ಆಭರಣ ಧರಿಸಿ ಸ್ಕ್ಯಾನಿಂಗ್‌ ಸೆಂಟರ್‌ ಒಳಗಡೆ ಹೋಗುವರೇ ಎಚ್ಚರ..! ಎಂಆರ್​ಐ ಯಂತ್ರದೊಳಗೆ ಸಿಲುಕಿ ವ್ಯಕ್ತಿ ಸಾವು!

0
126

ನ್ಯೂಯಾರ್ಕ್​: ಎಂಆರ್​ಐ ಯಂತ್ರದೊಳಗೆ ಸಿಲುಕಿ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಅಮೆರಿಕದ ನ್ಯೂಯಾರ್ಕ್​ನಲ್ಲಿ ನಡೆದಿದೆ. ಕೀತ್ ಎಂಬ ವ್ಯಕ್ತಿ ಪತ್ನಿಗೆ ಮೊಣಕಾಲಿನ ಸ್​ಕ್ಯಾನ್​ ಮಾಡಿಸಲು ಆಸ್ಪತ್ರೆಗೆ ಕರೆತಂದಿದ್ದರು. ಅವರನ್ನು ಕೂಡ ಅದೇ ಕೋಣೆಯಲ್ಲಿ ಕೂರಿಸಿದ್ದರು. ಇನ್ನೇನು ಪತ್ನಿ ಯಂತ್ರದಿಂದ ಹೊರಬರಬೇಕು ಎನ್ನುವ ಸಮಯದಲ್ಲಿ ಅವರಿಗೆ ಸಹಾಯ ಮಾಡಲೆಂದು ಪತಿಯನ್ನು ಯಂತ್ರದ ಬಳಿ ಕರೆದಿದ್ದರು. ಕೂಡಲೇ ಇದ್ದಕ್ಕಿದ್ದಂತೆ ಯಂತ್ರ ಕೀತ್ ಅವರನ್ನು ಒಳಗೆ ಎಳೆದುಕೊಂಡಿತ್ತು. ಅದಕ್ಕೆ ಮುಖ್ಯ ಕಾರಣವೆಂದರೆ ಅವರ ಕುತ್ತಿಗೆಯಲ್ಲಿದ್ದ 9 ಕೆಜಿ ತೂಕದ ಚೈನ್!

ಸಾಮಾನ್ಯವಾಗಿ ಎಂಆರ್​ಐ ಸ್ ​ಸ್ಕ್ಯಾನ್ ಮಾಡುವಾಗ ಯಾವುದೇ ಬಗೆಯ ಆಭರಣಗಳನ್ನು ಧರಿಸಬೇಡಿ ಎಂಬುದು ಇದೇ ಕಾರಣಕ್ಕೆ. ಯಂತ್ರದಲ್ಲಿರುವ ಮ್ಯಾಗ್ನೆಟ್ ಈ ವ್ಯಕ್ತಿಯನ್ನು ಎಳೆದಿದೆ. ಅಲ್ಲಿದ್ದವರು ಎಷ್ಟೆ ಪ್ರಯತ್ನಿಸಿದರೂ ಏನೂ ಮಾಡಲು ಸಾಧ್ಯವಾಗಲಿಲ್ಲ.

ಮೃತರ ಪತ್ನಿ ಆಡ್ರಿಯಾನ್ ಜೋನ್ಸ್​ ಹೇಳುವಂತೆ ಮೊಣಕಾಲಿನ ಎಂಆರ್​ಐ ಮಾಡಿಸಿಕೊಳ್ಳುತ್ತಿದ್ದಾಗ ಪತಿ ಕೀತ್ ಮೇಜಿನಿಂದ ಇಳಿದು ಸಹಾಯ ಮಾಡಲು ಬಂದಾಗ ಇದ್ದಕ್ಕಿದ್ದಂತೆ ಯಂತ್ರವು ಅವರನ್ನು ಎಳೆದುಕೊಂಡಿದೆ. ಆದರೆ ಎಲ್ಲವೂ ಎಷ್ಟು ಬೇಗನೆ ನಡೆಯಿತು ಎಂದರೆ ಯಾರಿಗೂ ಏನೂ ಅರ್ಥವಾಗಲಿಲ್ಲ ನ್ಯೂಯಾರ್ಕ್‌ನಲ್ಲಿ ಎಂಆರ್‌ಐ ಯಂತ್ರದಿಂದ ಇದು ಮೊದಲ ಸಾವು ಅಲ್ಲ. ಇಂತಹ ಅಪಘಾತಗಳು ಈ ಹಿಂದೆಯೂ ಸಂಭವಿಸಿವೆ. 2001 ರಲ್ಲಿ, ವೆಸ್ಟ್‌ಚೆಸ್ಟರ್ ವೈದ್ಯಕೀಯ ಕೇಂದ್ರದಲ್ಲಿ 6 ವರ್ಷದ ಮಗು ಮೈಕೆಲ್ ಕೊಲಂಬಿನಿ ಸಾವನ್ನಪ್ಪಿತ್ತು.

