
ಬಾಳೆಹೊನ್ನೂರು : ಅರಣ್ಯ ಇಲಾಖೆಗೆ ವ್ಯಾಪ್ರಿಗೆ ಬರುವ ಹ್ಯಾರಂಬೆಯಲ್ಲಿ ಆನೆ ದಾಳಿಗೆ ಮತ್ತೊಂದು ಬಲಿಯಾದ ಘಟನೆ ಇಂದು (ಫೆ. 22) ನಡೆದಿದೆ. ತೋಟದ ಕೆಲಸದ ಕಾರ್ಮಿಕೆ ಹಾವೇರಿ ಮೂಲದ ಬೋರಮ್ಮ(33) ಆನೆ ದಾಳಿಗೆ ಬಲಿಯಾಗಿದ್ದಾರೆ. ವಾರದ ಹಿಂದೆ ಕಾರ್ಮಿಕನನ್ನು ಬಲಿ ಪಡೆದಿದ್ದ ಜಾಗದಲ್ಲಿಯೇ ಮತ್ತೊಂದು ಬಲಿಯಾಗಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

