ಬಂಟ್ವಾಳ : ಇಲ್ಲಿನ ಬಂಟ್ವಾಳ ಬೈಪಾಸ್ ನಿತ್ಯಾನಂದ ನಗರ ಶ್ರೀ ನಿತ್ಯಾನಂದ ಗೋವಿಂದ ಸ್ವಾಮಿ ಭಜನಾ ಮಂದಿರದಲ್ಲಿ 32ನೇ ವರ್ಷದ ಆರಾಧನಾ ಮಹೋತ್ಸವ ಮತ್ತು ಸಂತಾನ ಗೋಪಾಲಕೃಷ್ಣ ಜಪ ಮತ್ತು ಹವನ ಹಾಗೂ 53ನೇ ಭಜನಾ ಮಂಗಲೋತ್ಸವ ಕಾರ್ಯಕ್ರಮ ಜ.20 ರಿಂದ 25ರತನಕ ನಡೆಯಲಿದೆ.
ಪ್ರತಿದಿನ ಭಜನೆ ಮತ್ತು ಮಹಾಪೂಜೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ ಎಂದು ಆಡಳಿತ ಸಮಿತಿ ಅಧ್ಯಕ್ಷ ಬಿ.ದಿನೇಶ ಭಂಡಾರಿ ತಿಳಿಸಿದ್ದಾರೆ.
