ಕಾರ್ಕಳ: ಶಿಕ್ಷಕರಾಗುವುದು ಒಂದು ಭಾಗ್ಯ ದೇವರ ಆಶೀರ್ವಾದವಿದ್ದವರು ಮಾತ್ರ ಶಿಕ್ಷಕರಾಗಲು ಸಾಧ್ಯ ಎಂದು ದಾನಿಗಳು ಹಾಗೂ ವಿಶ್ರಾಂತ ಲೆಕ್ಕ ಪರಿಶೋಧಕರಾದ ಕಮಲಾಕ್ಷ ಕಾಮತ್ ಹೇಳಿದರು. ಕಾರ್ಕಳ ಯುವಶಕ್ತಿ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿ ನಡೆದ ಶಿಕ್ಷಕ ದಿನಾಚರಣೆಯಲ್ಲಿ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಅಧ್ಯಕ್ಷತೆಯನ್ನು ವಹಿಸಿದ್ದ ಯುವಶಕ್ತಿ ಎಜುಕೇಶನ್ ಸೊಸೈಟಿ ಅಧ್ಯಕ್ಷರಾದ ಶ್ರೀ ವಿಜಯ ಶೆಟ್ಟಿ ಮಾತನಾಡಿದರು, ಈ ಸಂದರ್ಭದಲ್ಲಿ ಶಾಲಾ ಸಂಚಾಲಕರಾದ ಶ್ರೀ ಅಬ್ದುಲ್ ಖಾಲಿಕ್ ನಿರ್ದೇಶಕರಾದ ಶ್ರೀ ವಸಂತ್ ಎಂ, ನವೀನ್ ಸುವರ್ಣ, ಮುಖ್ಯ ಶಿಕ್ಷಕಿ ಶ್ರೀಮತಿ ನಳಿನಾಕ್ಷಿ ಹೆಗ್ಡೆ, ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಚೇತನ್ ಮಹಿಳಾ ಮಂಡಲದ ಅಧ್ಯಕ್ಷರಾದ ಶ್ರೀಮತಿ ಮಮತಾ ಕುಲಾಲ್ ಉಪಸ್ಥಿತರಿದ್ದರು, ಶಿಕ್ಷಕಿ ಶ್ರೀಮತಿ ರೇಣುಕಾ ಸ್ವಾಗತಿಸಿ ಶಿಕ್ಷಕಿ, ಶ್ರೀಮತಿ ನವ್ಯ ನಿರೂಪಿಸಿದರು,ಶಿಕ್ಷಕಿ ಶ್ರೀಮತಿ ಸುಪ್ರೀತ ವಂದಿಸಿದರು.
Home Uncategorized ಶಿಕ್ಷಕರಾಗುವುದು ಒಂದು ಭಾಗ್ಯ ದೇವರ ಆಶೀರ್ವಾದವಿದ್ದವರು ಮಾತ್ರ ಶಿಕ್ಷಕರಾಗಲು ಸಾಧ್ಯ: ಕಮಲಾಕ್ಷ ಕಾಮತ್