ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮಿ ಇಂಗ್ಲೀಷ್ ಮೀಡಿಯಂ ಶಾಲೆ; ಬರವುದ ಬಿತ್ತಿಲ್ಲ್ಡ್ ಆಟಿದ ಲೇಸ್

0
40

ಬಂಟ್ವಾಳ: ಶ್ರೀ ವೆಂಕಟರಮಣ ಸ್ವಾಮಿ ಇಂಗ್ಲೀಷ್ ಮೀಡಿಯಂ ಶಾಲೆ ವಿದ್ಯಾಗಿರಿ ಬಂಟ್ವಾಳ, ಇಲ್ಲಿ ದಿನಾಂಕ ಸ್ಕೌಟ್, ಗೈಡ್ಸ್, ಎನ್.ಸಿ.ಸಿ ಘಟಕದ ವತಿಯಿಂದ ‘ಬರವುದ ಬಿತ್ತಿಲ್ಲ್ಡ್ ಆಟಿದ ಲೇಸ್’ ಕಾರ್ಯಕ್ರಮವು ಅತ್ಯಂತ ವಿಜೃಂಭಣೆಯಿಂದ ನಡೆಯಿತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕಂಚಿನ ಕಂಠದ ತುಳು ನಿರೂಪಕರಾದ ದಿನೇಶ್ ಸುವರ್ಣ ರಾಯಿ ಆಗಮಿಸಿದರು. ದೀಪ ಬೆಳಗಿಸಿ ತೆಂಗಿನ ಹೂ ಅರಳಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಯಿತು. ಯಸ್ಮಿತಾ ವೈ . ಅವರ ತಂಡದಿಂದ ತುಳು ಪಾಡ್ದನ ನೆರವೇರಿತು. ಮುಖ್ಯ ಅಥಿತಿಗಳು ತುಳು ನಾಡಿನ ಜಾನಪದ ಕತೆಯೊಂದಿಗೆ, ವಿಶಿಷ್ಟ ಆಚರಣೆಯಾದ ಆಟಿ ತಿಂಗಳಿನ ಮಹತ್ವದ ಕುರಿತು ವಿದ್ಯಾರ್ಥಿಗಳಿಗೆ ಮನ ಮುಟ್ಟುವಂತೆ ತಿಳಿಸಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಹರಿಪ್ರಸಾದ್ ವಹಿಸಿದರು. ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾದ ಚೈತ್ರ ಶೆಟ್ಟಿ ಮತ್ತು ಪೂರ್ವಪ್ರಾಥಮಿಕ ವಿಭಾಗದ ಸಂಯೋಜಕಿಯಾದ ವೀಣಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಎಲ್ಲಾ ಶಿಕ್ಷಕರು ಮತ್ತು ಎಲ್ಲಾ ವಿದ್ಯಾರ್ಥಿಗಳು ಪಾಲ್ಗೊಂಡರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿವಿಧ ತುಳು ನೃತ್ಯ , ಹಾಡು, ಪ್ರಹಸನ ನಡೆದವು ಹಾಗೂ ತುಳುನಾಡಿನ ಸಂಸ್ಕೃತಿಯನ್ನು ಬಿಂಬಿಸುವ ವಿವಿಧ ಆಟಗಳನ್ನು ವಿದ್ಯಾರ್ಥಿಗಳಿಗೆ ಆಯೋಜನೆ ಮಾಡಲಾಯಿತು. ಆಟಿ ತಿಂಗಳ ವಿಶಿಷ್ಟ ಖಾದ್ಯಗಳನ್ನು ಪೋಷಕರ ಸಹಯೋಗದಿಂದ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.
ವಿದ್ಯಾರ್ಥಿಗಳಾದ ಕುಮಾರಿ ನಿತೀಕ್ಷಾ ಸ್ವಾಗತಿಸಿದರು, ಆಕಾಶ್ ವಂದಿಸಿ , ಕುಮಾರಿ ಯಸ್ಮಿತಾ ವೈ, ಪ್ರಣವಿ ಆರ್ ಸುವರ್ಣ, ತನುಷ್ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು.

LEAVE A REPLY

Please enter your comment!
Please enter your name here