ಬಳೆಂಜ : ಹಿರಿಯ ಪ್ರಾಥಮಿಕ ಶಾಲೆಯ ಅಮೃತ ಮಹೋತ್ಸವ

0
78

ಬೆಳ್ತಂಗಡಿ ತಾಲೂಕಿನ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಬಳೆಂಜ ಇದರ ಅಮೃತ ಮಹೋತ್ಸವದ ಪ್ರಯುಕ್ತ ಅಲ್ಲಿನ ಶಾಲಾಭಿವೃದ್ಧಿ ಸಮಿತಿಯವರು ಮಾನ್ಯ ಶಾಸಕರನ್ನು ಭೇಟಿಯಾಗಿ ಶಾಲೆಯು ಅಮೃತ ಮಹೋತ್ಸವವನ್ನು ಆಚರಿಸುತ್ತಿದ್ದು ಊರವರ, ಸಂಘಸಂಸ್ಥೆಗಳ ನೆರವಿನಿಂದ ಹಲವು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ ಹಾಗಾಗಿ ತಾವು ನಮ್ಮ ಶಾಲೆಯ ಮಕ್ಕಳ ಹಿತದೃಷ್ಟಿಯಿಂದ ಶಾಲಾ ಬಳಿ ಸಂಚಾರಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಸುಂದರ -“ಮಕ್ಕಳ ತಂಗುದಾಣ” ವನ್ನು ನಿರ್ಮಿಸಲು ಅನುದಾನ ಒದಗಿಸುವಂತೆ ವಿಜ್ಞಾಪನೆಯನ್ನು ನೀಡಿದ್ದು ಸದ್ರಿಯವರ ವಿಚಾರವನ್ನು ಪರಿಗಣಿಸಿ ಸಕರಾತ್ಮಕವಾಗಿ ಕೂಡಲೇ ಸ್ಪಂದಿಸಿದ ಶ್ರಮಿಕ ವಿದ್ಯಾರ್ಥಿಗಳ ಸಮಸ್ಯೆಯನ್ನು ಮನಗಂಡು ವಿದ್ಯಾರ್ಥಿಗಳ ಸುರಕ್ಷತೆಗಾಗಿ ಮಕ್ಕಳ ತಗುದಾಣ ನಿರ್ಮಾಣಕ್ಕೆ ರೂ.10.00 ಲಕ್ಷ ಅನುದಾನವನ್ನು ಒದಗಿಸಿ ಶೀಘ್ರವಾಗಿ ಕಾಮಗಾರಿಯನ್ನು ಪೂರ್ಣಗೊಳಿಸಿದ್ದು ಅಮೃತ ಮಹೋತ್ಸವ ಆಚರಣೆಯ ಶುಭ ಸಂದರ್ಭದಲ್ಲಿಯೇ ಸದ್ರಿ ಮಕ್ಕಳ ತಂಗುದಾಣವೂ ಉದ್ಘಾಟನೆಗೆ ಲಭ್ಯವಾಗುವಲ್ಲಿ ಶ್ರಮಿಸಿದ ತಾಲೂಕಿನ ಜನಪ್ರಿಯ ಶಾಸಕರಾದ ಶ್ರೀ ಹರೀಶ್ ಪೂಂಜರವರಿಗೆ ಶಾಲಾ ಮಕ್ಕಳ, ಪೋಷಕರ, ಹಳೆ ವಿದ್ಯಾರ್ಥಿಗಳ ಸಂಘ ಹಾಗೂ ಶಾಲಾಭಿವೃದ್ಧಿ ಸಮಿತಿಯ ಪರವಾಗಿ ವಿಶೇಷ ಧನ್ಯವಾದಗಳು.

LEAVE A REPLY

Please enter your comment!
Please enter your name here