ಬಂಟ್ವಾಳ ಎಸ್ ವಿ ಎಸ್ ಕ್ರೀಡಾಂಗಣದಲ್ಲಿ ಎಲ್ಲೈಸಿ ಪ್ರತಿನಿಧಿಗಳ ವತಿಯಿಂದ ಸೋಮವಾರ ನಡೆದ ಕ್ರೀಡೋತ್ಸವ ಕಾರ್ಯಕ್ರಮದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕ್ರೀಡೆಯಿಂದ ಆರೋಗ್ಯ ವೃದ್ಧಿ ಜೊತೆಗೆ ಕ್ರೀಡಾ ಮನೋಭಾವದಿಂದ ವ್ಯಾವಹಾರಿಕ ಬೆಳವಣಿಗೆ ಕಂಡುಕೊಳ್ಳಲು ಸಾಧ್ಯವಿದೆ ಎಂದು ಎಲ್ಲೈಸಿ ನಿವೃತ್ತ ಹಿರಿಯ ವಿಭಾಗೀಯ ಮೆನೇಜರ್ ಬಾಲಕೃಷ್ಣ ನಾಯ್ಕ್ ಹೇಳಿದ್ದಾರೆ.
ಇಲ್ಲಿನ ಬಂಟ್ವಾಳ ಎಸ್ ವಿ ಎಸ್ ಕ್ರೀಡಾಂಗಣದಲ್ಲಿ ಎಲ್ಲೆöÊಸಿ ಅಭಿವೃದ್ಧಿ ಅಧಿಕಾರಿ ಮಧ್ವರಾಜ್ ಕಲ್ಮಾಡಿ ನೇತೃತ್ವದ ಪ್ರತಿನಿಧಿಗಳ ತಂಡದ ಬೆಳ್ಳಿಹಬ್ಬ ಪ್ರಯುಕ್ತ ಸೋಮವಾರ ನಡೆದ ಕ್ರೀಡೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಬಂಟ್ವಾಳ ಶಾಖೆ ಹಿರಿಯ ಮೆನೇಜರ್ ಗುರುದತ್ತ್ ನಾಯಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಹಾಯಕ ಮೆನೇಜರ್ ಮುತ್ತಯ್ಯ ಮರಾಠೆ ಶುಭ ಹಾರೈಸಿದರು. ಕ್ರೀಡಾ ಸಂಚಾಲಕರಾದ ಸತ್ಯನಾರಾಯಣ ರೈ, ವೇದಾವತಿ, ಪ್ರೀತಿ ಹೆಗ್ಡೆ ಮತ್ತಿತರರು ಇದ್ದರು. ಅಭಿವೃದ್ಧಿ ಅಧಿಕಾರಿ ಮಧ್ವರಾಜ್ ಕಲ್ಮಾಡಿ ಸ್ವಾಗತಿಸಿ, ಬೆಳ್ಳಿಹಬ್ಬ ಸಂಚಾಲಕ ಲೂವಿಸ್ ಮಸ್ಕರೇನಸ್ ವಂದಿಸಿದರು. ನವೀನ್ ಕೊಡ್ಮಾಣ್ ಕಾರ್ಯಕ್ರಮ ನಿರೂಪಿಸಿದರು.
