ತುಳುವ ಮಹಾಸಭೆಯ ಸದಸ್ಯರಾಗಿರಿ,ಉಚಿತವಾಗಿ ಕಳರಿಕ್ರಿಯೆ ಕಲಿಯಿರಿ

0
151

,ಕಟೀಲು :-ತುಳುನಾಡನ್ ಕಳರಿ ಅಂದರೆ ಅತ್ಯಂತ ಪ್ರಾಚೀನ ಸಮರಕಲೆ, ಮರ್ಮ ಚಿಕಿತ್ಸಾ ಪದ್ಧತಿಯಾಗಿದ್ದು, ಪ್ರಾಚೀನ ತುಳುನಾಡಿನ ಪ್ರದೇಶದಲ್ಲಿ ಈ ಪದ್ಧತಿ ಜನರ ಜೀವನದೊಡನೆ ನಿತ್ಯ ಅನುಷ್ಠಾನಗಳಿದ್ದವು ಎಂಬುದು ತುಳು ವರ್ಲ್ಡ್ ಸಂಸ್ಥೆಯ ಮುಖ್ಯಸ್ಥ ಡಾ. ರಾಜೇಶ್ ಆಳ್ವ ಪತ್ರಿಕೆಯೊಡನೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.


ಪ್ರಸ್ತುತ ನಶಿಸಿ ಹೋಗುತ್ತಿರುವ ಅತ್ಯಂತ ಪ್ರಾಚೀನ ತುಳುನಾಡನ್ ಕಳರಿ ಸಹಿತ ಹಲವು ಪ್ರಾಚೀನ ತುಳುನಾಡಿನ ಪದ್ಧತಿಗಳನ್ನು ಮತ್ತು ಆಚರಣೆಗಳನ್ನು ಮತ್ತೊಮ್ಮೆ ತುಳುನಾಡ ಜನರಿಗೆ ಪರಿಚಯಿಸುವ ಅವಶ್ಯಕತೆ ಇದೆ, ಮತ್ತು ಇದನ್ನು ಅತ್ಯಂತ ಜತನದಿಂದ ರಕ್ಷಿಸುವ ಹಾಗೂ ಇಂದಿನ ಜನರಿಗೆ ಕಲಿಸುವ ತುರ್ತು ಅಗತ್ಯವಿದೆ ಎಂದು ತುಳುವ ಮಹಾಸಭೆಯ ಕಾರ್ಯಾಧ್ಯಕ್ಷರೂ ಆಗಿ ಕಾರ್ಯನಿರ್ವಹಿಸುತ್ತಿರುವ ಡಾ. ಆಳ್ವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


