ಬಹುಜನ ಸಾಹಿತಿ ಸತೀಶ್ ಕಕ್ಕೆಪದವುರವರಿಗೆ ರಾಜ್ಯಪ್ರಶಸ್ತಿ ಹಾಗೂ ರಾಷ್ಟ್ರ ಪ್ರಶಸ್ತಿ

0
7

ನೆಲಮೂಲ ಸೊಗಡಿನ ತುಳುನಾಡಿನ ಹೆಮ್ಮೆಯ ಕವಿ, ಬರಹಗಾರ,ಕತೆಗಾರ, ರಂಗಕಲಾವಿದ, ರಂಗನಿರ್ದೇಶಕ, ಯಕ್ಷಗಾನ ಪ್ರಸಂಗ ಕರ್ತೃ, ಬಹುಜನ ಚಿಂತಕ, ಬಹುಜನ ಸಾಹಿತಿ, ಬಹುಮುಖ ಪ್ರತಿಭಾನ್ವಿತ ಸನ್ಮಾನ್ಯ ಸತೀಶ್ ಕಕ್ಕೆಪದವು ರವರ ಕಲಾತ್ಮಕ ಸಾಹಿತ್ಯ ಸೇವೆಯನ್ನು ಗುರುತಿಸಿ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ (ರಿ) ಪುಂಜಾಲಕಟ್ಟೆ, ಕರ್ನಾಟಕವು 2025 ರ “ಸ್ವಸ್ತಿ ಸಿರಿ ರಾಜ್ಯ ಪ್ರಶಸ್ತಿ” ಯನ್ನು ಹಾಗು ಕವಿತ್ತ ಕರ್ಮಮಣಿ ಫೌಂಡೇಷನ್ (ರಿ) ನಾಗರ ಮುನ್ನೋಳಿ, ಬೆಳಗಾವಿಯು 2026ರ “ಕವಿ ವಿಭೂಷಣ ರಾಷ್ಟ್ರ ಪ್ರಶಸ್ತಿ” ಯನ್ನು ಇತ್ತೀಚೆಗೆ ನೀಡಿ ಗೌರವಿಸಿರುವುದು ಸಾಹಿತ್ಯ ಲೋಕದ ಪ್ರಾಮಾಣಿಕ ನಡಿಗೆಗೆ ಸಂದ ಫಲಿತಾಂಶವಲ್ಲದೆ, ಅಭಿನಂದನೀಯ ಗೌರವವಾಗಿದೆ. ನೆಲ ಜಲ ಪರಿಸರ ಜೀವನ ಪ್ರೀತಿಯ ಮಾತೃಮೂಲ ಮೌಲ್ಯಗಳಿಂದ ರಚಿತವಾಗುವ ತಮ್ಮ ಸಾಹಿತ್ಯ ಇತಿಹಾಸ ನಿರ್ಮಿಸಲೆಂಬ ಆಶಯದೊಂದಿಗೆ, ತಮಗಿದು ಗೌರವದ ಅಭಿನಂದನೆಗಳು.

LEAVE A REPLY

Please enter your comment!
Please enter your name here