ಜ.4ರಂದು ವಂದೇ ಮಾತರಂ ಲಲಿತ ಕಲಾ ಅಕಾಡೆಮಿ ( ರಿ.) ಬೆಂಗಳೂರು ಸಂಸ್ಥೆಯ ಸಂಕ್ರಾಂತಿ ಸಂಭ್ರಮ 2026 ಕಾರ್ಯಕ್ರಮ

0
78

ಉಡುಪಿ : ವಂದೇ ಮಾತರಂ ಲಲಿತ ಕಲಾ ಅಕಾಡೆಮಿ ( ರಿ.) ಬೆಂಗಳೂರು ಸಂಸ್ಥೆಯ “ಸಂಕ್ರಾಂತಿ ಸಂಭ್ರಮ 2026″ ಕಾರ್ಯಕ್ರಮವನ್ನು ದಿನಾಂಕ 04-01-2026 ಭಾನುವಾರ ಬೆಂಗಳೂರಿನ ನಯನ ಸಭಾಂಗಣದಲ್ಲಿ ಸಂಜೆ 5 ಗಂಟೆಗೆ ಸಂಗೀತ , ನೃತ್ಯ, ಹಾಗೂ ರಾಜ್ಯ ಮಟ್ಟದ ಹಲವು ಪ್ರಶಸ್ತಿ ವಿಜೇತ ” ಕಾಲಗರ್ಭ” ನಾಟಕದ ಪುಸ್ತಕ ಲೋಕಾರ್ಪಣೆ , ಮತ್ತು ” ಕರುನಾಡ ಕಾಯಕ ಯೋಗಿ ” ರಾಜ್ಯ ಪ್ರಶಸ್ತಿ ಸಮಾರಂಭ 50 ನಿಮಿಷದ ” ಕಾಲ ಗರ್ಭ ” ನಾಟಕ ಪ್ರಯೋಗ ವಿದೆ ಈ ಕಾರ್ಯಕ್ರಮಕ್ಕೆ ಸನ್ಮಾನ್ಯ ಸಂತೋಷ್ ಹೆಗ್ಡೆ ನಿವೃತ್ತ ನ್ಯಾಯಮೂರ್ತಿ ಹಾಗೂ ಲೋಕಾಯುಕ್ತರು ಪಾಲ್ಗೋಳ್ಳುತ್ತಿದ್ದಾರೆ ಜೊತೆಯಲ್ಲಿ ಸಿನಿಮಾ ತಾರೆಯರು ಆಗಮಿಸುತ್ತಿದ್ದಾರೆ ಎಂದು ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ .

ಅದರಲ್ಲೂ ಕರಾವಳಿಯಲ್ಲಿ ಪ್ರಮುಖರಾಗಿ ಪ್ರಶಸ್ತಿ ಪುರಸ್ಕಾರಕ್ಕೆ ಆಯ್ಕೆಯಾದವರು.

ವಿಜಯ ಪೂಜಾರಿ – ದೈವರಾಧನೆ ಕ್ಷೇತ್ರ : (ಶ್ರೀ ಬ್ರಹ್ಮ ಬೈದರ್ಕಳ ಹಳೆಗರಡಿ ಪ್ರದಾನ ಅರ್ಚಕರು)

ಗೋಪಾಲ ಮಡಿವಾಳ – ದೈವರಾಧನೆ ಕ್ಷೇತ್ರ ( ದರ್ಶನ ಪಾತ್ರಿ )
ವಾಸು ಶೇರಿಗಾರ್ -ದೈವಾರಾಧನೆ ಕ್ಷೇತ್ರ ( ದರ್ಶನ ಪಾತ್ರಿ )
ಸುಕನ್ಯಾ ಶೆಟ್ಟಿ -ಸಮಾಜ ಸೇವೆ
ಸದಾನಂದ ಸಾಲಿಯಾನ್ – ದೈವಾರಾಧನೆ ಕ್ಷೇತ್ರ , ಧಾರ್ಮಿಕ ಹಾಗೂ ಸಮಾಜ ಸೇವೆ
ಹಾಗೂ ಮೂವತ್ತಕ್ಕೂ ಹೆಚ್ಚು ಮಂದಿ ಆಯ್ಕೆಯಾಗಿದ್ದಾರೆ.

ಕಾರ್ಯಕ್ರಮವನ್ನು ವೀರೇಶ್ ಮುತ್ತಿನಮಠ ರಂಗಕರ್ಮಿ ಆಯೋಜಿಸಿದ್ದಾರೆ.

ವರದಿ ವಿನೋದ್ ಶೆಟ್ಟಿ.

LEAVE A REPLY

Please enter your comment!
Please enter your name here