ಬಂಟ್ವಾಳ:ಅತ್ಯಂತ ಸರಳ ಹಾಗೂ ವಿದ್ಯಾರ್ಥಿ ಪ್ರೇಮಿಯಾಗಿದ್ದ ಡಾ.ಎ.ಪಿ.ಜೆ. ಅಬ್ದುಲ್‌ಕಲಾಂರವರುತಮ್ಮಜೀವನವೇ ಸಂದೇಶವೆAದು ಸಾರಿದವರು.ರಾಷ್ಟçಪತಿಯಾಗಿದ್ದಾಗ ಮಾಡಿದಂತಹ ಕಾರ್ಯಗಳು ಚಿರಸ್ಮರಣೀಯವಾದುದು ಎಂದು ಎಸ್.ವಿ.ಎಸ್. ಕಾಲೇಜಿನ ಪ್ರಾಂಶುಪಾಲರಾದಶ್ರೀ ಎಂ.ಡಿ.ಮಂಚಿ ನುಡಿದರು. ಇವರುಕಾಲೇಜಿನ ವಿಜ್ಞಾನ ಸಂಘ ಹಾಗೂ ಐ.ಕ್ಯೂ.ಎ.ಸಿ.ಜಂಟಿ ಆಶ್ರಯದಲ್ಲಿ ನಡೆದ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಜನ್ಮ ದಿನಾಚರಣೆ ನಿಮಿತ್ತ ನಡೆದ ವಿಶ್ವ ವಿದ್ಯಾರ್ಥಿಗಳ ದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ.ಸುಯೋಗ ವರ್ಧನ್ ಡಿ.ಎಮ್.ರವರುಡಾ.ಕಲಾಂರವರ ಸಾಧನೆಗಳು, ವೈಜ್ಞಾನಿಕ ಕೊಡುಗೆಗಳು ಮತ್ತು ಜೀವನ ಶೈಲಿಯ ಕುರಿತು ವಿವರಿಸಿದರು. ವೇದಿಕೆಯಲ್ಲಿ ರಸಾಯನಿಕ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಝೀನಾ ಕೊಹಿಲೊ ಹಾಗೂ ಐ.ಕ್ಯು.ಎ.ಸಿ.ಸಂಯೋಜಕರಾದ ಡಾ.ಕಾಶೀನಾಥ ಶಾಸ್ತ್ರೀ ಹೆಚ್.ವಿ. ಉಪಸ್ಥಿತರಿದ್ದರು.ಗಣಿತ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶ್ರೀದೇವಿ ನಿರೂಪಿಸಿ, ವಿಜ್ಞಾನ ವೇದಿಕೆಯ ಅಧ್ಯಕ್ಷರಾದ ಡಾ.ವಿನಾಯಕಕೆ.ಎಸ್. ಸ್ವಾಗತಿಸಿದರು.ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಸುಪ್ರೀತ್ ಕಡಕೋಳ್ ವಂದಿಸಿದರು.