ಶ್ರೀ ಲೋಕನಾಥೇಶ್ವರ ದೇವಸ್ಥಾನ ಬದ್ಯಾರು ಶಿರ್ಲಾಲು ಇಲ್ಲಿ 23 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಸಮಾರೋಪ ಕಾರ್ಯಕ್ರಮ ನಡೆಯಿತು.
ಮುಖ್ಯ ಅತಿಥಿಗಳಾಗಿ ಸಂಪತ್ ಬಿ ಸುವರ್ಣ ಅಧ್ಯಕ್ಷರು ಸುವರ್ಣ ಪ್ರತಿಷ್ಠಾನ ಬೆಳ್ತಂಗಡಿ ಭಾಗವಹಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಅಧ್ಯಕ್ಷತೆಯನ್ನು ಆಡಳಿತ ಮುಖ್ಯಸ್ಥರಾದ ಶ್ರೀಧರ ಪೂಜಾರಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಂಜೀವ ಪೂಜಾರಿ ಕೊಡಂಗೆ, ಸುಧೀರ್ ಆರ್. ಸುವರ್ಣ, ಸೂರ್ಯನಾರಾಯಣ ರಾವ್ ಅರ್ಚಕರು, ಪ್ರಭಾಕರ ನಾಯ್ಕ ಅಧ್ಯಕ್ಷರು ಶ್ರೀ ಲೋಕನಾಥೇಶ್ವರ ಭಜನಾ ಮಂಡಳಿ, ಚಂದ್ರವತಿ ಸೇವಾ ಪ್ರತಿನಿಧಿ, ಹರೀಶ್ ಕುಲಾಲ್ ಕಾರ್ಯದರ್ಶಿ, ರಮಣಿ ಅಧ್ಯಕ್ಷರು ಶ್ರೀದೇವಿ ಮಹಿಳಾ ಕೇಂದ್ರ, ಅಶೋಕ್ ಕುಮಾರ್ ಮಾಜಿ ಅಧ್ಯಕ್ಷರು ಭಾಗವಹಿಸಿದ್ದರು. ಬಹುಮಾನ ವಿತರಣೆ ಮಾಡಲಾಯಿತು. ಸ್ವಾಗತವನ್ನು ಜಗನ್ನಾಥ್ ಬೈರೊಟ್ಟು ಹಾಗೂ ಧನ್ಯವಾದವನ್ನು ಪ್ರಸಾದ್ ನಲ್ಲಾರ ಗುತ್ತು ಮಾಡಿದರು.