ದೇವಪಟ್ಟಣದ ಬಾಲಮಂಜುನಾಥ ಸ್ವಾಮೀಜಿ ಧರ್ಮಸ್ಥಳ ಭೇಟಿ

0
14

ಉಜಿರೆ: ಕುಣಿಗಲ್ ಕೆ.ಜಿ. ದೇವಪಟ್ಟಣದಲ್ಲಿರುವ ಶ್ರೀ ವಿದ್ಯಾಚೌಡೇಶ್ವರಿ ಅಮ್ಮನವರ ದೇವಸ್ಥಾನದ ಪೂಜ್ಯ ಬಾಲಮಂಜುನಾಥ ಸ್ವಾಮೀಜಿ ಮಂಗಳವಾರ ನೂರೈವತ್ತು ಮಂದಿ ಭಕ್ತರೊಂದಿಗೆ ಧರ್ಮಸ್ಥಳಕ್ಕೆ ಬಂದು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ, ಗೌರವಿಸಿ ಶುಭ ಹಾರೈಸಿದರು.

ಹೇಮಾವತಿ ವೀ. ಹೆಗ್ಗಡೆಯವರು, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು. ಬಸವರಥದಲ್ಲಿ ಬಂದ ಹಂಗರವಳ್ಳಿ ಬಸವಣ್ಣ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು.

ಬಳಿಕ ಸ್ವಾಮೀಜಿ ಮತ್ತು ಭಕ್ತರು ದೇವರ ದರ್ಶನ ಮಾಡಿ, ಅನ್ನಪೂರ್ಣ ಭೋಜನಾಲಯದಲ್ಲಿ ಪ್ರಸಾದ ಸ್ವೀಕರಿಸಿ ಊರಿಗೆ ಮರಳಿದರು.

LEAVE A REPLY

Please enter your comment!
Please enter your name here