ದಿನಾಂಕ 01-03-2026 ರಂದು ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳ ವಸತಿ ನಿಲಯ, ಪಾಣೆಮಂಗಳೂರು ಇಲ್ಲಿ ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ಕರ್ನಾಟಕ ಇದರ ದಕ್ಷಿಣ ಕನ್ನಡ ಜಿಲ್ಲಾ ಪದಗ್ರಹಣ ಸಮಾರಂಭ ಮತ್ತು ಬಂಟ್ವಾಳ ತಾಲೂಕು ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ವರ್ಷದ ಹರ್ಷ ಕಾರ್ಯಕ್ರಮವು ಯಶಸ್ವಿಯಾಗಿ ಸಂಪನ್ನಗೊಂಡಿತು.
ವಸತಿ ಶಾಲೆಯ ಅಂಗಳದಲ್ಲಿ ಕಲ್ಪವೃಕ್ಷವನ್ನು ನೆಡುವ ಮೂಲಕವಾಗಿ ಕಾರ್ಯಕ್ರಮವು ಉದ್ಘಾಟನೆಗೊಂಡು ದಿ. ದೇವರಾಜ ಅರಸು ಇವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇದರ ತಾಲೂಕು ಅಧಿಕಾರಿಯಾಗಿರುವ ಶೇಷಗಿರಿ ನಾಯ್ಕ್ ಇವರು ದೀಪ ಪ್ರಜ್ವಲನ ಮಾಡಿ ಶುಭಹಾರೈಸುವುದರ ಮೂಲಕವಾಗಿ ಕಾರ್ಯಕ್ರಮವು ಸಾಂಕೇತಿಕವಾಗಿ ಚಾಲನೆಗೊಂಡಿತು.
ಆಮಂತ್ರಣ ಪರಿವಾರದ ಸಂಸ್ಥಾಪಕರಾದ ವಿಜಯಕುಮಾರ್ ಜೈನ್ ಪದಪ್ರದಾನ ನೆರವೇರಿಸಲಾಗಿ ಕಾರ್ಯಕ್ರಮದ ರೂಪುರೆಷೆಗಳನ್ನು ಹೇಳಿ ಶುಭ ಹಾರೈಸಿದರು. ಈ ಕಾರ್ಯಕ್ರಮದಲ್ಲಿ ವಿಶೇಷ ಚೇತನವಾಗಿದ್ದುಕೊಂಡು ಶಿಕ್ಷಣ ಕ್ಷೇತ್ರದಲ್ಲಿ ವಿಭಿನ್ನ ಸಾಧನೆಗೈದ ಕು. ನೇಹಾ ರೈ ಇವರಿಗೆ ವಿಶೇಷ ಗೌರವ ಸನ್ಮಾನವನ್ನು ಮಾಡಲಾಯಿತು. ಮತ್ತು ಹರೀಶ್ ಮಂಜೊಟ್ಟಿ, ಎಚ್. ಕೆ ನಯನಾಡು, ವಿದ್ಯಾರ್ಥಿ ಸಾಧಕರಾಗಿ ನಿನಾದ್ ಕೈರಂಗಳ, ಶೀರ್ಷಿತಾ ಕಾರಂತ್, ಧನ್ವಿತಾ ಕಾರಂತ್, ಸಾಂಸ್ಕೃತಿಕ ಕ್ಷೇತ್ರದಲ್ಲಿ ವಿಂಧ್ಯಾ ಎಸ್ ರೈ ಕಡೇಶಿವಾಲಯ ಮತ್ತು ರೂಪೇಶ್ ವಿಟ್ಲ, ಸಮಾಜ ಸೇವೆಯಲ್ಲಿ ಚೇತನ್ ಕುಮಾರ್ ಅಮೈ ಮತ್ತು ರಾಕೇಶ್ ಪೊಳಲಿ, ಪದಾಧಿಕಾರಿಗಳ ಸೇವೆಯಲ್ಲಿ ಸುಚಿತ್ರ ಭಟ್ ಕಲ್ಲಡ್ಕ, ಮತ್ತು ಆಮಂತ್ರಣ ಜಿಲ್ಲಾ ವೇದಿಕೆಯ ಪ್ರಥಮ ಅಧ್ಯಕ್ಷರಾಗಿದ್ದ ನಿರೀಕ್ಷಿತಾ ಮಂಗಳೂರು ಮತ್ತು ಆಮಂತ್ರಣ ಪರಿವಾರದ ಸಂಸ್ಥಾಪಕರಾದ ವಿಜಯ್ ಕುಮಾರ್ ಜೈನ್ ಮತ್ತು ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ಬಂಟ್ವಾಳ ಇದರ ಪ್ರಥಮ ಅಧ್ಯಕ್ಷರಾಗಿ ಒಂದು ವರ್ಷವನ್ನು ಯಶಸ್ವಿ ಮತ್ತು ಅರ್ಥಪೂರ್ಣವಾಗಿ ಪೂರೈಸಿದ ನಿಟ್ಟಿನಲ್ಲಿ ರಶ್ಮಿತಾ ಸುರೇಶ್ ಜೋಗಿಬೆಟ್ಟು ಇವರನ್ನು ಸನ್ಮಾನಿಸಲಾಯಿತು.

