ಬೆಂಗಳೂರು : ಪತ್ನಿ ಕೊಲೆ ಪ್ರಕರಣ – 15 ದಿನ ಗನ್ ತರಬೇತಿ ಪಡೆದಿದ್ದ ಪತಿ

0
107

ಬೆಂಗಳೂರು: ಪತ್ನಿ ವಿಚ್ಛೇಧನ ನೀಡಿಲ್ಲ ಎಂಬ ಕಾರಣಕ್ಕೆ ಆಕೆಯನ್ನು ಹತ್ಯೆಗೈಯ್ಯುವ ಪ್ಲಾನ್ ಮಾಡಿದ್ದ ಪತಿ ಮಹಾಶಯನೊಬ್ಬ 15 ದಿನಗಳ ಕಾಲ ಗನ್ ಟ್ರೇನಿಂಗ್ ಪಡೆದ್ದಲ್ಲದೇ ಎರಡು ಗನ್ ಗಳನ್ನು ಖರೀದಿಸಿ ತಂದು ಬಳಿಕ ಪತ್ನಿಯನ್ನು ಗುಂಡಿಕ್ಕಿ ಕೊಂದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬಾಲಮುರುಗನ್ ಪತ್ನಿ ಭುವನೇಶ್ವರಿಯನ್ನು ಗುಂಡಿಕ್ಕಿ ಕೊಂದ ನಟೋರಿಯಸ್ ವ್ಯಕ್ತಿ . ಡಿಸೆಂಬರ್ 24 ರಂದು ಮಾಗಡಿ ರಸ್ತೆಯ ವೆಸ್ಟ್ ಆಫ್ ಕಾರ್ಡ್ ರೋಡ್ ನಲ್ಲಿ ನಡೆದಿದ್ದ ಭೀಕರ ಕೊಲೆಯ ಹಿಂದೆ ಪತಿಯ ಪೂರ್ವನಿಯೋಜಿತ ಮಾಸ್ಟರ್ ಮೈಂಡ್ ಇರುವುದನ್ನು ಕಂಡು ಪೊಲೀಸರೇ ಬೆಚ್ಚಿ ಬಿದ್ದಿದ್ದಾರೆ.

ಪತ್ನಿ ಮಹಾಶಯ ಬಾಲಮುರುಗನ್, ಪತ್ನಿಯನ್ನು ಕೊಲ್ಲುವ ಉದ್ದೇಶದಿಂದಲೇ ಎರಡು ಗನ್ ಖರೀದಿ ಮಾಡಿದ್ದನಂತೆ, ಮೂರು ಬಾರಿ ಬಿಹಾರಕ್ಕೆ ಹೋಗಿದ್ದ. ಎರಡು ಬಾರಿ ಬಿಹಾರಕ್ಕೆ ಹೋದಾಗಲೂ ಹಣ ಕಳೆದುಕೊಂಡು ಗನ್ ಸಿಗದೇ ಮೋಸ ಹೋಗಿದ್ದ . ಮೂರನೇ ಬಾರಿ ಬಿಹಾರಕ್ಕೆ ಹೋದವನು ಗನ್ ಖರಿದಿಸಿಯೇ ಬಿಟ್ಟಿದ್ದ , ಅಲ್ಲದೇ ಬಿಹಾರದಲ್ಲಿ 15 ದಿನಗಳ ಕಾಲ ಗನ್ ಬಳಸುವ ಟ್ರೇನಿಂಗ್ ನ್ನೂ ಪಡೆದಿದ್ದ.

ಹೀಗೆ ಖರೀದಿಸಿದ್ದ ಒಂದು ಗನ್ ನ್ನು ಪತ್ನಿ ಕೊಲ್ಲುವಂತೆ ತಮಿಳುನಾಡು ಮೂಲದ ವ್ಯಕ್ತಿಯೊಬ್ಬನಿಗೆ ಗನ್ ಕೊಟ್ಟು ಸುಪಾರಿ ನೀಡಿದ್ದ. 1.25 ಲಕ್ಷ ಹಣ ಪಡೆದಿದ್ದ ಸುಪಾರಿ ಕಿಲ್ಲರ್, ಬೆಂಗಳೂರಿಗೆ ಬಂದು ಲಾಡ್ಜ್ ವೊಂದರಲ್ಲಿ ತಂಗಿ, ಭುವನೇಶ್ವರಿಯನ್ನು ವಾಚ್ ಮಾಡಿದ್ದ. ಬಾಲಮುರುಗನ್ ತಾನೂ ನಿನ್ನ ಜೊತೆ ಇರುತ್ತೇನೆ. ಆದರೆ ಗನ್ ನಿಂದ ನೀನು ಗುಂಡು ಹಾರಿಸಿ ಕೊಲ್ಲಬೇಕು ಎಂದು ಕರೆದೊಯ್ದರೂ, ಸುಪಾರಿ ಕಿಲ್ಲರ್ ಕೊಲೆ ಮಾಡದೇ ವಾಪಸ್ ತೆರಳಿದ್ದ.

ಸುಪಾರಿ ಕಿಲ್ಲರ್ ತನ್ನ ಪತ್ನಿ ಹತ್ಯೆಗೆ ಒಪ್ಪದಿದ್ದಾಗ ಬಾಲಮುರುಗನ್ ತಾನೇ ಸ್ವತಃ ಪತ್ನಿ ಕೊಲ್ಲಲು ಮುಂದಾಗಿದ್ದಾನೆ. ಎರಡು ಬಾರಿ ಕೊಲೆ ಯತ್ನ ನಡೆಸಿದರೂ ಧೈರ್ಯ ಸಾಲದೇ ಸುಮ್ಮನಾಗಿದ್ದಾನೆ. ಮುರನೇ ಬಾರಿ ಪತ್ನಿಯನ್ನು ಗುಂಡಿಕ್ಕಿ ಕೊಂದೇ ಬಿಟ್ಟಿದ್ದಾನೆ.

ಇಷ್ಟಕ್ಕು ಪತ್ನಿ ಮೇಲಿನ ಈ ದ್ವೇಷಕ್ಕೆ ಕಾರಣ ಆಕೆ ತಾನು ಹೇಳಿದಂತೆ ವಿಚ್ಛೇಧನ ನೀಡಿಲ್ಲ ಎಂಬುದು. ಹೆಂಡತಿ ಡಿವೋರ್ಸ್ ಕೊಡಲಿಲ್ಲ ಎಂಬ ಕಾರಣಕ್ಕೆ ಆಕೆಯನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ ಪತಿ. ಆರೋಪಿ ಬಾಲಮುರುಗನ್ ನನ್ನು ಹಾಗೂ ಸುಪಾರಿ ಪಡೆದಿದ್ದ ಕಿಲ್ಲರ್ ನನ್ನೂ ಬಂಧಿಸಲಾಗಿದೆ.

LEAVE A REPLY

Please enter your comment!
Please enter your name here