ಮೂಡುಬಿದಿರೆ: ಇಲ್ಲಿಯ ತಾಲೂಕು ಆಡಳಿತ ಸೌಧ ಮುಂಭಾಗದ ಆರ್. ಬಿ. ಕಾಂಪ್ಲೆಕ್ಸ್ ನಲ್ಲಿ ನೂತನವಾಗಿ ನಿರ್ಮಿಸಲಾದ ಬೆದ್ರ ಸೈಬರ್ ಮತ್ತು ಜೆರಾಕ್ಸ್ ಶಾಪ್ ಶುಭಾರಂಭಗೊಂಡಿತು.
ಮೂಡುಬಿದಿರೆ ಪುರಸಭಾ ಉಪಾಧ್ಯಕ್ಷ ನಾಗರಾಜ್ ಪೂಜಾರಿ ವ್ಯವಹಾರ ಕೇಂದ್ರವನ್ನು ಉದ್ಘಾಟಿಸಿ, ಶುಭ ಹಾರೈಸಿದರು.
ಉದ್ಯಮಿ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ರಂಜಿತ್ ಪೂಜಾರಿ, ಬಿಜೆಪಿ ಮುಖಂಡರಾದ ಲಕ್ಷ್ಮಣ್ ಪೂಜಾರಿ, ಉದ್ಯಮಿ ನವೀನ್ ಹೆಗ್ಡೆ, ಸುನೀಲ್ ಕರ್ಕೇರ, ಸುಮಂತ್ ಸುವರ್ಣ, ರಿತೇಶ್, ರಾಕೇಶ್, ತನ್ವಿತ್ ಮತ್ತಿತರರು ಭಾಗವಹಿಸಿ ಶುಭ ಹಾರೈಸಿದರು. ಮಾಲಕ ಪ್ರವೀಶ್ ಕುಮಾರ್ ಅತಿಥಿ ಗಣ್ಯರನ್ನು ಸ್ವಾಗತಿಸಿ, ಸಂಸ್ಥೆಯ ಯಶಸ್ಸಿಗೆ ಸರ್ವರ ಸಹಕಾರ ಕೋರಿದರು.

