ಮಂಗಳೂರು: ಮಿಲಾಗ್ರಿಸ್ ಕಾಲೇಜಿನಲ್ಲಿ ಬಿ.ಕಾಂ 4ನೇ ಸೆಮಿಸ್ಟರ್ ಎಸ್‌ಇಪಿ (SEP) ಪಠ್ಯಕ್ರಮಗಳ ಕುರಿತು ಮಂಗಳೂರು ವಿಶ್ವವಿದ್ಯಾಲಯ ಕಾಮರ್ಸ್ ಆಂಡ್ ಟಾಕ್ಸ್ ಅಸೋಸಿಯೇಷನ್ (MUCTA)ನ ಸಹಯೋಗದಿಂದ ಕಾರ್ಯಾಗಾರ ಆಯೋಜಿಸಲಾಗಿತ್ತು.
ಸಸಿಗೆ ನೀರುಣಿಸುವ ಮೂಲಕ ಕಾರ್ಯಾಗಾರವನ್ನು ಉದ್ಘಾಟಿಸಿದ ಕಾಲೇಜಿನ ಪ್ರಾಂಶುಪಾಲರಾದ ರೆ .ಡಾ ಆಲ್ವಿನ್ ಸೆರಾವೋ ಮಾತನಾಡಿ, ನವೀಕರಿಸಿದ ಪಠ್ಯಕ್ರಮಗಳ ಪ್ರಸ್ತುತತೆ ಮತ್ತು ಗುಣಮಟ್ಟದ ಬೋಧನೆಯ ಅಗತ್ಯತೆಯನ್ನು ತಿಳಿಸಿ, ಮಕ್ಕಳ ಪಠ್ಯಕ್ರಮವು ಸಿದ್ಧಾಂತಗಳಿಗೆ ಹೆಚ್ಚು ಒತ್ತು ಕೊಡದೆ ಪ್ರಾಯೋಗಿಕ ತರಗತಿಗಳ ಮೂಲಕ ಮಕ್ಕಳನ್ನು ಕ್ರಿಯಾಶೀಲರನ್ನಾಗಿ ಮಾಡುವ ಅಗತ್ಯವಿದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳನ್ನು ಕ್ರಿಯಾಶೀಲರನ್ನಾಗಿಸುವ ಜವಾಬ್ದಾರಿಯು ಶಿಕ್ಷಕರಾದ ನಮ್ಮ ಮೇಲೆ ಇದೆ ಎಂದರು.
ನಂತರ 4ನೇ ಸೆಮಿಸ್ಟರ್ ಬಿ.ಕಾಂ ಪಠ್ಯವಿಷಯಗಳ ಕುರಿತು ಸಮಂತರ ಗೋಷ್ಠಿಗಳು ಜರುಗಿದವು. ವಿವಿಧ ಕಾಲೇಜುಗಳ ವಾಣಿಜ್ಯ ವಿಭಾಗದ ಅಧ್ಯಾಪಕರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಪಠ್ಯ ವಿಷಯಗಳ ಕುರಿತು ಚರ್ಚೆ ನಡೆಸಿದರು.
