ಮೂಡುಬಿದಿರೆ : ಶ್ರೀ ಗುರು ರಾಘವೇಂದ್ರ ಕುಣಿತ ಭಜನಾ ಮಂಡಳಿ ಬನ್ನಡ್ಕ ಇವರ ನೇತೃತ್ವದಲ್ಲಿ “ಬನ್ನಡ್ಕ ಭಜನಾಮೃತ 2025” ಭಕ್ತರ ಸಮಾಗಮ ಕಾರ್ಯಕ್ರಮವು ಶ್ರೀ ಕ್ಷೇತ್ರ ಬನ್ನಡ್ಕದಲ್ಲಿ ಅದ್ದೂರಿಯಾಗಿ ನಡೆಯಿತು.
ಈ ಸಂದರ್ಭದಲ್ಲಿ ಭಜನಾ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆ ಮತ್ತು ಸಮರ್ಪಣೆಯನ್ನು ಪರಿಗಣಿಸಿ ಆಧುನಿಕ ಕನಕದಾಸ ಬಿರುದಾಂಕಿತ ವಿಜಯ್ ನೀರ್ಕೆರೆ ಅವರಿಗೆ ‘ಗುರುರತ್ನ ಶಿರೋಮಣಿ’ ಗೌರವ ಪ್ರದಾನ ಮಾಡಲಾಯಿತು. ಭಜನಾ ಪರಂಪರೆಯ ಉಳಿವಿಗೆ ಹಾಗೂ ವಿಸ್ತರಣೆಗೆ ನೀಡಿರುವ ಸೇವೆಯನ್ನು ಮೆಚ್ಚಿ ಅತಿಥಿ ಗಣ್ಯರು ಶ್ಲಾಘನೇ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ದಯಾನಂದ್ ಪೈ ಅಧ್ಯಕ್ಷರು, ಬನ್ನಡ್ಕ ಶಾರದೋತ್ಸವ ಸಮಿತಿ. ಸಹನಾ ಕುಂದರ್ ವಕೀಲರು ಉಡುಪಿ, ಪೂರ್ಣಚಂದ್ರ ಜೈನ್ ಮಾಲಕರು ಪ್ರಭಾತ್ ಸಿಲ್ಕ್, ಸುಕುಮಾರ್ ಬಲ್ಲಾಳ್, ವಾಸುದೇವ ಭಟ್, ರಾಘವೇಂದ್ರ ಭಂಡಾರ್ಕರ್, ಸರಿತಾ ಪ್ರವೀಣ್ ಪೂಜಾರಿ. ಸತೀಶ್ ಪೂಜಾರಿ ಸಂಚಾಲಕರು ಭಜನಾ ಮಂಡಳಿ.
ರಾಮ್ ಕುಮಾರ್ ಕಾರ್ಯಕ್ರಮವನ್ನು ನಿರೂಪಿಸಿದರು. ರಾಜೇಶ್ ಕಾಮತ್, ಬಾಲಕೃಷ್ಣ ಶೆಟ್ಟಿ, ನಿತೀನ್ ಮುನ್ನೇರ್, ದಿನೇಶ್ ಆಚಾರ್ಯ, ಭವ್ಯ ಸತೀಶ್ ಕೋಟ್ಯಾನ್, ಸಂದೇಶ್ ಮದ್ದಡ್ಕ ಉಪಸ್ಥಿತರಿದ್ದರು.

