ಕಲ್ಲಡ್ಕ : ಬಂಟ್ವಾಳ ತಾಲೂಕಿನ ಬಾಳ್ತಿಲ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕಂಟಿಕದಲ್ಲಿ ಸತ್ಯಸಾಯಿ ಬಾಬಾ ದಕ್ಷಿಣ ಕನ್ನಡದ ಸೇವಾ ಸಂಸ್ಥೆಗಳ ವತಿಯಿಂದ’ ಸತ್ಯಸಾಯಿ ಬಾಬಾ ಅವರ ಜನ್ಮ ಶತಾಬ್ದಿಯ ಪ್ರಯುಕ್ತ “ಪ್ರೇಮ ತರು” ಎನ್ನುವ ಗಿಡ ನೆಡುವ ಕಾರ್ಯಕ್ರಮ ಮಂಗಳವಾರ ಜರುಗಿತು.

ಶಾಲೆಯ 75 ಸೆನ್ಸ್ ಜಾಗದಲ್ಲಿ ಸುಮಾರು 170 ಅಡಿಕೆ ಗಿಡಗಳು, 10 ತೆಂಗಿನ ಗಿಡ, 25 ಮಿಕ್ಕಿ ಹಣ್ಣಿನ ಗಿಡಗಳನ್ನು ನೆಡಲಾಯಿತು. ಸತ್ಯಸಾಯಿ ಸಂಸ್ಥೆಗಳ ಕರ್ನಾಟಕ ರಾಜ್ಯ ಉತ್ತರ ವಿಭಾಗದ ರಾಜ್ಯ ಮಹಿಳಾ ಸೇವಾ ಸಂಯೋಜಕ ಪ್ರಿಯಾ ಪೈ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಶಾಲಾ ಆವರಣದಲ್ಲಿ ತೆಂಗಿನ ಸಸಿ ನೆಟ್ಟು ಮಾತನಾಡಿ, ಶ್ರೀ ಸತ್ಯ ಸಾಯಿ ಬಾಬಾರವರ ಜನ್ಮ ಶತಾಬ್ದಿಯನ್ನು ಅರ್ಥಪೂರ್ಣವಾಗಿ ಆಚರಿಸುವ ಉದ್ದೇಶದಿಂದ ಸಂಸ್ಥೆಯ ವತಿಯಿಂದ ಗಿಡ ನಾಟಿ ಮಾಡಲಾಗುತ್ತಿದ್ದು, ಇದರ ಪೋಷಣೆಯ ಜವಾಬ್ದಾರಿ ಶಾಲಾಭಿವೃದ್ಧಿ ಸಮಿತಿ ಹಾಗೂ ಊರ ಶಾಲಾಭಿಮಾನಿಗಳಿಗೆ ಸೇರಿದೆ ಎಂದರು.
ಕಾರ್ಯಕ್ರಮದಲ್ಲಿ ಶ್ರೀ ಸತ್ಯ ಸಾಯಿ ಬಾಬಾ ಸೇವಾ ಸಂಸ್ಥೆಯ ಜಿಲ್ಲಾ ಶೈಕ್ಷಣಿಕ ಸಂಯೋಜಕಿ ಮೂಕಾಂಬಿಕಾ ಎನ್. ರಾವ್, ಜಿಲ್ಲಾ ಮಹಿಳಾ ಸೇವಾ ಸಂಯೋಜಕೀ ಶಾಂತಿ ಭಟ್, ಜಿಲ್ಲಾ ಆಧ್ಯಾತ್ಮಿಕ ಸಂಯೋಜಕಿ ಮುಕ್ತಾಕಿಣಿ, ಯುವ ಸಂಯೋಜಕಿ ವೀಣಾ ಲಕ್ಷ್ಮಿ ಭಟ್ ಜಿಲ್ಲಾಧ್ಯಕ್ಷ ಪ್ರಸನ್ನ ಭಟ್, ಜಿಲ್ಲಾ ಉಪಾಧ್ಯಕ್ಷ ಮಹಾಬಲೇಶ್ವರ ಭಟ್, ರಾಜ್ಯ ಸೇವಾ ಸಯೋಜಕರಾದ ಚಂದ್ರಶೇಖರ ನಾಯಕ್, ಜಿಲ್ಲಾ ಪುರುಷ ಸೇವಾದಳ ಸಂಯೋಜಕರಾದ ದುರ್ಗಾ ಪ್ರಸಾದ್, ಪುತ್ತೂರು ಬಂಟ್ವಾಳ ಮುಡಿಪು ಮತ್ತು ಮಂಗಳೂರು ಸೇವಾ ಸಮಿತಿಯ ಸೇವಾದಳದ ಸದಸ್ಯರುಗಳು, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷೆ ಸೌಮ್ಯಶ್ರೀ ಉಪಾಧ್ಯಕ್ಷೆ ಲಕ್ಷ್ಮಿ, ಬಿ.ಆರ್ ಸಿ. ಸುರೇಖ, ಗ್ರಾಮ ಪಂಚಾಯತ ಉಪಾಧ್ಯಕ್ಷರಾದ ಸುರೇಶ್ ಕಣ್ಣೊಟ್ಟು ,ಗ್ರಾಮ ಪಂಚಾಯತ್ ಸದಸ್ಯ ರಾಜೀವ, ಮಾಜಿ ಎಸ್.ಡಿ.ಎಂ.ಸಿ ಅಧ್ಯಕ್ಷ ರಾಜೇಶ, ಹಿರಿಯರಾದ ಜನಾರ್ಧನ, ಕಲ್ಲಡ್ಕ ಶೌರ್ಯ ವೀಪತು ಘಟಕ ಸಂಯೋಜಕಿ ವಿದ್ಯಾ, ಸದಸ್ಯರುಗಳಾದ ತುಳಸಿ, ಸೌಮ್ಯ, ಧನಂಜಯ, ಚಿನ್ನಾ, ಶಾಲೆಯ ವಿದ್ಯಾರ್ಥಿಗಳು, ಶಾಲಾಭಿವೃದ್ಧಿ ಸಮಿತಿ ಸದಸ್ಯರುಗಳು, ಮಕ್ಕಳ ಪೋಷಕರು, ಭಾಗವಹಿಸಿದರು. ಶಾಲಾ ಮುಖ್ಯ ಶಿಕ್ಷಕಿ ಚೇತನ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.