ನಿತ್ಯ ಜೀವನದಲ್ಲಿ ತುಳುವರ ಪ್ರಾಚೀನ ಆಚರಣೆ, ಜೀವನಶೈಲಿ, ಆಹಾರ ಪದ್ಧತಿ, ಪ್ರಕೃತಿ ರಕ್ಷಣೆ ಜನರಿಗೆ ಪರಿಚಯಿಸುವುದರ ಜೊತೆಗೆ
ದೈವ ಆರಾಧನೆಗಳ ಪುನರುಜ್ಜೀವನ, ತುಳುವೇಶ್ವರ ದೇವಾಲಯ ಪುನರ್ ನಿರ್ಮಾಣ, ಭಾಷಾ–ಜಾತಿ–ಮತ ಸೌಹಾರ್ದತೆ, ತುಳುನಾಡಿನ ಸಮಗ್ರ ಅಭಿವೃದ್ಧಿ ಧೇಯದೊಂದಿಗೆ ತುಳುವ ಮಹಾಸಭೆ ಸಮಾಜಮುಖಿ ಚಿಂತನೆಗಳೊಂದಿಗೆ ಮತ್ತೊಮ್ಮೆ ನೂತನ ವ್ಯವಸ್ಥೆಯೊಂದಿಗೆ ಆರಂಭವಾಗಿದ್ದು
ಪ್ರಾರಂಭದಲ್ಲಿ ತುಳುವ ಮಹಾಸಭೆ, 1928ರಲ್ಲಿ ಎಸ್.ಯು.ಪಣಿಯಾಡಿಯವರ ನೇತೃತ್ವದಲ್ಲಿ ಸ್ಥಾಪನೆಯಾಗಿ, ತುಳು ಭಾಷೆ, ಸಂಸ್ಕೃತಿ, ಸಂಪ್ರದಾಯ ಹಾಗೂ ತುಳುವರ ಹಕ್ಕುಗಳ ಪರಿರಕ್ಷಣೆಯ ಸಂಕಲ್ಪದೊಂದಿಗೆ ಮುನ್ನಡೆದು ಇದೀಗ ಶತಮಾನೋತ್ಸವದ ಹೊಸ್ತಿಲಲ್ಲಿದೆ ತುಳುನಾಡಿನ ಪುರಾತನ ಕಳರಿ ಎಂಬುದು ಸ್ವರಕ್ಷಣೆಯ ಭಾಗವಾಗಿಯೂ , ಕಳರಿಕ್ರಿಯೆಯು ರಕ್ತದೊತ್ತಡ, ಮಧುಮೇಹ, ಹೃದ್ರೋಗದಂಥ ಹಲವಾರು ರೋಗಗಳ ನಿವಾರಣೆ ಹಾಗೂ ಬರದಂತೆ ತಡೆಯುವ ಸಂಜೀವಿನಿಯಾಗಿದೆ ಎಂದು ಇದರ ಅನುಭವ ಪಡೆದವರ ವಿಚಾರ.
ಕಳರಿಕ್ರಿಯೆ ತುಳುವ ಮಹಾಸಭೆಯ ಸದಸ್ಯರಿಗೆ ಸಂಪೂರ್ಣ ಉಚಿತವಾಗಿ ಕಲಿಸುವ ಕೆಲಸವನ್ನು ತುಳುವರ್ಲ್ಡ್ ಸಂಸ್ಥೆ ಪ್ರಾರಂಭಿಸಿದೆ.ಮುಂದಿನ ದಿನಗಳಲ್ಲಿ ತುಳು ಅಕ್ಷರಗಳನ್ನು ಓದುವುದು- ಬರೆಯುವುದನ್ನು ಉಚಿತವಾಗಿ ಕಲಿಸುವುದು, ಉಚಿತ ವಿಮೆ, ಸಹಿತ ಹಲವು ಯೋಜನೆಗಳನ್ನು.ಹಮ್ಮಿಕೊಂಡಿದೆ,
ಈ ವರ್ಷದ ಅಗಸ್ಟ್ ತಿಂಗಳ ಎರಡನೆ ವಾರದಿಂದ ಉಚಿತ ಕಳರಿಕ್ರಿಯೆ ತರಗತಿಗಳು ಆರಂಭವಾಗುತ್ತಿವೆ. ತುಳುವ ಮಹಾಸಭೆಯ ಸದಸ್ಯರಾಗಿ ಈ ಪ್ರಯೋಜನವನ್ನು ಪಡೆಯಲು ತುಳುವ ಮಹಾಸಭೆಯ ತಾಲೂಕು ಸಂಚಾಲಕರನ್ನು ಅಥವಾ ತುಳು ವರ್ಲ್ಡ್ ಸಂಸ್ಥೆ ಕಟೀಲು ಇವರನ್ನು ಸಂಪರ್ಕಿಸುವಂತೆ ತುಳುವ ಮಹಾಸಭೆಯ ಕಾರ್ಯಾಧ್ಯಕ್ಷ ಡಾ. ರಾಜೇಶ್ ಆಳ್ವ ಮತ್ತು ಸಂಚಾಲಕ ಪ್ರಮೋದ್ ಸಪ್ರೆ ವಿನಂತಿಸಿದ್ದಾರೆ.

ವರದಿ :- ಮಂದಾರ ರಾಜೇಶ್ ಭಟ್

LEAVE A REPLY

Please enter your comment!
Please enter your name here