ಗಾಯಾಳು ಚಿಕಿತ್ಸೆಗೆ ನೆರವಾಗಿ ಮಾನವೀಯತೆ ಮೆರೆದ ಬೆಳಪು ಗ್ರಾ.ಪಂ. ಅಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ

0
218

ಕಾಪು: ಬೆಳಪು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಡಾ. ದೇವಿ ಪ್ರಸಾದ್ ಶೆಟ್ಟಿಯವರು ಮಾನವೀಯತೆ ಮೆರೆದಿದ್ದಾರೆ.
ಬೆಳಪು ಗ್ರಾಮದ ಮಲಂಗೋಳಿಯಲ್ಲಿ ಮೊನ್ನೆ ಸುರಿದ ಧಾರಾಕಾರ ಮಳೆಗೆ ಮನೆ ಕುಸಿದು ಬಿದ್ದು ಶೋಭಾ ಪೂಜಾರಿಯವರು ತೀವ್ರ ಗಾಯಗೊಂಡು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಸಂತ್ರಸ್ತೆಯ ಮನೆಗೆ ತೆರಳಿ ಡಾ.ದೇವಿ ಪ್ರಸಾದ್ ಶೆಟ್ಟಿಯವರು ಸಹಾಯಧನದ ಚೆಕ್ ವಿತರಿಸಿ ಸಾಂತ್ವಾನ ಹೇಳಿ ಮನೆಯವರಿಗೆ ಧೈರ್ಯ ತುಂಬಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶೋಭಾ ಭಟ್ , ಪಂಚಾಯತ್ ಸದಸ್ಯರಾದ ಸುಲೇಮಾನ್, ಶರತ್ ಕುಮಾರ್ , ಸೌಮ್ಯ , ಸುರೇಂದ್ರ ಪಣಿಯೂರು , ಕುಟ್ಟಿ ಮೂಲ್ಯ ಬಡಿಕೇರಿ , ರಾಜೇಶ್ ಪಯ್ಯಾರ್, ಜನಾರ್ದನ ಕುಲಾಲ್ ಪಣಿಯುರು, ಶಂಕರ್ ಕುಲಾಲ್ ಬೆಳಪು, ಅಮೀರ್ ಬೆಳಪು , ಹನೀಫ್ ಬೆಳಪು, ವಿಜಯಲಕ್ಷ್ಮಿ, ಸುಮನ ,ಮಲ್ಲಿಕಾ ,ಭೋಜ, ಜನಾರ್ದನ ಆಚಾರ್ಯ ಹಾಗೂ ಸೂರ್ಯನಗರ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here