MRI ಯಂತ್ರದಿಂದ ಹೊರತೆಗೆದ ನಂತರ ಅವರಿಗೆ ಹೃದಯಾಘಾತವಾಯಿತು. ಸ್ವಲ್ಪ ಸಮಯದ ನಂತರ, ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು ಮತ್ತು ಮರುದಿನ ಗುರುವಾರ ಮಧ್ಯಾಹ್ನ ನಿಧನರಾದರು. ಮೃತರ ಪತ್ನಿ, ತಂತ್ರಜ್ಞರು ತಮ್ಮ ಪತಿಯ ಕುತ್ತಿಗೆಯಲ್ಲಿ ಚೈನ್ ನೋಡಿಯೂ ಕೋಣೆಗೆ ಪ್ರವೇಶಿಸಲು ಹೇಗೆ ಅವಕಾಶ ಕೊಟ್ಟರು ಎಂದು ಆರೋಪಿಸಿದ್ದಾರೆ.

2001ರಲ್ಲಿ ಆಮ್ಲಜನಕ ಸಿಲಿಂಡರ್ ಎಂಆರ್‌ಐ ಯಂತ್ರದಲ್ಲಿ ಸಿಲುಕಿಕೊಂಡು ಅಪಘಾತ ಸಂಭವಿಸಿತ್ತು. ನಂತರ, ಕುಟುಂಬಕ್ಕೆ ಸುಮಾರು 24 ಕೋಟಿ ರೂ. ಪರಿಹಾರ ದೊರೆಯಿತು.

ಈ MRI ಯಂತ್ರವು ತುಂಬಾ ಬಲವಾದ ಆಯಸ್ಕಾಂತವನ್ನು ಹೊಂದಿದೆ. ಇದು ಚೈನ್, ಗಡಿಯಾರ, ಬೆಲ್ಟ್, ಕೀ, ವೀಲ್‌ಚೇರ್ ಅಥವಾ ಆಮ್ಲಜನಕ ಟ್ಯಾಂಕ್‌ನಂತಹ ಯಾವುದೇ ಕಬ್ಬಿಣ ಅಥವಾ ಉಕ್ಕಿನ ವಸ್ತುವನ್ನು ತ್ವರಿತವಾಗಿ ಎಳೆಯಬಲ್ಲದು. ತಜ್ಞರ ಪ್ರಕಾರ, MRI ಯಂತ್ರವು ತುಂಬಾ ಶಕ್ತಿಶಾಲಿಯಾಗಿದ್ದು, ಅದು ವೀಲ್‌ಚೇರ್ ಅನ್ನು ಸಹ ಕೋಣೆಯೊಳಗೆ ಎಳೆಯಬಲ್ಲದು.

MRI ಕೋಣೆಗೆ ಹೋಗುವಾಗ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಮುಖ್ಯ. ನೀವು MRI ಕೋಣೆಗೆ ಯಾವುದೇ ಲೋಹದ ವಸ್ತುವನ್ನು ತೆಗೆದುಕೊಂಡು ಹೋಗಬಾರದು ಎಂಬುದನ್ನು ನೆನಪಿನಲ್ಲಿಡಿ, ಆಭರಣ, ಸರಪಳಿ, ಬೆಲ್ಟ್ ಅಥವಾ ಮೊಬೈಲ್ ಅನ್ನು ತೆಗೆದುಕೊಳ್ಳಬಾರದು. ಸ್ವಲ್ಪ ಅಜಾಗರೂಕತೆಯು ಮಾರಕವಾಗಬಹುದು ಎಂಬುದನ್ನು ನೆನಪಿಡಿ. ಯಾವಾಗಲೂ ವೈದ್ಯರು ಮತ್ತು ತಂತ್ರಜ್ಞರ ಸೂಚನೆಗಳನ್ನು ಎಚ್ಚರಿಕೆಯಿಂದ  ಪಾಲಿಸಿ.

LEAVE A REPLY

Please enter your comment!
Please enter your name here