ಮೆಟ್ರಿಕ್ ಪೂರ್ವ ವಸತಿ ನಿಲಯ ಬೊಂಡಾಲ ಮತ್ತು ಕಲ್ಲಡ್ಕದ ವಿದ್ಯಾರ್ಥಿಗಳಿಗೆ ಚಿತ್ರಕಲಾ ಶಿಕ್ಷಕರು ಮತ್ತು ಸಂಪನ್ಮೂಲ ವ್ಯಕ್ತಿಯಾಗಿರುವ ತಾರನಾಥ್ ಕೈರಂಗಳ ಚಿತ್ರಕಲಾ ತರಬೇತಿಯನ್ನು ಮತ್ತು ಸರ್ವ ಸಭಿಕರಿಗೆ ದ.ಕ ಜಿಲ್ಲಾ ಉತ್ತಮ ಶಿಕ್ಷಕ ಶಿಕ್ಷಕರು ಮತ್ತು ಸಂಪನ್ಮೂಲ ವ್ಯಕ್ತಿಯಾಗಿರುವ ಗೋಪಾಲ ಕೃಷ್ಣ ನೇರಳಕಟ್ಟೆ ಇವರು ವ್ಯಕ್ತಿತ್ವ ವಿಕಸನ ತರಬೇತಿಯನ್ನು ನೀಡಿದರು. ಮತ್ತು ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಮತ್ತು ಬಹುಮಾನ ನೀಡಲಾಯಿತು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಬಂಟ್ವಾಳ ತಾಲೂಕು ಅಧ್ಯಕ್ಷರಾದ ವಿಶ್ವನಾಥ್ ಬಂಟ್ವಾಳ, ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಅಧ್ಯಕ್ಷರಾದ ಪುತ್ತೂರು ಉಮೇಶ್ ನಾಯಕ್ ಕಾರ್ಯಕ್ರಮಕ್ಕೆ ಮಾರ್ಗದರ್ಶನ ಮತ್ತು ಶುಭ ಹಾರೈಸಿದರು.
ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳ ವಸತಿ ನಿಲಯದ ಮೇಲ್ವಿಚಾರಕರಾದ ವಿಶ್ವನಾಥ್, ಚಿತ್ರಕಲಾ ಶಿಕ್ಷಕರು ಮತ್ತು ಸಂಪನ್ಮೂಲ ವ್ಯಕ್ತಿಗಳಾಗಿರುವ ತಾರನಾಥ್ ಕೈರಂಗಳ ಮತ್ತು. ಕ. ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಶಿಕ್ಷಕರಾದ ಗೋಪಾಲಕೃಷ್ಣ ನೇರಳಕಟ್ಟೆ, ಮಧು ಪ್ರಪಂಚ ಪತ್ರಿಕೆಯ ಸಂಪಾದಕರು, ಸಾಹಿತಿಗಳಾದ ನಾರಾಯಣ ರೈ ಕುಕ್ಕುವಳ್ಳಿ ಆಮಂತ್ರಣ ಉಡುಪಿ ಜಿಲ್ಲಾ ಅಧ್ಯಕ್ಷರಾದ ಪುಷ್ಪಪ್ರಸಾದ್ ಉಡುಪಿ, ಚಿಕ್ಕಮಗಳೂರು ಜಿಲ್ಲಾ ಅಧ್ಯಕ್ಷರಾದ ಅಮಿತಾ ಶಮಂತ್, ಆಮಂತ್ರಣ ವೇದಿಕೆ ದಕ್ಷಿಣ ಕನ್ನಡ ಉಪಾಧ್ಯಕ್ಷರಾದ ಅನಿತಾ ಶೆಟ್ಟಿ ಮೂಡಬಿದ್ರೆ ಮತ್ತು ರಾಜ್ಯ ಪ್ರತಿನಿಧಿಗಳಾದ ಎಚ್. ಕೆ ನಯನಾಡು, ಉಮಾ ಸುನಿಲ್ ಹಾಸನ, ಆಶಾ ಅಡೂರು, ಬೆಳ್ತಂಗಡಿ ಘಟಕದ ಅಧ್ಯಕ್ಷರಾದ ವಿದ್ಯಾಶ್ರೀ ಅಡೂರು, ಮಂಗಳೂರು ಘಟಕದ ಅಧ್ಯಕ್ಷರಾದ ಲತೇಶ್ ಪುತ್ರನ್, ಪುತ್ತೂರು ಘಟಕದ ಅಧ್ಯಕ್ಷರಾದ ಆಶಾಮಯ್ಯ, ಮತ್ತು ದಕ್ಷಿಣಕನ್ನಡ, ಉಡುಪಿ, ಚಿಕ್ಕಮಗಳೂರು ಜಿಲ್ಲೆಯ ನಿರ್ದೇಶಕರು ಮತ್ತು ಪದಾಧಿಕಾರಿಗಳು, ಪುತ್ತೂರು ಗ್ರಾಮಸಾಹಿತ್ಯ ಸಂಭ್ರಮದ ಸಂಚಾಲಕರದ ನಾರಾಯಣ ಕುಂಬ್ರ ಇತರರು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳು ಪ್ರಾರ್ಥನೆ ಹಾಡಿ, ಜಿಲ್ಲಾ ಅಧ್ಯಕ್ಷರಾದ ವಿಂಧ್ಯಾ ಎಸ್ ರೈ ಅಧ್ಯಕ್ಷ ನುಡಿಗಳನ್ನಾಡಿ, ವಿಜಯ್ ಕುಮಾರ್ ಜೈನ್ ಪದಪ್ರದಾನ ಮಾಡಿ, ತಾಲೂಕು ಅಧ್ಯಕ್ಷೆ ರಶ್ಮಿತಾ ಸುರೇಶ್ ಜೋಗಿಬೆಟ್ಟು ಪ್ರಸ್ತಾವನೆ ಮಾಡಿ, ಉಪಾಧ್ಯಕ್ಷೆ ಅನಿತಾ ಶೆಟ್ಟಿ ವಂದಿಸಿ, ರಾಜ್ಯ ಪ್ರತಿನಿಧಿ ಎಚ್. ಕೆ. ನಯನಾಡು ನಿರೂಪಿಸಿದರು.

