ಬೈಕಂಪಾಡಿ: ಸುಗಂಧ ದ್ರವ್ಯ ತಯಾರಕ ಕಂಪೆನಿಯಲ್ಲಿ ಬೆಂಕಿ ಅವಘಡ, ಭಾರೀ ನಷ್ಟ

0
147

ಮಂಗಳೂರು: ಇಲ್ಲಿಯ ಬೈಕಂಪಾಡಿ ಕೈಗಾರಿಕ ವಲಯದಲ್ಲಿ ಕಾರ್ಯಾಚರಿಸುತ್ತಿದ್ದ ಆರೋಮಾಝೇನ್‌ ಸುಗಂಧ ದ್ರವ್ಯ ತಯಾರಕ ಕಂಪೆನಿಗೆ ಇಂದು (ಸೆ. ೧೦) ಬೆಳಿಗ್ಗೆ ಬೆಂಕಿ ತಗುಲಿದ ಘಟನೆ ನಡೆದಿದೆ.

ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಬೆಂಕಿಯ ಕೆನ್ನಾಳಿಗೆ ವ್ಯಾಪಕವಾಗಿ ಹರಡಿ ಕಂಪೆನಿ ಬೆಂಕಿಗಾಹುತಿಯಾಗಿದ್ದು ,ಭಾರೀ ನಷ್ಟ ಉಂಟಾಗಿದೆ ಎಂದು ತಿಳಿದು ಬಂದಿದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಎಂಸಿಎಫ್‌, ಎನ್‌ ಎಂಪಿಎ, ಮತ್ತು ಕದ್ರಿಯ ಅಗ್ನಿ ಶಾಮಕ ದಳ ವಾಹನಗಳು ಸ್ಥಳಕ್ಕೆ ಬಂದು ಬೆಂಕಿ ನಂದಿಸಿವೆ. ಘಟನೆ ಸಂಬಂಧಿಸಿ ಪಣಂಬೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆಗೆ ಕಾರಣ ಪರಿಶೀಲಿಸಲಾಗುತ್ತಿದೆ.

LEAVE A REPLY

Please enter your comment!
Please enter your name here