮ್ಮ ಭಾಷಣದಲ್ಲಿ ಸ್ಪಷ್ಟಪಡಿಸಿದರು.ವಿದ್ಯಾರ್ಥಿಗಳಲ್ಲಿ ಆಯುರ್ವೇದದ ಪ್ರಯೋಜನ ತಿಳುವಳಿಕೆಗೆ ಸಹಕಾರ ನೀಡಿದ ಶಿಕ್ಷಕ ಸುಭಾಷ್ ಚವ್ಹಾಣ ವ ಪ್ರಕಾಶರವರಿಗೆ ಕಾಲೇಜು ವತಿಯಿಂದ ಸ್ಮರಣಿಕೆ ಹಾಗೂ ಪುಸ್ತಕಗಳನ್ನು ಗೌರವಪೂರ್ವಕವಾಗಿ ನೀಡಿ ಸತ್ಕರಿಸಿದರು. ಸನ್ಮಾನ ಸ್ವೀಕರಿಸಿ ಸುಭಾಷ್ ರವರು ಮಾತನಾಡುತ್ತ; ರೋಗದ ಮೂಲವನ್ನು ಪತ್ತೆ ಹಚ್ಚಿ ಅದಕ್ಕೆ ಚಿಕಿತ್ಸೆ ನೀಡುವ ಆಯುರ್ವೇದ ವಿಧಾನ ರೋಗದ ಬೇರನ್ನು ಕಿತ್ತು ಹಾಕಲು ಸಾಧ್ಯವಾಗುತ್ತದೆ. ರೋಗ ಬರದಂತೆ ಆಹಾರ ವಿಹಾರ ಯೋಗವನ್ನು ಅಳವಡಿಸಿಕೊಳ್ಳಲು ಮುನ್ಸೂಚನೆ ಯುಕ್ತ ವಾಗಿದೆ ಎಂದರು.

ಆಸ್ಪತ್ರೆ ಕಮ್ ಕಾಲೇಜಿನ ಪ್ರಾಚಾರ್ಯರಾದ ಸಿ. ಸಿ. ಹಿರೇಮಠ, ಸಹಾಯಕ ಪ್ರಾಧ್ಯಪಕರಾದ ಡಾ. ಪ್ರವೀಣ, ಸಹ ಪ್ರಾಧ್ಯಾಪಕಿಯರಾದ ಡಾ. ಸಂಧ್ಯಾರಾಣಿ, ನೋಡಲ ಆಫಿಸರ್ ವ ಪ್ರಾಧ್ಯಾಪಕರಾದ ಡಾ. ಅಂಜನಾ ಸಿದ್ದಾಪುರ, ಆಸ್ಪತ್ರೆಯ ಕಾರ್ಯಾಧ್ಯಕ್ಷರಾದ ಮೋಹನ ಲಿಂಬಿಕಾಯಿ, ಸಂಸ್ಥಾಪಕ ಅಧ್ಯಕ್ಷರಾದ ಡಾ.ಕೆ. ಎಸ್ ಶರ್ಮಾರವರು ಹಾಗೂ ನೂರಾರು ವೈಧ್ಯ ವಿದ್ಯಾರ್ಥಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here