ಕಾಸ್ಟ್ ಅಂಡ್ ಮ್ಯಾನೇಜ್ಮೆಂಟ್ II: ಪ್ರೊ. ಹೈದರಲಿ ಮತ್ತು ಪ್ರೊ. ಹರೀಶ್ ನಾಯಕ್,
ಕಾರ್ಪೊರೇಟ್ ಅಕೌಂಟಿಂಗ್- II: ಡಾ. ನಯನಾ ಸರಕಾರಿ ಪ್ರಥಮ ದರ್ಜೆ ಕಾಲೇಜು ಕಾಪು ಮತ್ತು ಶ್ರೀಮತಿ ಸಂಧ್ಯಾ ಸರಕಾರಿ ಪ್ರಥಮ ದರ್ಜೆ ಕಾಲೇಜು ಉಪ್ಪಿನಂಗಡಿ
ಡೈರೆಕ್ಟರ್ ಟಾಕ್ಸ್– II: ಡಾ. ರವಿ ಎಂ.ಎನ್. ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಳ್ತಂಗಡಿ ಹಾಗೂ ಶ್ರೀ ಸಂದೀಪ ಕೆ. ಬಸ್ರೂರ್
ಹ್ಯೂಮನ್ ರಿಸೋರ್ಸ್ ಡೆವಲಪ್ಮೆಂಟ್ – II: ಶ್ರೀಮತಿ ಅನಸುಯಾ ಕೆನರಾ ಕಾಲೇಜು, ಮಂಗಳೂರು ಹಾಗೂ ಡಾ. ಸೋನಾ MSRS ಕಾಲೇಜು, ಶಿರ್ವ,
ಫೈನಾನ್ಸ್ – II: ಡಾ. ರೋಶ್ನಿ ಯಶವಂತ್ ಸರಕಾರಿ ಪ್ರಥಮ ದರ್ಜೆ ಕಾಲೇಜು ಕಾಪು ಮತ್ತು ಶ್ರೀ ನವೀನ್ ಆಚಾರ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಳ್ತಂಗಡಿ,
ಮಾರ್ಕೆಟಿಂಗ್ – II: ಡಾ. ಲೋಕೇಶ್ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಳೆಯಂಗಡಿ ಮತ್ತು ಡಾ. ಹರಿಪ್ರಸಾದ್ ಸರಕಾರಿ ಪ್ರಥಮ ದರ್ಜೆ ಕಾಲೇಜು ಉಪ್ಪಿನಂಗಡಿ
ಅಕೌಂಟಿಂಗ್ – II: ಶ್ರೀ ಪ್ರಶಾಂತ್ ಅಲಿಸನ್ MAPS ಕಾಲೇಜು ಹಾಗೂ ಶ್ರೀಮತಿ ಲವೀನಾ ಕೆನರಾ ಕಾಲೇಜು,
ಸ್ಕಿಲ್ ಎನ್‌ಹಾನ್ಸ್ಮೆಂಟ್– PBL: ಶ್ರೀ ಮನೋಜ್ ಲೂಯಿಸ್ ಸರಕಾರಿ ಪ್ರಥಮ ದರ್ಜೆ ಕಾಲೇಜು ಕಾರ್ಕಳ ಮತ್ತು ಶ್ರೀ ಗಂಗಾಧರ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಬಲ್ಮಠ ಅವರು ಗೋಷ್ಠಿಗಳನ್ನು ನಡೆಸಿದರು.
ಕಾರ್ಯಕ್ರಮದಲ್ಲಿ ಮಿಲಾಗ್ರಿಸ್ ಕಾಲೇಜಿನ ಐಕ್ಯೂ ಏಸಿ ಸಂಯೋಜಕರಾದ ಶ್ರೀಮತಿ ಚೇತನ ಕುಮಾರಿ ಹಾಗೂ ವಿವಿಧ ಕಾಲೇಜಿನ ವಾಣಿಜ್ಯ ವಿಭಾಗದ ಉಪನ್ಯಾಸಕರು ಭಾಗವಹಿಸಿದ್ದರು.
ಕಾರ್ಯಾಗಾರದಲ್ಲಿ ಮುಕ್ತ ದ ಅಧ್ಯಕ್ಷರಾದ ಡಾ. ರವಿ ಎಂ.ಎನ್. ಸ್ವಾಗತಿಸಿದರು. ಮಿಲಾಗ್ರಿಸ್ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಡಾ. ಆಶಾ ಜ್ಯೋತಿ ಅವರು ಕಾರ್ಯಕ್ರಮದ ಉದ್ದೇಶ ಮತ್ತು ಮಹತ್ವವನ್ನು ತಿಳಿಸಿದರು. ಮುಕ್ತದ ಕಾರ್ಯದರ್ಶಿ, ಉದಯ ಶೆಟ್ಟಿ ವಂದಿಸಿದರು.

