ಬೆಳಾಲು : ಪಶು ಸಂಗೋಪನೆ ಮತ್ತು ಪಶು ವೈದ್ಯ ಸೇವಾ ಇಲಾಖೆ ಬೆಳ್ತಂಗಡಿ ಹಾಗೂ ಗ್ರಾಮ ಪಂಚಾಯಿತ್ ಬೆಳಾಲು ಇದರ ಸಹಯೋಗದಲ್ಲಿ ನ. 06 ರಂದು ನಾಯಿ ಹಾಗೂ ಬೆಕ್ಕುಗಳಿಗೆ ಉಚಿತ ಹುಚ್ಚು ನಾಯಿ ನಿರೋಧಕ ಲಸಿಕ ಕಾರ್ಯಕ್ರಮವನ್ನು ಬೆಳಾಲು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ವಿದ್ಯಾ ಶ್ರೀನಿವಾಸ್ ಗೌಡ ಇವರು ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ಉಜಿರೆ ಪಶು ಪಶುವೈದ್ಯಕೀಯ ಪರೀಕ್ಷಕರಾದ ಸಚಿನ್, ಪಶು ಸಖಿ ಯಶೋಧ ಗ್ರಾಮ ಪಂಚಾಯತ್ ಸಿಬ್ಬಂದಿಗಳು ಹಾಗೂ ಊರವರು ಉಪಸ್ಥಿತರಿದರು .ಈ ಸಂದರ್ಭದಲ್ಲಿಬೆಳಾಲು ಗ್ರಾಮದ 265 ನಾಯಿಗಳಿಗೆ ಉಚಿತ ಲಸಿಕೆಯನ್ನು ನೀಡಲಾಯಿತು

